Advertisement
* “ಕಿಸ್’ ರಿಲೀಸ್ ಆದ ಕೆಲವೇ ದಿನಗಳಲ್ಲಿ “ಭರಾಟೆ’ ರಿಲೀಸ್ ಆಗ್ತಿರುವುದಕ್ಕೆ ಏನನಿಸುತ್ತಿದೆ..? ಸಾಮಾನ್ಯವಾಗಿ ದೊಡ್ಡ ಹೀರೋಯಿನ್ಸ್ ಸಿನಿಮಾಗಳು ಮಾತ್ರ ವರ್ಷಕ್ಕೆ ಎರಡು-ಮೂರು ರಿಲೀಸ್ ಆಗಬಹುದು. ಆದ್ರೆ ನನ್ನಂಥ ಹೊಸಬರಿಗೆ ಇದು ನಿಜಕ್ಕೂ ಅದ್ಭುತವೇ ಸರಿ. ಅದರಲ್ಲೂ ಒಂದೇ ತಿಂಗಳಲ್ಲಿ ನಾನು ಅಭಿನಯಿಸಿರುವ ಎರಡೂ ಸಿನಿಮಾಗಳು ಒಂದರ ಹಿಂದೊಂದು ರಿಲೀಸ್ ಆಗುತ್ತೆ ಅಂಥ ನಾನೂ ನಿರೀಕ್ಷಿಸಿರಲಿಲ್ಲ. ಇದು ನನಗೂ ಒಂಥರಾ ಸರ್‌ಪ್ರೈಸ್.
“ಕಿಸ್’ ಸಿನಿಮಾದಲ್ಲಿ ನೀವು ನೋಡಿದ ಕ್ಯಾರೆಕ್ಟರ್‌ಗಿಂತ ಸಂಪೂರ್ಣ ಡಿಫರೆಂಟ್ ಕ್ಯಾರೆಕ್ಟರ್ “ಭರಾಟೆ’ಯಲ್ಲಿದೆ. ಇದರಲ್ಲಿ ಟ್ರೆಡಿಷನಲ್ ಫ್ಯಾಮಿಲಿ ಹುಡುಗಿ ಲುಕ್ ನನ್ನದು. ತುಂಬ ಲವ್ಲಿಯಾಗಿರುವ, ಲೈವ್ಲಿಯಾಗಿರುತ್ತೇನೆ. ಕ್ಯಾರೆಕ್ಟರ್ ಬಗ್ಗೆ ಇದಕ್ಕಿಂತ ಹೆಚ್ಚಿನ ಗುಟ್ಟು ಬಿಡುಕೊಡಲಾರೆ, ಉಳಿದದ್ದನ್ನು ನೀವು ಸಿನಿಮಾದಲ್ಲೇ ನೋಡಬೇಕು. * ಮೊದಲ ಬಾರಿ ಶ್ರೀಮುರಳಿ ಜೊತೆ ಕೆಲಸ ಮಾಡಿದ ಅನುಭವ ಹೇಗಿತ್ತು?
ಶ್ರೀಮುರಳಿ ತುಂಬ ಸಿಂಪಲ್ ಆ್ಯಂಡ್ ಹಂಬಲ್ ಪರ್ಸನ್. ಅವರೊಂದಿಗೆ ವರ್ಕ್ ಮಾಡಿದ್ದು ನಿಜಕ್ಕೂ ಬ್ಯೂಟಿಫುಲ್ ಎಕ್ಸ್‌ಪೀರಿಯನ್ಸ್. ಇಡೀ ಸೆಟ್‌ನಲ್ಲಿ ಅವರು ಯಾವತ್ತೂ ತಾನೊಬ್ಬ ಸ್ಟಾರ್ ಅಂಥ ವರ್ತಿಸುತ್ತಿರಲಿಲ್ಲ. ಯಾವಾಗಲೂ ಪಾಸಿಟೀವ್ ಆಗಿರ್ತಾರೆ. ಹೊಸಬರಿಗೆ ತುಂಬ ಸಪೋರ್ಟಿವ್ ಆಗಿರ್ತಾರೆ. ಅವರನ್ನು ನೋಡಿ ಕಲಿತಿರುವುದು ಸಾಕಷ್ಟಿದೆ. ಅವರ ಜೊತೆ ವರ್ಕ್ ಮಾಡುವ ಅವಕಾಶ ಸಿಕ್ಕಿರುವುದಕ್ಕೆ ನಾನು ಲಕ್ಕಿ.
Related Articles
“ಭರಾಟೆ’ ಬ್ಯೂಟಿಫುಲ್ ಅಂಡ್ ಎನರ್ಜಿಟಿಕ್ ಟೀಮ್. ಇಡೀ ಟೀಮ್‌ನಲ್ಲಿ ಎಲ್ಲರೂ ತುಂಬ ಪ್ಯಾಷನೇಟ್ ಆಗಿ ಇದ್ದಿದ್ದರಿಂದ ಈ ಥರದ ಸಿನಿಮಾ ಮಾಡೋದಕ್ಕೆ ಸಾಧ್ಯವಾಯ್ತು. ಶ್ರೀಮುರಳಿ, ನಿರ್ದೇಶಕ ಚೇತನ್, ನಿರ್ಮಾಪಕ ಸುಪ್ರೀತ್ ಎಲ್ಲರೂ ಸಿನಿಮಾ ಚೆನ್ನಾಗಿ ಬರಬೇಕು ಅಂಥ ತುಂಬ ಎಫರ್ಟ್ ಹಾಕಿದ್ದಾರೆ. ಫಸ್ಟ್ ಟೈಮ್ ನನಗೆ ಒಂದೇ ಸಿನಿಮಾದಲ್ಲಿ ಬಿಗ್ ಸ್ಟಾರ್ ಜೊತೆ ಕೆಲ್ಸ ಮಾಡುವ ಚಾನ್ಸ್ ಕೊಟ್ಟಿದ್ದು “ಭರಾಟೆ’ ಟೀಮ್. ಸಿನಿಮಾ ನೋಡಿದಾಗ ಟೀಮ್ ವರ್ಕ್ ಎಷ್ಟು ಚೆನ್ನಾಗಿದೆ ಅಂಥ ನಿಮ್ಗೆ ಗೊತ್ತಾಗುತ್ತದೆ.
Advertisement
*”ಭರಾಟೆ’ ಬಗ್ಗೆ ಕೊನೆಯದಾಗಿ ಆಡಿಯನ್ಸ್‌ಗೆ ಏನಂತೀರಿ?“ಭರಾಟೆ’ ಕಂಪ್ಲೀಟ್ ಎಂಟರ್‌ಟೈನ್ಮೆಂಟ್ ಸಿನಿಮಾ. ನೀವು ಎಂಟರ್‌ಟೈನ್ಮೆಂಟ್‌ಗಾಗಿ ಏನೇನು ಬಯಸುತ್ತಿರೋ, ಅದೆಲ್ಲವೂ ನಿಮಗೆ “ಭರಾಟೆ’ ಯಲ್ಲಿ ಸಿಗಲಿದೆ. ಒಳ್ಳೆಯ ಸ್ಟೋರಿ, ಸಾಂಗ್ಸ್, ಆ್ಯಕ್ಷನ್ಸ್, ಲೊಕೇಶನ್ಸ್, ಬಿಗ್ ಕಾಸ್ಟಿಂಗ್, ರಿಚ್ ಮೇಕಿಂಗ್ ಹೇಳುತ್ತ ಹೋದರೆ ದೊಡ್ಡ ಲೀಸ್ಟ್ ಅನ್ನೆ ಮಾಡಬಹುದು. ಎಲ್ಲರೂ ಬಂದು “ಭರಾಟೆ’ಯನ್ನ ನೋಡಿ. ಸಿನಿಮಾ ಖಂಡಿತ ನಿಮ್ಗೆ ಇಷ್ಟವಾಗುತ್ತದೆ ಅನ್ನೋದು ನನ್ನ ನಂಬಿಕೆ.