ಚಿತ್ರದುರ್ಗ: ಜಿಲ್ಲೆಯಲ್ಲಿರುವ ಎಲ್ಲ ಕೆರೆಗಳ ಸರ್ವೇ ನಡೆಸಿ ಕೆರೆಗಳ ಒತ್ತುವರಿ ತೆರವು ಮಾಡಿ ಜಲಮೂಲಗಳ ಸಂರಕ್ಷಣೆಗೆ ಒತ್ತು ನೀಡಬೇಕು ಎಂದು ಜಿಲ್ಲಾ ಧಿಕಾರಿ ಕವಿತಾ ಎಸ್. ಮನ್ನಿಕೇರಿ ಸೂಚಿಸಿದರು. ಜಿಲ್ಲಾಧಿ ಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಕೆರೆ ಸಂರಕ್ಷಣೆ ಸಮಿತಿ ಸಭೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯ ಕೆರೆಗಳಿಗೆ ಸಂಬಂಧಪಟ್ಟಂತೆ ಕೆರೆ ಸರ್ವೇ ಕಾರ್ಯ ಮತ್ತು ತ್ವರಿತವಾಗಿ ಒತ್ತುವರಿ ತೆರವುಗೊಳಿಸಿ ಕೆರೆಗಳ ಸುತ್ತ ಗಡಿ ಗುರುತಿಸಬೇಕು. ಕೆರೆಯ ಸುತ್ತ 30 ಮೀಟರ್ ಬಫರ್ ಜೋನ್ ಗುರುತಿಸಿ. ಬಫರ್ ಜೋನ್ ಪ್ರದೇಶದಲ್ಲಿ ಯಾವುದೇ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳಿಗೆ ಅನುಮತಿ ನೀಡುವಂತಿಲ್ಲ ಎಂದರು.
ಒತ್ತುವರಿಯಾಗಿರುವ ಕೆರೆಗಳ ಮಾಹಿತಿ, ಜಂಗಲ್ ಕ್ಲಿನಿಂಗ್ ಜೊತೆಗೆ ಕೆರೆಗಳ ಸಂರಕ್ಷಣೆಗಾಗಿ ಬೌಂಡ್ರಿ ಟ್ರೆಂಚ್ ನಿರ್ಮಿಸಲು ಕ್ರಿಯಾ ಯೋಜನೆ ತಯಾರಿಸುವಂತೆ ಅ ಧಿಕಾರಿಗಳಿಗೆ ತಾಕೀತು ಮಾಡಿದರು. ಕೆರೆಗಳ ಒತ್ತುವರಿಯನ್ನು ತೆರವು ಮಾಡಿ ಸಂರಕ್ಷಣೆ ಮಾಡಬೇಕೆಂದು ಈಗಾಗಲೇ ಕೋರ್ಟ್ ಸೂಚಿಸಿದ್ದು, ಇದರ ವರದಿ ನೀಡಬೇಕಾಗಿದೆ. ಕೆರೆಗಳ ಸರ್ವೆ ಕಾರ್ಯ ಕೈಗೊಂಡು ಒತ್ತುವರಿ ತೆರವು ಮಾಡಲೇಬೇಕಾಗಿದೆ ಎಂದರು. ಈ ವೇಳೆ ಅಧಿ ಕಾರಿಗಳು, ಕೆಲವೆಡೆ ಒತ್ತುವರಿ ಮಾಡಿಕೊಂಡು ತೋಟ, ಮನೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಧಿಕಾರಿಗಳು, ವಾಸಕ್ಕೆ ಬೇರೆ ಮನೆಯೇ ಇಲ್ಲವೆಂದರೆ ಅವರಿಗೆ ಗ್ರಾಪಂನಿಂದ ಮನೆ ಕೊಡಿಸಿ ತೆರವು ಮಾಡಬೇಕು. ಆದರೆ ಮನೆ ನಿರ್ಮಾಣ ಮಾಡಿದ್ದಾರೆ ಎಂದು ತೆರವು ಮಾಡದೇ ಬಿಡುವಂತಿಲ್ಲ. ಈ ವಿಚಾರದಲ್ಲಿ ಸರಿಯಾಗಿ ಕೆಲಸ ಮಾಡದವರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿ ಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧಿಧೀಶ ಬಿ.ಕೆ. ಗಿರೀಶ್ ಮಾತನಾಡಿ, ಚಳ್ಳಕೆರೆ ತಾಲೂಕಿನ ನಗರಂಗೆರೆ ಕೆರೆ ಒತ್ತುವರಿಯಾಗಿದೆ. ಒತ್ತುವರಿಯಾಗಿರುವುದನ್ನು ಶೀಘ್ರದಲ್ಲಿ ತೆರವುಗೊಳಿಸಬೇಕು ಹಾಗೂ ಕೆರೆಗಳಲ್ಲಿ ಮಳೆ ಬಂದರೂ ನೀರು ನಿಲ್ಲದಂತೆ ಹೊರಗೆ ಹೋಗಲು ಬಿಡುತ್ತಿರುವ ಬಗ್ಗೆ ಗಮನಿಸಲು ಅ ಧಿಕಾರಿಗಳಿಗೆ ಸೂಚಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಧಿಕಾರಿಗಳು, ಒತ್ತುವರಿಯಾಗಿರುವ ಕೆರೆಗಳನ್ನು ತೆರವುಗೊಳಿಸಲು ಕ್ರಮ ವಹಿಸಬೇಕು. ಕೆರೆಗಳ ಸಂರಕ್ಷಣೆಗೆ ಒತ್ತು ನೀಡಿ, ಕೆರೆಗಳಿಗೆ ಮಲಿನ ನೀರು ಸೇರದಂತೆ ರಕ್ಷಣೆ ಮಾಡಬೇಕು. ಈ ನಿಟ್ಟಿನಲ್ಲಿ ಅಧಿ ಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿ ಕಾರದ ಜಿಲ್ಲಾ ಕಾರ್ಯನಿರ್ವಹಣಾ ಧಿಕಾರಿ ದೇಶಮುಖ್ ಮಾತನಾಡಿ, ಜಲಮೂಲಗಳಿಗೆ ತೊಂದರೆ ಉಂಟಾಗುವ ಒತ್ತುವರಿ ತೆರವುಗೊಳಿಸುವುದು, ಘನತ್ಯಾಜ್ಯಗಳನ್ನು ಸುರಿಯುವುದನ್ನು ಪ್ರತಿಬಂಧಿ ಸುವುದು, ಮಲಿನ ನೀರು ಜಲಮೂಲಗಳಿಗೆ ಸೇರುವುದನ್ನು ತಡೆಯುವುದು ಸಮಿತಿಯ ಉದ್ದೇಶವಾಗಿದೆ ಎಂದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸತೀಶ್ ರೆಡ್ಡಿ, ಪ್ರಾದೇಶಿಕ ಅರಣ್ಯ ಅ ಧಿಕಾರಿಗಳು, ಸಣ್ಣ ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರು, ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರು, ತಹಶೀಲ್ದಾರರು, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿ ಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿ ಕಾರಿಗಳು ಇದ್ದರು.