Advertisement

ಹಿರಿಯೂರಿನ 30 ಕಡೆ ಬ್ಯಾರಿಕೇಡ್‌ ಅಳವಡಿಕೆ

06:12 PM May 02, 2021 | Team Udayavani |

ಹಿರಿಯೂರು: ನಗರದಲ್ಲಿ ಅನವಶ್ಯಕವಾಗಿ ಓಡಾಡುವ ವಾಹನಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸುಮಾರು 30 ಕಡೆಗಳಲ್ಲಿ ಬ್ಯಾರಿಕೇಡ್‌ ಅಳವಡಿಸಲಾಗುವುದು ಎಂದು ಡಿವೈಎಸ್‌ಪಿ ರೋಷನ್‌ ಜಮೀರ್‌ ಹೇಳಿದರು.

Advertisement

ನಗರದಲ್ಲಿ ಡಿವೈಎಸ್‌ಪಿ ಕಚೇರಿಯಲ್ಲಿ ನಡೆದ ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತರಕಾರಿ, ಹೂವು, ಹಣ್ಣು ಮಾರಾಟಕ್ಕೆ ಬಬ್ಬೂರಿನ ಎಪಿಎಂಸಿ ಆವರಣದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಜನರು ಅಗತ್ಯ ವಸ್ತು ಕೊಳ್ಳಲು ನಿಗದಿತ ಸಮಯದಲ್ಲಿ ಮಾತ್ರ ಓಡಾಟ ಮಾಡಬಹುದು. ವಿನಾಕಾರಣ ಓಡಾಡುವ ವಾಹನ ಸವಾರರ ವಾಹನಗಳನ್ನು ಸೀಜ್‌ ಮಾಡಿ ಕಾನೂನು ಕ್ರಮ ಜರುಗಿಸಲಾಗುವುದು.

ಕೊರೊನಾ ಮಾರ್ಗಸೂಚಿ ಅನುಸರಿಸದೇ ಇರುವ ಅಂಗಡಿ ಮಾಲೀಕರುಗಳಿಗೆ ಹಾಗೂ ವರ್ತಕರುಗಳಿಗೆ ದಂಡ ವಿಧಿ ಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಸಿಪಿಐ ರಾಘವೇಂದ್ರ ಮಾತನಾಡಿ, ಪ್ರತಿ ವಾರ್ಡ್‌ಗೂ ಸ್ಯಾನಿಟೈಜೇಷನ್‌ ಮಾಡುವಾಗ ಆ ಭಾಗದ ಚುನಾಯಿತ ಪ್ರತಿನಿ ಧಿಗಳು ಪಾಲ್ಗೊಳ್ಳಿ. ಅನಗತ್ಯವಾಗಿ ಓಡಾಡುವ ವಾಹನ ಸವಾರರ ಮೇಲಿನ ಪ್ರಕರಣಗಳಲ್ಲಿ ಅಥವರ ಪರವಾಗಿ ಜನಪ್ರತಿನಿಧಿಗಳ ವಕಾಲತ್ತು ಬೇಡ.

ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ಎಲ್ಲರೂ ಸಹಕಾರ ನೀಡಬೇಕು ಎಂದು ಕೋರಿದರು. ಸಿಪಿಐ ವಿ.ಎಸ್‌. ಶಿವಕುಮಾರ್‌ ಮಾತನಾಡಿ, ತಾಲೂಕಿನಲ್ಲಿ ಕೊರೊನಾ ಸಾವು-ನೋವು ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಬಿಗಿ ಕ್ರಮ ಕೈಗೊಳ್ಳಬೇಕಾಗಿದೆ. ಆದ್ದರಿಂದ ಕೊರೊನಾ ನಿಯಂತ್ರಿಸಲು ಅನವಶ್ಯಕವಾಗಿ ಗುಂಪು ಸೇರದಂತೆ ನೋಡಿಕೊಳ್ಳಬೇಕು. ಈ ವಿಚಾರದಲ್ಲಿ ಪೊಲೀಸ್‌ ಇಲಾಖೆಯೊಂದಿಗೆ ಸಹಕರಿಸಿ. ತಮ್ಮ ವಾರ್ಡ್‌ಗಳಲ್ಲಿ ಅನುಮತಿ ಇಲ್ಲದೆ ನಡೆಯುವ ಕಾರ್ಯಕ್ರಮಗಳ ಬಗ್ಗೆ ಇಲಾಖೆ ಗಮನಕ್ಕೆ ತರಬೇಕು ಎಂದರು. ಸಭೆಯಲ್ಲಿ ತಹಶೀಲ್ದಾರ್‌ ಸತ್ಯನಾರಾಯಣ, ಪೌರಾಯುಕ್ತೆ ಟಿ. ಲೀಲಾವತಿ, ಆರೋಗ್ಯ ನಿರೀಕ್ಷಕ ಅಂಜಿನಪ್ಪ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಚಿತ್ರಜಿತ್‌ ಯಾದವ್‌, ನಗರಸಭೆ ಸದಸ್ಯರುಗಳಾದ ಅಂಬಿಕಾ ಆರಾಧ್ಯ, ಸಣ್ಣಪ್ಪ, ಮಂಜುಳಾ, ಕೇಶವಮೂರ್ತಿ, ಬಿ.ಎನ್‌. ತಿಪ್ಪೇಸ್ವಾಮಿ, ಸಿ.ಎಂ. ಸ್ವಾಮಿ, ಜಿ. ನಾಗರಾಜ, ಮಹಿಪಾಲ್‌, ಚಿರಂಜೀವಿ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next