ಮೊಳಕಾಲ್ಮೂರು: ದೇಶದ ಅಭಿವೃದ್ಧಿಗೆ ಡಾ| ಶ್ಯಾಮಪ್ರಸಾದ್ ಮುಖರ್ಜಿಯವರ ಕೊಡುಗೆ ಅಪಾರ ಎಂದು ಸಮಾಜಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಹೇಳಿದರು.
ತಾಲೂಕಿನ ತಮ್ಮೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುರುಡಿ ಗ್ರಾಮದಲ್ಲಿ ಡಾ| ಶ್ಯಾಮಪ್ರಸಾದ್ ಮುಖರ್ಜಿಯವರ ಪುಣ್ಯಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ ವೃಕ್ಷಾರೋಪಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಡಾ| ಶ್ಯಾಮಪ್ರಸಾದ್‌ರವರು ಬಿಜೆಪಿ ಬೆಳವಣಿಗೆಗೆ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ನಿರಂತರವಾಗಿ ಶ್ರಮಿಸಿದ್ದಾರೆ ಎಂದು ಸ್ಮರಿಸಿದರು.
ಮನುಕುಲ ಹಾಗೂ ಸಕಲ ಜೀವರಾಶಿಗಳ ಉಳಿವಿಗೆ ಪರಿಸರ ಸಂಪತ್ತನ್ನು ಸಂರಕ್ಷಿಸಬೇಕಾಗಿದೆ. ಗಿಡ ಮರಗಳಿಂದ ಸಿಗುವ ಆಕ್ಸಿಜನ್ ತುಂಬಾ ಪ್ರಯೋಜನಕಾರಿಯಾಗಿದೆ. ಕೊರೊನಾ ಸೇರಿದಂತೆ ಇನ್ನಿತರ ರೋಗಗಳಿಂದ ನರಳುವ ರೋಗಿಗಳಿಗೆ ಆಕ್ಸಿಜನ್ ಮೌಲ್ಯಯುತವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಗಿಡ- ಮರಗಳನ್ನು ಬೆಳೆಸಿ ಸಂರಕ್ಷಿಸಬೇಕು. ಬಿಜೆಪಿ ಮಂಡಲ ವತಿಯಿಂದ ಒಂದು ಸಾವಿರ ಕ್ಕೂ ಹೆಚ್ಚಿನ ಸಸಿಗಳನ್ನು ನೆಡುವ ಯೋಜನೆ ರೂಪಿಸಲಾಗಿದೆ. ಜುಲೈ 6 ರವರೆಗೂ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಂಡು ಪರಿಸರ ಸಂರಕ್ಷಣೆಗೆ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.
ಬಿಜೆಪಿ ಮಂಡಲಾಧ್ಯಕ್ಷ ಡಾ| ಪಿ.ಎಂ. ಮಂಜುನಾಥ, ತಮ್ಮೇನಹಳ್ಳಿ ಗ್ರಾಪಂ ಅಧ್ಯಕ್ಷ ಗುರುಲಿಂಗಪ್ಪ, ರಾಂಪುರ ಗ್ರಾಪಂ ಅಧ್ಯಕ್ಷ ಎಲ್. ಪರಮೇಶ್ವರಪ್ಪ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ. ಲಕ್ಷ್ಮಣ, ಬಿಜೆಪಿ ನಗರ ಘಟಕದ ಅಧ್ಯಕ್ಷ ಕಿರಣ್ ಗಾಯಕವಾಡ್, ಎಸ್‌ಟಿ ಮೋರ್ಚಾದ ತಿಪ್ಪೇಸ್ವಾಮಿ, ಪದಾ ಧಿಕಾರಿಗಳಾದ ಮಾರಣ್ಣ, ತಿಪ್ಪೇಸ್ವಾಮಿ, ಕುಮಾರ್, ಹನುಮಂತಪ್ಪ, ಮೃತ್ಯುಂಜಯ ಉಪಸ್ಥಿತರಿದ್ದರು.