Advertisement
ರೈತರಾದ ನಾಗರಾಜ್ ಎರಡು ಎಕರೆ ಹಾಗೂ ಕರಿಬಸಪ್ಪ ಒಂದೂಕಾಲು ಎಕರೆ ನೀರಾವರಿ ಜಮೀನಿನಲ್ಲಿ ಹುರುಳಿಕಾಯಿ ಬಿತ್ತನ ಮಾಡಲಾ ಗಿತ್ತು. ಅಶೋಕ ಸೀಡ್ಸ್ ಕಂಪನಿಗೆ ಸೇರಿದ ಹುರುಳಿಕಾಯಿ ಬೀಜಗಳನ್ನು ಸಿರಿಗೆರೆ ಗ್ರಾಮದ ಖಾಸಗಿ ಆಗ್ರೋ ಸೀಡ್ಸ್ ಒಂದರಲ್ಲಿ ಮಾರ್ಚ್ ತಿಂಗಳಲ್ಲಿ ತಲಾ 25 ಕೆಜಿ ತೂಕದ ಆರು ಬ್ಯಾಗ್, 15 ಕೆಜಿ ತೂಕದ 4 ಬ್ಯಾಗ್ ಬಿತ್ತನೆ ಬೀಜ ಖರೀದಿಸಲಾಗಿತ್ತು. ಪ್ರತಿ ವರ್ಷ ಹುರುಳಿಕಾಯಿ ಬೆಳೆದು ಅನುಭವ ಇದ್ದ ಈ ಇಬ್ಬರು ರೈತರು ಹೆಚ್ಚಿನ ಶ್ರಮ ಹಾಕಿದ್ದರು.
Related Articles
Advertisement
ಲಾಕ್‌ಡೌನ್ ನಡುವೆ ಸಾಲ ಮಾಡಿ ಹುರುಳಿಕಾಯಿ ಬೆಳೆಯಲು ಹೋದರೆ ಕಳಪೆ ಬಿತ್ತನೆ ಬೀಜಕ್ಕೆ ತುತ್ತಾಗಿ ನಮ್ಮ ಬದುಕು ಮೂರಾಬಟ್ಟೆಯಾಗಿದೆ. ನಮಗೆ ಆಗಿರುವ ಅನ್ಯಾಯ ಬೇರೆ ಯಾರಿಗೂ ಆಗಬಾರದು. ಕನಿಷ್ಠ ಸೌಜನ್ಯಕ್ಕೂ ಜಮೀನಿಗೆ ಭೇಟಿ ನೀಡಿ ಕಂಪನಿಯವರು ಪರಿಶೀಲನೆ ನಡೆಸಲಿಲ್ಲ. ಕೃಷಿ ಇಲಾಖೆ ಮತ್ತು ಸರ್ಕಾರ ನಮಗೆ ಆಗಿರುವ ಅನ್ಯಾಯಕ್ಕೆ ಪರಿಹಾರ ಕೊಡಿಸಬೇಕು.
ಕರಿಬಸಪ್ಪ, ಅಳಗವಾಡಿ ರೈತ
ಬಳ್ಳಿಯಲ್ಲಿ ಕಾಯಿ ಬಿಡದೇ ಇರುವ ಕುರಿತು ಆಗ್ರೋ ಸೀಡ್ಸ್ ಅಂಗಡಿ, ಅಶೋಕ ಸೀಡ್ಸ್ ಬಿತ್ತನೆ ಬೀಜ ಪೂರೈಸುವ ಕಂಪನಿಯ ಪ್ರಕಾಶ್ ಮತ್ತು ಮಧು ಎಂಬುವವರನ್ನು ಸಂಪರ್ಕಿಸಿದ್ದೇವೆ. ಅವರು ಹಾರಿಕೆ ಉತ್ತರ ನೀಡಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಯಾರೊಬ್ಬರು ಜಮೀನಿಗೆ ಭೇಟಿ ನೀಡಿ ನಮ್ಮ ಕಷ್ಟ ಕೇಳಲಿಲ್ಲ. ಹೀಗಾಗಿ ಕಣ್ಣಲ್ಲಿ ಕಣ್ಣಿಟ್ಟು ಬೆಳೆಸಿದ ಬಳ್ಳಿಯನ್ನು ನೋಡಲಾಗದೆ ನಾಶಪಡಿಸಿದ್ದೇವೆ. ಇಂತಹ ಕಳಪೆ ಬೀಜ ಪೂರೈಸುವ ಕಂಪನಿಗಳ ವಿರುದ್ಧ ಕೃಷಿ ಇಲಾಖೆ ಕ್ರಮ ಕೈಗೊಳ್ಳಬೇಕು.
ನಾಗರಾಜ್, ಅಳಗವಾಡಿ ರೈತ
ಅಳಗವಾಡಿ ರೈತರ ಜಮೀನುಗಳಿಗೆ ಭೇಟಿ ನೀಡಿ ಬಳ್ಳಿಯಲ್ಲಿ ಕಾಯಿ ಬಿಡದಿರುವುದನ್ನು ಪರಿಶೀಲಿಸಿ ಮಾದರಿಗಳನ್ನು ಕಂಪನಿಗೆ ಕಳುಹಿಸುತ್ತೇನೆ. ರೈತರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತೇನೆ.
ಪ್ರಕಾಶ್, ಅಶೋಕ ಸೀಡ್ಸ್ ಬೀಜ ಪೂರೈಕೆದಾರರು, ಚಿತ್ರದುರ್ಗ