ಚಿತ್ರದುರ್ಗ: ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆ ತೀವ್ರವಾಗಿ ಹರಡುತ್ತಿದ್ದು, ಈಗಾಗಲೇ ಜಿಲ್ಲಾಸ್ಪತ್ರೆಯಲ್ಲಿ 175 ಆಕ್ಸಿಜನ್ ಬೆಡ್ ಗಳನ್ನು ನಿರ್ಮಾಣ ಮಾಡಲಾಗಿದೆ. ಇದರೊಂದಿಗೆ ಹೆಚ್ಚುವರಿಯಾಗಿ 200 ಬೆಡ್‌ಗಳ ನಿರ್ಮಾಣಕ್ಕೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ ಎಂದು ಸಂಸದ ಎ. ನಾರಾಯಣಸ್ವಾಮಿ ತಿಳಿಸಿದರು.
ಜಿಲ್ಲಾ ಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಆರೋಗ್ಯಾಧಿ ಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಉಂಟಾಗಬಾರದು, ಪೂರೈಕೆ ನಿರಂತರವಾಗಿರಬೇಕು. ಯಾವುದೇ ಕೋವಿಡ್ ರೋಗಿಗಳು ಉಸಿರಾಟದ ಸಮಸ್ಯೆ ಎದುರಿಸುವ ಮುಂಚಿತವಾಗಿ ಇದನ್ನು ತಡೆಯಲು ಅಗತ್ಯವಿರುವ ಔಷಧೋಪಚಾರ ಮಾಡಿಕೊಳ್ಳಬೇಕು. ರೋಗಿಗಳಿಗೆ ಮೊದಲೇ ಜೀವರಕ್ಷಕ ಔಷ ಧ ನೀಡುವುದರಿಂದ ಅವರಿಗೆ ಉಸಿರಾಟದ ಸಮಸ್ಯೆ ಬರುವುದಿಲ್ಲ. ಉಸಿರಾಟದ ಸಮಸ್ಯೆ ಬಂದಾಗ ಆಗುವ ತೊಂದರೆ ಕಡಿಮೆ ಮಾಡಲು ಇಂತಹ ಔಷ ಧಗಳನ್ನು ಮೊದಲೇ ರೋಗಿಗಳಿಗೆ ನೀಡಿ, ಆಕ್ಸಿಜನ್ ಮೇಲಿನ ಅವಲಂಬನೆ ಕಡಿಮೆ ಮಾಡಿಕೊಳ್ಳಲು ಸೂಚನೆ ನೀಡಿದರು. ಚಿತ್ರದುರ್ಗಕ್ಕೆ ಬಳ್ಳಾರಿ, ಹೊಸಪೇಟೆ ಹಾಗೂ ದಾವಣಗೆರೆಯಿಂದ ಆಕ್ಸಿಜನ್ ಪೂರೈಕೆಯಾಗುತ್ತಿದ್ದು, ಅಲ್ಲಿನ ಜಿಲ್ಲಾ ಧಿಕಾರಿಗಳು ಇತರೆ ಜಿಲ್ಲೆಗಳಿಗೆ ಪೂರೈಕೆ ಮಾಡುವುದರ ಬಗ್ಗೆ ನಿರ್ಬಂಧ ವಿಧಿ ಸಿ ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಸರ್ಕಾರದ ಗಮನಕ್ಕೆ ತಂದು ಆಕ್ಸಿಜನ್ ಪೂರೈಕೆಗೆ ಕ್ರಮ ವಹಿಸಲಾಗುವುದು. ಆದರೆ ನಮ್ಮ ಜಿಲ್ಲೆಗೆ ಎಷ್ಟು ಪ್ರಮಾಣದ ಆಕ್ಸಿಜನ್ ಬೇಕಾಗಿದೆ ಎಂಬ ದಿನನಿತ್ಯದ ಬೇಡಿಕೆ ಪಟ್ಟಿ ನೀಡಬೇಕು ಎಂದು ಆರೋಗ್ಯಾ ಧಿಕಾರಿಗಳಿಗೆ ಸೂಚಿಸಿದರು. ಕೋವಿಡ್ ರೋಗಿಗಳಿಗೆ ಅಗತ್ಯವಿರುವ ಸ್ಟೀರಾಯ್ಡ, ರೆಮ್‌ಡಿಸಿವಿರ್ ಕೊರತೆಯಾಗದಂತೆ ಪ್ರತಿನಿತ್ಯವೂ ಇಂಡೆಂಟ್ ಕಳುಹಿಸಿ ಪಡೆದುಕೊಳ್ಳಬೇಕು ಎಂದು ಸಹಾಯಕ ಔಷ ಧ ನಿಯಂತ್ರಣಾ ಧಿಕಾರಿಗಳಿಗೆ ತಿಳಿಸಿದರು.
ಜಿಲ್ಲೆಯಲ್ಲಿ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿನ ಸಮುದಾಯ ಆರೋಗ್ಯ ಕೇಂದ್ರಗಳು ಸೇರಿದಂತೆ ಒಟ್ಟು 16 ಕಡೆ ಡೆಡಿಕೇಟೆಡ್ ಕೋವಿಡ್ ಹೆಲ್ತ್ ಸೆಂಟರ್ ಆರಂಭಿಸಲಾಗಿದೆ. ಪ್ರತಿ ಕೇಂದ್ರದಲ್ಲೂ 30 ಆಕ್ಸಿಜನೇಟೆಡ್ ಬೆಡ್‌ಗಳನ್ನು ಆರಂಭಿಸಲಾಗುತ್ತಿದೆ ಎಂದು ಡಿಎಚ್‌ಒ ಡಾ| ಪಾಲಾಕ್ಷ ಮಾಹಿತಿ ನೀಡಿದರು. ಸರ್ಕಾರ ಮಟ್ಟದ ವೈದ್ಯಕೀಯ ಸಲಹಾ ಸಮಿತಿ ನೀಡಿರುವ ಪ್ರೋಟೊಕಾಲ್ ಅನ್ವಯ ಪ್ರತಿ ಕೋವಿಡ್ ರೋಗಿಗೆ ಚಿಕಿತ್ಸೆ ನೀಡಲು ಕ್ರಮ ವಹಿಸಲು ಎಲ್ಲ ವೈದ್ಯಾ ಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲು ಸಂಸದರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ| ಕೆ. ನಂದಿನಿದೇವಿ, ಅಪರ ಜಿಲ್ಲಾ ಧಿಕಾರಿ ಈ. ಬಾಲಕೃಷ್ಣ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಎಚ್.ಜೆ. ಬಸವರಾಜ್, ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಅ ಧೀಕ್ಷಕ ಡಾ| ಪಾಲಾಕ್ಷ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.