ಚಿತ್ರದುರ್ಗ: ನಾಡಿನ ಜನತೆ ಕೋವಿಡ್ ಹಾಗೂ ನೆರೆ ಹಾವಳಿಯಿಂದ ತತ್ತರಿಸಿದ್ದಾರೆ. ಮಠಾ ಧೀಶರು ಹಾಗೂ ರಾಜಕಾರಣಿಗಳು ಜನರ ನೆರವಿಗೆ ಧಾವಿಸಬೇಕು ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಕರೆ ನೀಡಿದರು. ಗೋಕಾಕ ತಾಲೂಕಿನ ಅಡಿಬಟ್ಟಿ ಗ್ರಾಮದಲ್ಲಿ 500ಕ್ಕೂ ಹೆಚ್ಚು ಪ್ರವಾಹ ಸಂತ್ರಸ್ಥರಿಗೆ ಗುರುವಾರ ಆಹಾರ ಕಿಟ್ ವಿತರಿಸಿ ಮಾತನಾಡಿದರು. ಒಂದು ಕಡೆ ಕೊರೊನಾ ಸೃಷ್ಟಿಸಿದ ಅಸಹಾಯಕತೆಯಿಂದ ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡರು. ಕರ್ನಾಟಕದಲ್ಲಿ ಇನ್ನೂ ಸೋಂಕು ಕಡಿಮೆಯಾಗಿಲ್ಲ.
ಅದು ಭೀಕರತೆ ಸೃಷ್ಟಿ ಮಾಡಿತ್ತು. ಅಲ್ಲದೆ ಅತಿಯಾಗಿ ಮಳೆ ಸುರಿದು ನದಿ, ಕೆರೆಗಳು ಹರಿದು, ಊರು-ಕೇರಿಗೆ ತೊಂದರೆ ಮಾಡಿರುವುದು ಅಪಾಯ ಉಂಟು ಮಾಡಿದ್ದು ವಿಷಾದನೀಯ ಎಂದರು. ಕೊರೊನಾ ಸೋಂಕು, ಪ್ರವಾಹದಿಂದ ಮಾನವ ಜೀವನ ತತ್ತರಿಸಿ ತೊಂದರೆಗೊಳಗಾಗಿದೆ. ಇಂಥ ಸಂದರ್ಭದಲ್ಲಿ ಜನರಿಗೆ ಯಾವ ರೀತಿ ಸಾಂತ್ವನ ಹೇಳಬೇಕು. ಅಲ್ಲದೆ ಸಮಾಜದಿಂದ ಕೆಲವು ಪ್ರಶ್ನೆಗಳು ಬರುತ್ತವೆ. ಸಂತರ, ಸ್ವಾಮೀಜಿಗಳ ಕಾರ್ಯವೇನು ಎಂದ ಮುರುಘಾ ಶರಣರು, ನಾಡಿಗೆ ದುಃಖ, ಸಮಸ್ಯೆ ಬಂದಾಗ ಧೈರ್ಯ, ಆತ್ಮಸ್ಥೈರ್ಯ ತುಂಬುವುದು ಅಗತ್ಯ ಎಂದರು.
ಶೂನ್ಯ ಸಂಪಾದನಾ ಮಠದ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಕರ್ನಾಟಕದಲ್ಲಿ ಚಿತ್ರದುರ್ಗದ ಮುರುಘಾ ಮಠ ಅಗ್ರಗಣ್ಯ ಮಠವಾಗಿದೆ. ಪೀಠಾ ಧಿಪತಿಗಳಾದ ಡಾ| ಶಿವಮೂರ್ತಿ ಶರಣರು ಗೋಕಾಕ ತಾಲೂಕಿನ ಅಡಿಬಟ್ಟಿ ಗ್ರಾಮದಲ್ಲಿ ನೆರೆ ಹಾವಳಿಯಿಂದ ತತ್ತರಿಸಿದ ಸಂತ್ರಸ್ತರಿಗೆ ಸಾಂತ್ವನ ಹೇಳಲು ಆಗಮಿಸಿರುವುದು ಸಂತಸದ ತಂದಿದೆ ಎಂದು ತಿಳಿಸಿದರು.
ಪ್ರಕೃತಿಯ ವಿಕೋಪಕ್ಕೆ ಅಡಿಬಟ್ಟಿ ಗ್ರಾಮಸ್ಥರು ದುಃಖದಲ್ಲಿ¨ªಾರೆ. ಮುರುಘಾ ಶರಣರ ಆಶೀರ್ವಾದ ನಮ್ಮ ನಿಮ್ಮೆಲ್ಲರ ಮೇಲೆ ಸದಾ ಇರಲಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಸ್ವಾಮೀಜಿ, ಘಟಪ್ರಭಾದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಬಿಜೆಪಿ ಮುಖಂಡರಾದ ಬಸವರಾಜ ಕಡಾಡಿ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ : ಬಂಟ್ವಾಳ: ರೈಲ್ವೆ ಹಳಿಯ ಮೇಲೆ ಯುವಕನ ಮೃತದೇಹ ಪತ್ತೆ