ಚಿತ್ರದುರ್ಗ: ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣಕ್ಕಾಗಿ ಜೂನ್ 14 ರವರೆಗೆ ವಿ ಸಿದ್ದ ಲಾಕ್ ಡೌನ್ ಪರಿಷ್ಕರಿಸಿದ್ದು, ಜೂ.21 ರವರೆಗೆ ಪರಿಷ್ಕೃತ ಮಾರ್ಗಸೂಚಿ ಜಾರಿಯಲ್ಲಿರಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಜಿ. ರಾಧಿಕಾ ಹೇಳಿದರು.
ಭಾನುವಾರ ಎಸ್ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ರೂಪಿಸಿರುವ ಪರಿಷ್ಕೃತ ಮಾರ್ಗಸೂಚಿಯಂತೆ ವಾಣಿಜ್ಯ ಉದ್ದಿಮೆಗಳು, ಕಟ್ಟಡ ನಿರ್ಮಾಣ, ಕೃಷಿ, ಕೈಗಾರಿಕೆ ಹಾಗೂ ಇನ್ನಿತರ ಪೂರಕ ಚಟುವಟಿಕೆಗಳಿಗೆ ವಿ ಧಿಸಿದ್ದ ನಿರ್ಬಂಧ ಸಡಿಸಲಾಗಿದೆ ಎಂದರು.
ಪ್ರತಿ ದಿನ ಬೆಳಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ ಅನುಮತಿ ಇರುವ ವಹಿವಾಟುಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ನಿತ್ಯ ರಾತ್ರಿ 7 ರಿಂದ ಮರುದಿನ ಮುಂಜಾನೆ 5 ರವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ವಾರಾಂತ್ಯವಾದ ಶುಕ್ರವಾರ ರಾತ್ರಿ 7 ರಿಂದ ಸೋಮವಾರ ಮುಂಜಾನೆ 5 ರವರೆಗೆ ಎಂದಿನಂತೆ ವಾರಾಂತ್ಯ ಕರ್ಫ್ಯೂ ಕೂಡ ಜಾರಿಯಲ್ಲಿರಲಿದೆ. ಆದರೆ ವಾರಾಂತ್ಯದ ಎರಡು ದಿನಗಳ ಕಾಲ ಎಂದಿನಂತೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಕೊರೊನಾ ಸಂಪೂರ್ಣ ಹತೋಟಿಗೆ ಬರುವ ತನಕ ಜನತೆ ಅನಗತ್ಯವಾಗಿ ಮನೆಯಿಂದ ಹೊರಗೆ ಬರಬಾರದು. ಖರೀ ಸಂದರ್ಭದಲ್ಲಿ ದಟ್ಟಣೆಯಾಗದಂತೆ ನೋಡಿಕೊಳ್ಳಬೇಕು. ಸಾಮಾಜಿಕ ಅಂತರ, ಮಾಸ್ಕ್ ಹಾಗೂ ಸ್ಯಾನಿಟೆ„ಸರ್ ಬಳಕೆ ಬಗ್ಗೆ ಮೈಮರೆಯಬಾರದು ಎಂದರು. ಪಾರ್ಕ್‌ಗಳಲ್ಲಿ ಬೆಳಗ್ಗೆ 5 ರಿಂದ 10 ರವರೆಗೆ ವಾಯುವಿಹಾರಕ್ಕೆ ಇಂದಿನಿಂದ ಅವಕಾಶವಿದೆ.
ಹೋಟೆಲ್, ದಿನಸಿ ಸೇರಿದಂತೆ ಅಗತ್ಯ ಉದ್ದಿಮೆಗಳಲ್ಲಿ ಮನೆಗೆ ಡೆಲಿವರಿ ನೀಡಲು ಹೆಚ್ಚು ಆದ್ಯತೆ ನೀಡಬೇಕು ಎಂದು ಉದ್ದಿಮೆದಾರರಿಗೆ ಮನವಿ ಮಾಡಿದರು. ಕೆಲ ಸರ್ಕಾರಿ ಕಚೇರಿಗಳು ಶೇ. 50 ಹಾಜರಾತಿಯೊಂದಿಗೆ ಕಾರ್ಯನಿರ್ವಹಿಸಲಿವೆ. ಹೊರಗೆ ಹೋಗುವ ಅನಿವಾರ್ಯತೆ ಇದ್ದರೆ ಸಕಾರಣದೊಂದಿಗೆ ಆಟೋ ಮತ್ತು ಟ್ಯಾಕ್ಸಿಗಳಲ್ಲಿ ಇಬ್ಬರು ಪ್ರಯಾಣಿಸಬಹುದು. ಮದುವೆ ಹಾಗೂ ಅಂತ್ಯಕ್ರಿಯೆಗೆ ನಿಗ ದಿ ಮಾಡಿರುವುದಕ್ಕಿಂತ ಹೆಚ್ಚು ಜನ ಸೇರಬಾರದು ಎಂದರು.