Advertisement

ಪ್ರಕೃತಿ ಮೇಲಿನ ದೌರ್ಜನ್ಯ ನಿಲ್ಲಲಿ

09:40 PM Jun 06, 2021 | Team Udayavani |

ಚಿತ್ರದುರ್ಗ: ಮಾನವ ಪ್ರಕೃತಿಯಿಂದಲೇ ಜನಿಸಿ ಪ್ರಕೃತಿಯ ಮೇಲೆಯೇ ಸದಾ ದೌರ್ಜನ್ಯ ನಡೆಸುತ್ತಿದ್ದಾನೆ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ಮುರುಘಾಮಠ, ಎಸ್‌.ಜೆ.ಎಂ ಶಾಂತಿ ಮತ್ತು ಪ್ರಗತಿ ಫೌಂಡೇಶನ್‌ ಸಹಯೋಗದಲ್ಲಿ ನಡೆದ ಸಾಮೂಹಿಕ ಕಲ್ಯಾಣ ಮಹೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರಿಗೂ ತಾಯಿ ಎಂದರೆ ಪ್ರಕೃತಿ ಮಾತೆ. ಪ್ರಖೃತಿ ಮಾತೆಯ ಮೇಲೆ ದೌರ್ಜನ್ಯ ನಡೆದರೆ ಎಲ್ಲಿಯವರೆಗೆ ಸಹನೆ ಮಾಡಿಕೊಳ್ಳಲು ಸಾಧ್ಯವಿದೆ, ಪ್ರಕೃತಿಯಲ್ಲಿ ದೇವರನ್ನು ಕಾಣಬೇಕು ಎಂದರು.

ಕೆಲವು ದಶಕಗಳ ಹಿಂದೆ ವಿಶ್ವಸಂಸ್ಥೆ ಜೂನ್‌ 5ನೇ ತಾರೀಖನ್ನು ವಿಶ್ವ ಪರಿಸರ ದಿನವನ್ನಾಗಿ ಆಚರಿಸಲು ಸುತ್ತೋಲೆ ಹೊರಡಿಸಿತು. ಇಂದಿಗೂ ಸಹ 5ನೇ ತಾರೀಖನ್ನು ವಿಶ್ವಪರಿಸರ ದಿನವನ್ನಾಗಿ ಆಚರಿಸುತ್ತಿಆದರೆ ಇಂದು ಜಗತ್ತು ಯಂತ್ರ ಮತ್ತು ಯಾಂತ್ರಿಕವಾಗಿದೆ. ಕೃತಕವಾಗಿರುವ ಜೀವನ ಇಂದು ನಡೆಯುತ್ತಿದೆ. ಸಹಜ ಜೀವನದಿಂದ ಮಾನವ ದೂರ ಸರಿಯುತ್ತಿದ್ದಾನೆ. ಪ್ರಕೃತಿ ಸೂಸುತ್ತಿರುವ ಶುದ್ಧ ಗಾಳಿಯನ್ನು ಸೇವಿಸುತ್ತ ಪರಿಸರವನ್ನು ಮಲಿನಗೊಳಿಸುವ ಕೆಲಸ ನಡೆಯುತ್ತಿದೆ.

ಹಾಗಾಗಿ ಎಲ್ಲದರಲ್ಲಿಯೂ ಮಾಲಿನ್ಯ ಉಂಟಾಗುತ್ತಿದೆ ಎಂದು ವಿಷಾದಿಸಿದರು. ಮುಖ್ಯ ಅತಿಥಿ ಪಟೇಲ್‌ ಶಿವಕುಮಾರ್‌ ಮಾತನಾಡಿ, ಕೊರೊನಾ ಕಾಲದಲ್ಲಿ ನಮಗೆ ಆಕ್ಸಿಜನ್‌ ಬಹಳ ಮುಖ್ಯವಾಗಿದೆ. ಹಾಗಾಗಿ ನಾವು ಪರಿಸರವನ್ನು ಉಳಿಸಿ ಬೆಳೆಸಬೇಕಿದೆ. ಅದಕ್ಕಾಗಿ ಆದಷ್ಟು ಗಿಡ-ಮರಗಳನ್ನು ಬೆಳೆಸಬೇಕಾದ ಅಗತ್ಯತೆ ನಮಗಿದೆ ಎಂದರು. ಪರಿಸರ ದಿನದ ಅಂಗವಾಗಿ ಅತಿಥಿಗಳಿಗೆ, ವಧು-ವರರಿಗೆ ಸಸಿಗಳನ್ನು ವಿತರಿಸಲಾಯಿತು ಹಾಗೂ ಶ್ರೀಮಠದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಧು-ವರರು ಸಸಿಗಳನ್ನು ನೆಟ್ಟರು. ಮತ್ತೋರ್ವ ಅತಿಥಿ ಸಿದ್ದಾಪುರದ ಜಯದೇವ ಕಂಪನಿಯ ಎಸ್‌.ವಿ. ನಾಗರಾಜಪ್ಪ ವೇದಿಕೆಯಲ್ಲಿದ್ದರು.

ಎಸ್‌ ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಕೆಇಬಿ ಷಣ್ಮುಖಪ್ಪ, ಎನ್‌. ತಿಪ್ಪಣ್ಣ, ಮುರುಗೇಶ್‌ ಮತ್ತಿತರರು ಇದ್ದರು. ಉಮೇಶ್‌ ಪತ್ತಾರ್‌ ಪ್ರಾರ್ಥಿಸಿದರು. ಜ್ಞಾನಮೂರ್ತಿ ಸ್ವಾಗತಿಸಿದರು. ಹರೀಶ್‌ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next