Advertisement

ರಸ್ತೆಯಲ್ಲಿ ಜನರ ಓಡಾಟ ಜೋರು

09:34 PM May 04, 2021 | Team Udayavani |

ಚಿತ್ರದುರ್ಗ: ಕೊರೊನಾ ಎರಡನೇ ಅಲೆ ಹರಡುವುದನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಜಾರಿಗೊಳಿಸಿರುವ ಜನತಾ ಕರ್ಫ್ಯೂ ಮಧ್ಯಾಹ್ನದವರೆಗೆ ಸಡಿಲವಾದಂತೆ ಕಾಣುತ್ತಿದೆ. ಜನಜಂಗುಳಿ ಸೇರುತ್ತಾರೆ ಎಂಬ ಕಾರಣಕ್ಕೆ ಸರ್ಕಾರ ತನ್ನ ತೀರ್ಮಾನ ಬದಲಿಸಿ ಬೆಳಗ್ಗೆ 6 ರಿಂದ 10 ಗಂಟೆ ವರೆಗೆ ಇದ್ದ ಅಗತ್ಯ ವಸ್ತುಗಳ ಖರೀದಿ  ಅವಧಿ ಯ ಬದಲಾಗಿ ಬೆಳಗ್ಗೆ 6 ರಿಂದ 12 ಗಂಟೆವರೆಗೆ ಕೆಲ ಚಟುವಟಿಕೆಗಳಿಗೆ ಇದ್ದ ನಿರ್ಬಂಧವನ್ನು ಸಡಿಲಗೊಳಿಸಿದೆ.

Advertisement

ಇದನ್ನೇ ನೆಪ ಮಾಡಿಕೊಂಡ ಕೆಲವರು ಮಧ್ಯಾಹ್ನ 12 ಗಂಟೆವರೆಗೆ ರಸ್ತೆಯಲ್ಲಿ ಓಡಾಡುತ್ತಿರುವುದು ಕಂಡು ಬಂತು. ಅಂಗಡಿ ಮುಂಗಟ್ಟುಗಳು, ತರಕಾರಿ ಅಂಗಡಿಗಳು ತೆರೆದಿದ್ದವು. ಅನೇಕರು ಬ್ಯಾಂಕ್‌ ಪಾಸ್‌ಪುಸ್ತಕ ಹಿಡಿದುಕೊಂಡು ಬ್ಯಾಂಕಿನ ಕೆಲಸ ಎಂದು ಹೇಳುತ್ತಾ ರಸ್ತೆಗೆ ಬರುತ್ತಿದ್ದರು. ಮತ್ತೂಂದೆಡೆ ಕಳೆದ ಮೂರು ದಿನಗಳಿಂದ ಬ್ಯಾಂಕುಗಳಿಗೆ ರಜೆ ಇದ್ದ ಪರಿಣಾಮ ಬ್ಯಾಂಕುಗಳ ಮುಂದೆ ಜನರ ಗುಂಪು ನೆರೆದಿತ್ತು. ನಗರದ ಕೆನರಾ ಬ್ಯಾಂಕ್‌ ಮುಂದೆ ಸಾಮಾಜಿಕ ಅಂತರ ಮರೆತು ಗುಂಪುಗೂಡಿದ್ದು ಗೋಚರಿಸಿತು.

ಎಪಿಎಂಸಿ ವಹಿವಾಟು ಆರಂಭ: ಕೋವಿಡ್‌ ಮಾರ್ಗಸೂಚಿ ಕಾರಣಕ್ಕೆ ಕಳೆದ ನಾಲ್ಕು ದಿನಗಳಿಂದ ವ್ಯಾಪಾರ ವಹಿವಾಟು ನಡೆಸದೆ ಮೌನವಾಗಿದ್ದ ಚಿತ್ರದುರ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸೋಮವಾರ ಕಾರ್ಯಾರಂಭ ಮಾಡಿತು. ಬೆಳಗ್ಗೆ 6 ರಿಂದ 10 ರವರೆಗೆ ಮಾತ್ರ ವ್ಯಾಪಾರ ವಹಿವಾಟಿಗೆ ಕಾಲಾವಕಾಶ ನೀಡಿದ್ದರಿಂದ ವರ್ತಕರು ಇಷ್ಟು ಕಡಿಮೆ ಸಮಯದಲ್ಲಿ ವ್ಯಾಪಾರ ಮಾಡಲು ಸಾಧ್ಯವಿಲ್ಲ, ಬದಲಾಗಿ ಕಾಲಾವಕಾಶ ಹೆಚ್ಚಿಸಿ ಎಂದು ಮನವಿ ಮಾಡಿಕೊಂಡಿದ್ದರು.

ಈ ಬಗ್ಗೆ “ಉದಯವಾಣಿ’ ಪತ್ರಿಕೆ ಬೆಳಕು ಚೆಲ್ಲಿತ್ತು. ಇದೇ ವೇಳೆ ಸರ್ಕಾರ ತನ್ನ ಪಟ್ಟು ಸಡಿಲಿಸಿ ಬೆಳಗ್ಗೆ 6 ರಿಂದ ಮಧ್ಯಾಹ್ನ 12 ರವರೆಗೆ ಕಾಲಾವಕಾಶ ಹೆಚ್ಚಿಸಿದ್ದರಿಂದ ಸೋಮವಾರ ನಸುಕಿನಲ್ಲೇ ಎಪಿಎಂಸಿ ವಹಿವಾಟು ಆರಂಭಗೊಂಡಿತು. ಸೂರ್ಯಕಾಂತಿ, ಶೇಂಗಾ, ಮೆಕ್ಕೆಜೋಳ, ಕಡಲೆ ಸೇರಿದಂತೆ ವಿವಿಧ ಬೆಳೆಗಳನ್ನು ರೈತರು ಮಾರುಕಟ್ಟೆಗೆ ತಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next