Advertisement

ನಿಯಮ ಉಲ್ಲಂಘನೆ: 26 ಜನ ವಶಕ್ಕೆ

04:50 PM Apr 26, 2021 | Team Udayavani |

 

Advertisement

ಚಿತ್ರದುರ್ಗ: ವಾರಾಂತ್ಯದ ಕರ್ಫ್ಯೂ ಬಗ್ಗೆ ಜಿಲ್ಲಾಡಳಿತ ಹಾಗೂ ಜಿಲ್ಲೆಯ ಪೊಲೀಸರು ಸಾಕಷ್ಟು ಕಟ್ಟೆಚ್ಚರ ವಹಿಸಿದ್ದರು. ಖಾಕಿ ಸರ್ಪಗಾವಲಿನ ನಡುವೆಯೂ ನಿಯಮ ಉಲ್ಲಂಘನೆ ಮಾಡಿದ ಒಟ್ಟು 11 ಪ್ರಕರಣಗಳಲ್ಲಿ 26 ಜನರನ್ನು ವಶಕ್ಕೆ ಪಡೆದು 23 ಜನರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಘಟನೆ ಶನಿವಾರ ನಡೆದಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಅನಾವಶ್ಯಕವಾಗಿ ಓಡಾಡುತ್ತಿದ್ದವರ ಮೇಲೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.

ಚಿತ್ರದುರ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಬೈಕಿನಲ್ಲಿ ತಿರುಗಾಡುತ್ತಿದ್ದ ಇಬ್ಬರನ್ನು ದಸ್ತಗಿರಿ ಮಾಡಿ ಬೈಕ್‌ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೋಟೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಗುಂಪಾಗಿ ಸೇರಿಕೊಂಡು ಮೆದೆಹಳ್ಳಿ ರಸ್ತೆಯ ಬೊಂಬು ಬಜಾರ್‌ ಮುಂಭಾಗ ಹಮಾಲಿ ಕೆಲಸ ಮಾಡುತ್ತಿದ್ದವರು ಹಾಗೂ ಮಾಲೀಕ ಸೇರಿ ಒಟ್ಟು 5 ಜನರನ್ನು ದಸ್ತಗಿರಿ ಮಾಡಲಾಗಿದೆ. ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಭರಮಸಾಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಇಂಡಿಯನ್‌ ಡಾಬಾ ಬಳಿ ಅಂತರ ಕಾಪಾಡಿಕೊಳ್ಳದೆ ಗುಂಪಾಗಿ ಕುಳಿತಿದ್ದ ಇಬ್ಬರು ಹಾಗೂ ಮಾರ್ಗಸೂಚಿ ಉಲ್ಲಂಘಿಸಿ ಮದುವೆ ಮಾಡುತ್ತಿದ್ದವರ ಮೇಲೆ ದೂರು ದಾಖಲಿಸಿ ಬಂ ಧಿಸಲಾಗಿದೆ. ಮೊಳಕಾಲ್ಮೂರು ಪಟ್ಟಣದಲ್ಲಿ ಅಂತರ ಕಾಪಾಡಿಕೊಳ್ಳದೆ ಮದ್ಯ ಸೇವಿಸುತ್ತಿದ್ದ ಮೂವರು, ರಾಂಪುರ ಠಾಣಾ ವ್ಯಾಪ್ತಿಯ ಹೊಸೂರು ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಮದ್ಯ ಸೇವಿಸುತ್ತಿದ್ದ ಇಬ್ಬರು ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ. ಪರಶುರಾಂಪುರ ವ್ಯಾಪ್ತಿಯ ಹಳ್ಳಿಯೊಂದರ ದೇವಸ್ಥಾನದ ಬಳಿ ಕುಳಿತು ಅನವಶ್ಯಕವಾಗಿ ಹರಟೆ ಹೊಡೆಯುತ್ತಿದ್ದ ಆರು ಜನ, ಹೊಸದುರ್ಗದ ಸಂತೆ ಮೈದಾನದಲ್ಲಿ ಅಂತರ ಕಾಪಾಡದ ಇಬ್ಬರು, ಕಂಚಿಪುರ ಗ್ರಾಮದ ಬಸ್‌ ನಿಲ್ದಾಣದ ಬಳಿ ಕರ್ಫ್ಯೂ ಇದ್ದರೂ ಹೋಟೆಲ್‌ ತೆರೆದು ವ್ಯಾಪಾರ ಮಾಡುತ್ತಿದ್ದ ಮಾಲೀಕನನ್ನು ದಸ್ತಗಿರಿ ಮಾಡಲಾಗಿದೆ. ಐಮಂಗಲ ಠಾಣಾ ವ್ಯಾಪ್ತಿಯ ಯರಬಳ್ಳಿ ಗ್ರಾಮದ ಎರಡು ಬೀಸ್ಟಾಲ್‌ಗ‌ಳ ಮಾಲೀಕರು ಕರ್ಫ್ಯೂ ಉಲ್ಲಂಘಿಸಿ ವ್ಯವಹಾರ ನಡೆಸಿ ನ್ಯಾಯಾಂಗ ಬಂಧಕ್ಕೆ ಒಳಗಾಗಿದ್ದಾರ.

Advertisement

Udayavani is now on Telegram. Click here to join our channel and stay updated with the latest news.

Next