ಚಳ್ಳಕೆರೆ: ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪದಕ ಪಡೆದ ಉಪವಿಭಾಗದ ಡಿವೈಎಸ್ಪಿ ಕೆ.ವಿ.ಶ್ರೀಧರ್ ಅವರನ್ನು ಇಲ್ಲಿನ ದಲ್ಲಾಲರ ಸಂಘದ ವತಿಯಿಂದ ಅಭಿನಂದಿಸಲಾಯಿತು. ಸಂಘದ ಅಧ್ಯಕ್ಷ ಕೆ.ಎಂ.ಅರವಿಂದಕುಮಾರ್ ಮಾತನಾಡಿ, ಚಳ್ಳಕೆರೆ ಉಪವಿಭಾಗದಲ್ಲಿ ಹಲವಾರು ಡಿವೈಎಸ್ಪಿಗಳು ಕಾರ್ಯನಿರ್ವಹಿಸಿದ್ದಾರೆ.
ಆದರೆ, ವಿಶೇಷವಾಗಿ ಡಿವೈಎಸ್ಪಿ ಕೆ.ವಿ.ಶ್ರೀಧರ್ ಮುಖ್ಯಮಂತ್ರಿಗಳ ಪದಕ ಪಡೆಯುವ ಮೂಲಕ ಜಿಲ್ಲೆ ಹಾಗೂ ತಾಲೂಕಿಗೆ ಹೆಸರು ತಂದಿರುತ್ತಾರೆ. ಬೆಂಗಳೂರಿನಲ್ಲಿ ಗುಪ್ತವಾರ್ತೆಯಲ್ಲಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಅವರು ಮಾಡಿದ
ಸೇವೆಯನ್ನು ಪರಿಗಣಿಸಲಾಗಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಿವೈಎಸ್ಪಿ ಕೆ.ವಿ. ಶ್ರೀಧರ್, ಪೊಲೀಸ್ ಇಲಾಖೆಯಲ್ಲಿ ಕೇವಲ ಒಬ್ಬ ವ್ಯಕ್ತಿಯಿಂದ ಮಾತ್ರ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳ ಪದಕ ಪಡೆಯುವಷ್ಟು ಮಟ್ಟಿಗೆ ಸಾಧನೆಯಾಗಿದ್ದರೆ ಅದರ ಎಲ್ಲಾ ಕೀರ್ತಿ ಪೊಲೀಸ್ ಇಲಾಖೆಯ ಎಲ್ಲಾ ಹಂತದ ಅ ಧಿಕಾರಿಗಳಿಗೆ ಸಲ್ಲುತ್ತದೆ. ಪೊಲೀಸ್ ಇಲಾಖೆಯ ಮೇಲೆ ತಾವೆಲ್ಲರೂ ವಿಶೇಷ ಗೌರವವಿಟ್ಟು ಸನ್ಮಾನಿಸಿದ್ದೀರಿ, ನಿಮ್ಮ ಸಮಸ್ಯೆಗಳಿಗೆ
ಸಕಾರಾತ್ಮಕವಾಗಿ ಇಲಾಖೆ ಕಾನೂನಿನ ಚೌಕಟ್ಟಿನಡಿ ಸ್ಪಂದಿಸಲಾಗುವುದು ಎಂದರು.
ದಲ್ಲಾಲರ ಸಂಘದ ನಿರ್ದೇಶಕರು, ಎಪಿಎಂಸಿ ನಾಮಿನಿ ನಿರ್ದೇಶಕರಾದ ಡಿ.ಎಂ.ತಿಪ್ಪೇಸ್ವಾಮಿ, ಬಿ.ಎಂ. ಶ್ರೀನಿವಾಸ್, ವೆಂಕಟ ನಾಗರಾಜು ಮುಂತಾದವರು ಉಪಸ್ಥಿತರಿದ್ದರು.
ಓದಿ : ಮದ್ಯ ನಿಷೇಧಕ್ಕೆ ಆಗ್ರಹಿಸಿ ಮಹಿಳೆಯರ ಪ್ರತಿಭಟನೆ