Advertisement

ಗ್ರಾಪಂನಿಂದ ಸ್ಯಾನಿಟೈಸರ್‌ ಸಿಂಪಡಣೆ

08:35 PM Apr 30, 2021 | Team Udayavani |

ಭರಮಸಾಗರ: ಕೊರೊನಾ ಕರ್ಫ್ಯೂ ನಡುವೆ ಇಲ್ಲಿನ ಗ್ರಾಪಂ ವತಿಯಿಂದ ಪ್ರಮುಖ ಸರ್ಕಾರಿ ಕಚೇರಿಗಳು, ಪೆಟ್ರೋಲ್‌ ಬಂಕ್‌, ಖಾಸಗಿ ಆಸ್ಪತ್ರೆಗಳು ಸೇರಿದಂತೆ ಮುಖ್ಯ ರಸ್ತೆಯಲ್ಲಿ ಸ್ಯಾನಿಟೈಸರ್‌ ಸಿಂಪಡಣೆ ಕಾರ್ಯ ನಡೆಸಲಾಯಿತು. ಕೊರೊನಾ ಕರ್ಫ್ಯೂ ಎರಡನೇ ದಿನವಾದ ಗುರುವಾರ ಗ್ರಾಮ ಪಂಚಾಯತ್‌ ವತಿಯಿಂದ ಬ್ಯಾಂಕ್‌, ಪೊಲೀಸ್‌ ಠಾಣೆ, ಸರ್ಕಾರಿ ಕಾಲೇಜು, ನಾಡಕಚೇರಿ, ಹಾಸ್ಟೆಲ್‌, ಎಪಿಎಂಸಿ ಕಚೇರಿ, ರೈತ ಸಂಪರ್ಕ ಕೇಂದ್ರ, ಖಾದಿ ಗ್ರಾಮೋದ್ಯೋಗ ಕೇಂದ್ರ, ಅಂಗನವಾಡಿ ಕೇಂದ್ರಗಳು, ಶಾಲಾ ಕಾಲೇಜುಗಳಲ್ಲಿ ಸ್ಯಾನಿಟೈಸರ್‌ ಸಿಂಪಡಿಸಲಾಯಿತು.

Advertisement

ಮುಖ್ಯ ರಸ್ತೆಯ ಪೆಟ್ರೋಲ್‌ ಬಂಕ್‌, ಕೆಇಬಿ ಕಚೇರಿ, ವ್ಯವಸಾಯ ಸೇವಾ ಸಹಕಾರ ಸಂಘ, ಎಟಿಎಂ ಕೇಂದ್ರಗಳು, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಸೇರಿದಂತೆ ಖಾಸಗಿ ಆಸ್ಪತ್ರೆಗಳ ಕ್ಲಿನಿಕ್‌ ಗಳು ಸೇರಿದಂತೆ ಹೆಚ್ಚು ಜನರ ಒಡನಾಟವಿರುವ ಸ್ಥಳಗಳಲ್ಲಿ ಸ್ಯಾನಿಟೈಸರ್‌ ಸಿಂಪಡಿಸಿ ರೋಗಕಾರರಗಳ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಗ್ರಾಮ ಪಂಚಾಯತ್‌ ವತಿಯಿಂದ ನಡೆಸಲಾಯಿತು.

ಗ್ರಾಮ ಪಂಚಾಯತ್‌ ಸದಸ್ಯ ಶ್ರೀನಿವಾಸ್‌ ಪತ್ರಿಕೆಯೊಂದಿಗೆ ಮಾತನಾಡಿ, ಶುಕ್ರವಾರದಿಂದ ವಾರ್ಡ್‌ವಾರು ಮುಖ್ಯ ರಸ್ತೆಗಳು ಇತರೆ ರಸ್ತೆ ಮಾರ್ಗಗಳಲ್ಲೂ ಸ್ಯಾನಿಟೈಸರ್‌ ಸಿಂಪಡಿಸುವ ಜತೆಗೆ ಜನರಲ್ಲಿ ಕೊರೊನಾ ಕುರಿತು ಆಟೋದಲ್ಲಿನ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸಲಾಯಿತು. ಸಂತೋಷ್‌, ಮಹಾಬುಲಿ, ಸುನೀಲ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next