ಚಿತ್ರದುರ್ಗ: ಕೊರೊನಾ ಪಾಸಿಟಿವ್ ಬಂದು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವವರು ಹೊರಗೆ ಓಡಾಡುತ್ತಿರುವುದರಿಂದ ಸೋಂಕು ಹೆಚ್ಚು ಹರಡುತ್ತಿದೆ. ರೋಗದ ತೀವ್ರತೆ ಆಧರಿಸಿ ಅವರನ್ನು ಹಾಸ್ಟೆಲ್ ಅಥವಾ ಕೋವಿಡ್ ಕೇರ್ ಸೆಂಟರ್‌ಗಳಿಗೆ ಸ್ಥಳಾಂತರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಸೂಚಿಸಿದರು.
ಜಿಲ್ಲಾ ಧಿಕಾರಿ ಕಚೇರಿಯಲ್ಲಿ ಬುಧವಾರ ಶಾಸಕರು, ಜಿಲ್ಲಾ ಧಿಕಾರಿ, ಜಿಪಂ ಸಿಇಒ, ಜಿಲ್ಲಾ ರಕ್ಷಣಾ ಧಿಕಾರಿ ಹಾಗೂ ಆರೋಗ್ಯ ಇಲಾಖೆ ಅ ಧಿಕಾರಿಗಳೊಂದಿಗೆ ನಡೆಸಿದ ಕೋವಿಡ್ ನಿರ್ವಹಣೆ ಕುರಿತ ಸಭೆಯಲ್ಲಿ ಅವರು ಮಾತನಾಡಿದರು. ಒಂದೇ ಮನೆಯಲ್ಲಿಯೇ ನಾಲ್ಕೈದು ಜನರು ಮರಣ ಹೊಂದುತ್ತಿರುವುದರಿಂದ ಈಗಿರುವ ಹಾಸ್ಟೆಲ್ ಗಳನ್ನು ಕೋವಿಡ್ ಕೇರ್ ಸೆಂಟರ್‌ಗಳನ್ನಾಗಿ ಪರಿವರ್ತಿಸಿ ಮನೆಯ ಬದಲಾಗಿ ಕೋವಿಡ್ ಕೇರ್ ಸೆಂಟರ್, ಡೆಡಿಕೇಟೆಡ್ ಕೋವಿಡ್ ಕೇರ್ ಸೆಂಟರ್, ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಿ ಎಂದರು.
ಎರಡನೇ ಅಲೆ ತೀವ್ರತರನಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಪರೀûಾ ವರದಿ ವಿಳಂಬವಾದಾಗ ರೋಗಿಗಳು ಮನೆಯಲ್ಲಿ ಪ್ರತ್ಯೇಕವಾಗಿರುವ ಬದಲು ಎಲ್ಲರೊಂದಿಗೆ ಹಾಗೂ ಹೊರಗಡೆ ಓಡಾಟ ಮಾಡುತ್ತಿರುವುದರಿಂದ ಬೇರೆಯವರಿಗೆ ಇದು ಹರಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ರೋಗದ ಹರಡುವಿಕೆಗೆ ಬ್ರೇಕ್ ಹಾಕಲು ಜಿಲ್ಲೆಗೆ ಹೆಚ್ಚುವರಿಯಾಗಿ ಆರ್‌ಟಿಪಿಸಿಆರ್ ಲ್ಯಾಬ್ ಗೆ 3 ಕೋಟಿ ರೂ., ಇದಕ್ಕೆ ಬೇಕಾದ ಲ್ಯಾಬ್ ಪರಿಕರ, ಉಪಯೋಗಿಸುವ ಸಾಮಗ್ರಿ 4 ಕೋಟಿ ರೂ., ಕೋವಿಡ್ ಆಸ್ಪತ್ರೆಗಳ ನಿರ್ವಹಣೆಗೆ 5 ಕೋಟಿ, ವೈದ್ಯಕೀಯ ರಕ್ಷಣಾ ಪರಿಕರ, ಗಹ ರಕ್ಷಕ ಸಿಬ್ಬಂದಿ ವೇತನ, ವಾಹನಗಳು ಸೇರಿದಂತೆ 6.8 ಕೋಟಿ ರೂ. ಹಾಗೂ ಎಚ್.ಎಫ್. ಎನ್.ಸಿ. ಮಶಿನ್‌ಗಾಗಿ 1.20 ಕೋಟಿ ರೂ. ಸೇರಿದಂತೆ 20 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಅನುಮೋದನೆ ನೀಡಲು ಆರೋಗ್ಯ ಇಲಾಖೆ ಆಯುಕ್ತರು ಕ್ರಮ ಕೈಗೊಂಡಿದ್ದಾರೆ ಎಂದು ಅಧಿ ಕಾರಿಗಳು ಮಾಹಿತಿ ನೀಡಿದರು.
ಹೆಚ್ಚುವರಿಯಾಗಿ 200 ಬೆಡ್: ಜಿಲ್ಲಾ ಆಸ್ಪತ್ರೆಯಲ್ಲಿ ಈಗಾಗಲೇ 175 ಆಕ್ಸಿಜನ್‌ನೆಟೆಡ್ ಬೆಡ್‌ಗಳಿವೆ. ಇದರೊಂದಿಗೆ ಇನ್ನೂ 200 ಆಕ್ಸಿಜನ್‌ನೆಟೆಡ್ ಬೆಡ್ ಗಳನ್ನು ನಿರ್ಮಾಣ ಮಾಡುತ್ತಿದ್ದು, ಇದಕ್ಕೆ ಬೇಕಾದ ಆಕ್ಸಿಜನ್ ಅನ್ನು ಪ್ರತ್ಯೇಕ ಯುನಿಟ್ ಮೂಲಕ ಪೂರೈಕೆ ಮಾಡಲು ಘಟಕ ಸ್ಥಾಪನೆ ಮಾಡಲಾಗುತ್ತಿದೆ. ಇದಕ್ಕೆ ಅನುಮೋದನೆ ನೀಡಿದ್ದು ತಕ್ಷಣವೇ ಕಾರ್ಯಾರಂಭ ಮಾಡಲು ಜಿಲ್ಲಾ ಧಿಕಾರಿಗೆ ತಿಳಿಸಿದ ಸಚಿವರು, ಪ್ರತಿ ನಿತ್ಯ ಈಗಿರುವ ಬೇಡಿಕೆಯನ್ವಯ 7 ಕೆ.ಎಲ್. ಆಕ್ಸಿಜನ್ ಬೇಕಾಗಿದೆ. ಇದರ ಪೂರೈಕೆಗೆ ಸಚಿವ ಜಗದೀಶ್ ಶೆಟ್ಟರ್ ಒಪ್ಪಿಗೆ ನೀಡಿದ್ದಾರೆ. ಒಂದೆರಡು ದಿನಗಳಲ್ಲಿ ಸಮರ್ಪಕವಾಗಿ ಪೂರೈಕೆ ಮಾಡಲು ಭರವಸೆ ನೀಡಿದ್ದು ಕೊರತೆ ನಿವಾರಣೆಯಾಗಲಿದೆ ಎಂದರು. ಜಿಲ್ಲೆಗೆ ಪ್ರತಿನಿತ್ಯ ಬೇಕಾಗುವ ರೆಮ್‌ಡಿಸಿವರ್ ಹಾಗೂ ಇತರೆ ಜೀವ ರಕ್ಷಕ ಔಷಧಗಳನ್ನು ಸಮರ್ಪಕವಾಗಿ ಪೂರೈಕೆ ಮಾಡಲು ಉಪ ಮುಖ್ಯಮಂತ್ರಿ ಜತೆಗೆ ಚರ್ಚಿಸಲಾಗಿದೆ.
ಒಂದೆರಡು ದಿನಗಳಲ್ಲಿ ಬೇಡಿಕೆಯಷ್ಟು ಔಷಧಗಳನ್ನು ಸಹ ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ಔಷಧಗಳು ಕಾಳಸಂತೆಯಲ್ಲಿ ಮಾರಾಟವಾಗದಂತೆ ವಿಶೇಷ ಜಾಗೃತ ದಳವನ್ನು ನೇಮಕ ಮಾಡಿ ಪ್ರತಿ ತಾಲೂಕಿಗೆ ಹಾಗೂ ಪ್ರತ್ಯೇಕ ವ್ಯವಸ್ಥೆಗಾಗಿ ನೋಡಲ್ ಅ ಧಿಕಾರಿಗಳನ್ನು ನೇಮಕ ಮಾಡಿ ಜವಾಬ್ದಾರಿ ವಹಿಸಲು ಜಿಲ್ಲಾ ಧಿಕಾರಿಗೆ ಸೂಚನೆ ನೀಡಿದರು. ಜಿಪಂ ಸಿಇಒ ಡಾ| ಕೆ. ನಂದಿನಿದೇವಿ, ಜಿಲ್ಲಾ ರಕ್ಷಣಾಧಿ ಕಾರಿ ಜಿ. ರಾಧಿ ಕಾ, ಅಪರ ಜಿಲ್ಲಾ ಧಿಕಾರಿ ಇ. ಬಾಲಕೃಷ್ಣ, ಡಿಎಚ್‌ಒ ಡಾ| ಫಾಲಾಕ್ಷ, ಜಿಲ್ಲಾ ಸರ್ಜನ್ ಡಾ| ಬಸವರಾಜಪ್ಪ, ಜಿಲ್ಲಾ ಸರ್ವೇಕ್ಷಣಾಧಿ ಕಾರಿ ಡಾ| ರಂಗನಾಥ್ ಮತ್ತಿತರರು ಇದ್ದರು.