ಚಿತ್ರದುರ್ಗ: ಕಂದಾಯ ಇಲಾಖೆ ಕಟ್ಟ ಕಡೆಯ ನಾಗರಿಕನವರೆಗೆ ತಲುಪವಂತಹ ಇಲಾಖೆ. ಆದರೆ ಈ ಇಲಾಖೆ ಮೇಲೆ ಅನೇಕ ದೂರುಗಳು ಕೇಳಿ ಬರುತ್ತಿದ್ದು, ಮುಂದೆ ಹೀಗಾಗದಂತೆ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಜಿಲ್ಲಾಧಿ ಕಾರಿ ಕವಿತಾ ಎಸ್. ಮನ್ನಿಕೇರಿ ಹೇಳಿದರು.
ರಾಜ್ಯ ಕಂದಾಯ ಇಲಾಖೆ ನೌಕರರ ಸಂಘ, ರಾಜ್ಯ ಗ್ರಾಮ ಲೆಕ್ಕಾ ಕಾರಿಗಳ ಸಂಘ ಹಾಗೂ ಜಿಲ್ಲಾ ಶಾಖೆಗಳ ಸಹಯೋಗದಲ್ಲಿ ತಾಲೂಕು ಕಚೇರಿ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಂದಾಯ ದಿನಾಚರಣೆ ಹಾಗೂ ಹಸಿರೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೇರೆಯವರಿಗೆ ಕೇಳಿದ್ದನ್ನೆಲ್ಲಾ ಕೊಡುವ ಕಂದಾಯ ಇಲಾಖೆ ಮಾತ್ರ ಸೋರುತ್ತಿರುವುದು ವಿಪರ್ಯಾಸ. ಕಂದಾಯ ಇಲಾಖೆ ಹೇಗಿದ್ದರೂ ಪರವಾಗಿಲ್ಲ, ಕಷ್ಟ ಸಹಿಸಿಕೊಂಡು ಜನಸೇವೆಯಲ್ಲಿ ತೊಡಗುತ್ತಿದ್ದೀರಿ. ಜನಸೇವೆಗೆ ನಿಮ್ಮ ಸಮಯವನ್ನು ಮುಡಿಪಾಗಿಡಿ. ಗ್ರಾಮಲೆಕ್ಕಾಧಿ ಕಾರಿಗಳು ನೈಜ ಸೈನಿಕರಿದ್ದಂತೆ. ಧೈರ್ಯವಾಗಿ ಮುನ್ನುಗಿ ಜನರ ಕೆಲಸ ಮಾಡಿ. ನಿಮ್ಮ ಹಿಂದೆ ನಾವಿದ್ದೇವೆ ಎಂದರು.
ಉಪವಿಭಾಗಾ ಧಿಕಾರಿ ಚಂದ್ರಯ್ಯ ಮಾತನಾಡಿ, ಕಟ್ಟ ಕಡೆಯ ವ್ಯಕ್ತಿಗೆ ಸೇವೆ ಮಾಡುವ ಅವಕಾಶ ಕಂದಾಯ ಇಲಾಖೆ ನೌಕರರಿಗೆ ಮಾತ್ರ ಇದೆ. ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಕಂದಾಯ ಇಲಾಖೆ ಸಿಬ್ಬಂದಿಗಳು ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಕಂದಾಯ ಇಲಾಖೆಗೆ ತನ್ನದೇ ಆದ ಮಹತ್ವವಿದೆ ಎಂದು ತಿಳಿಸಿದರು.
ಜಿಲ್ಲಾ ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಶರಣಪ್ಪ ಮಾತನಾಡಿ, ಕಂದಾಯ ಇಲಾಖೆ ಬೇರೆಯವರಿಗೆ ಸೇವೆ ಮಾಡುವುದಕ್ಕಾಗಿಯೇ ಮುಡುಪಾಗಿದೆ. ಈ ನಿಟ್ಟಿನಲ್ಲಿ ಯಾವುದೇ ದೂರು ಇಲಾಖೆಯ ಮೇಲೆ ಬರದಂತೆ ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ಗ್ರಾಮಲೆಕ್ಕಾ ಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಗ್ರಾಮಲೆಕ್ಕಾ ಧಿಕಾರಿಗಳ ಸಂಘದ ಅಧ್ಯಕ್ಷ ಸಿದ್ದೇಶ್, ಉಪತಹಶೀಲ್ದಾರ್ ಪರಶುರಾಮ್, ಗ್ರಾಮಲೆಕ್ಕಾಧಿ ಕಾರಿಗಳ ಸಂಘದ ಗೌರವಾಧ್ಯಕ್ಷ ಪಾಂಡುರಂಗಪ್ಪ, ರಾಜಸ್ವ ನಿರೀಕ್ಷಕ ನವೀನ್ ಮತ್ತಿತರರು ಇದ್ದರು.