Advertisement
ನಂತರ ತಾಲೂಕು ಹಾಗೂ ವಿವಿಧ ಕಡೆಗಳಿಂದ ಆಗಮಿಸುವ ಕಲಾ ತಂಡದವರೊಂದಿಗೆ ತಹಶೀಲ್ದಾರ ಕಚೇರಿಯಿಂದ ಆರಂಭಗೊಂಡ ಮೆರವಣಿಗೆಯಲ್ಲಿ ವಿಜ್ಞಾನೇಶ್ವರ ಮಿತಾಕ್ಷರ ಮಹಾ ಮಂಟಪ-ಸಂತ ಚಿತ್ತಾಶಾವಲಿ ಮಹಾದ್ವಾರ ಸೇರಿದಂತೆ ಇನ್ನಿತರ ಮಹಾದ್ವಾರಗಳು ರಾರಾಜಿಸಲಿವೆ. ಅಂಗನವಾಡಿ ಕಾರ್ಯಕರ್ತರು, ಆಟೋ ಚಾಲಕರು ಹಾಗೂ ಯುವಕರು ಬೈಕ್‌ರ್ಯಾಲಿ ನಡೆಸಲಿದ್ದಾರೆ.
Related Articles
ಚಿತ್ತಾಪುರ: ಜನವರಿ ಐದನೇ ದಿನಾಂಕವನ್ನು ಚಿತ್ತಾಪುರ ಇತಿಹಾಸದ ಪುಟಗಳಲ್ಲಿ ಬರೆದು ಇಡುವಂತಹ
ದಿನ. ಕಾರಣ ತಾಲೂಕಿನಲ್ಲಿ ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಯಾಗಿ ಶತಮಾನ ಕಳೆದರೂ ಚಿತ್ತಾಪುರ ತಾಲೂಕಿನಲ್ಲಿ ಇಲ್ಲಿವರೆಗೂ ಒಂದು ಕನ್ನಡ ಸಾಹಿತ್ಯ
ಸಮ್ಮೇಳನ ಆಗಿರಲಿಲ್ಲ. ಇದನ್ನು ಮನಗಂಡು ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ 2014ರಲ್ಲಿ ಪ್ರಥಮ ಹಾಗೂ 2016ರಲ್ಲಿ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿದ್ದ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಸ್ತುತ ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಲು ಅಣಿಯಾಗುತ್ತಿರುವುದು ಈ ಭಾಗದ ಸಾಹಿತ್ಯಾಭಿಮಾನಿಗಳಿಗೆ ತೀವ್ರ ಹರ್ಷ ತಂದಿದೆ.
Advertisement
ಜ.5ರಂದು ಚಿತ್ತಾಪುರದಲ್ಲಿ ಕನ್ನಡ ಹಬ್ಬದ ವಾತಾವರಣ, ತಾಲೂಕು ಸೇರಿದಂತೆ ಜಿಲ್ಲೆಯ ಎಲ್ಲ ಕಡೆಯಿಂದ ಕನ್ನಡಿಗರು ಚಿತ್ತಾಪುರದ ಕಡೆಗೆ ನೋಟ ಹರಿಸುವ ದಿನ. ತೃತೀಯ ಸಾಹಿತ್ಯ ಸಮ್ಮೇಳನವಾಗಿದ್ದು ಡಾ. ನೀಲಮ್ಮ ಕತ್ನಳ್ಳಿ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕಸಾಪ ತಾಲೂಕು ಅಧ್ಯಕ್ಷ ಕಾಶಿನಾಥ ಗುತ್ತೇದಾರ ಪರಿಷತ್ತಿನ ಪದಾಧಿಕಾರಿಗಳೊಂದಿಗೆ ಸಮ್ಮೇಳನ್ನಕ್ಕಾಗಿ ಶ್ರಮಿಸಿದ್ದಾರೆ.
ಕನ್ನಡ ಪುಸ್ತಕ ಪ್ರಕಟಣೆ, ಕನ್ನಡ ನಾಡು ನುಡಿ ಸಂರಕ್ಷಣೆ ಮತ್ತು ಕನ್ನಡ ಭಾಷೆಗಾಗಿ ಶ್ರಮಿಸಲು ಕಟ್ಟಲಾಗಿರುವಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನ ನಡೆಸುವ ಮೂಲಕ ನಾಡಿನ ಮೂಲೆ ಮೂಲೆಗಳಲ್ಲಿ ಸಾಹಿತ್ಯ ಹರಡಿಸಿದೆ. ಕನ್ನಡ ಸಾಹಿತ್ಯ ಲೋಕದ ದಿಗ್ಗಜರು, ಸಾಹಿತ್ಯಾಸಕ್ತರು, ಕನ್ನಡ ಅಭಿಮಾನಿಗಳು ಒಂದೇಡೆ ಸೇರಿ, ಪ್ರಚಲಿತ ಸಾಹಿತ್ಯದ ಸ್ಥಿತಿಗತಿ ಚರ್ಚಿಸುವಂತಹ ವೇದಿಕೆಯೇ ಕನ್ನಡ ಸಾಹಿತ್ಯ ಸಮ್ಮೇಳನ. ಈಗ ನಾಗಾವಿ ನಾಡಿನಲ್ಲಿ ತೃತೀಯ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಇಲ್ಲಿನ ಸಾಹಿತ್ಯಾಭಿಮಾನಿಗಳಿಗೆ
ಹರ್ಷ ತಂದಿದೆ. ಕನ್ನಡ ಹಾಗೂ ಕನ್ನಡಿಗರ ಪರವಾಗಿ ಕನ್ನಡಿಗರನ್ನು ಬೆಸೆಯುತ್ತಾ ಎಚ್ಚರಿಸುತ್ತಾ ಹಾಗೂ ಹುರಿದುಂಬಿಸುತ್ತಾ ಬೆಳೆದುಕೊಂಡು ಬಂದಿರುವ ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಸಾಹಿತ್ಯ ಪರಿಷತ್ತಿನ ಒಳ್ಳೆಯ ಕೆಲಸವಾಗಿದೆ. ಇದು ಹೀಗೆ ಮುಂದುವರೆಯಿಲಿ. ಕನ್ನಡ ಸಾಹಿತ್ಯದ ಇತಿಹಾಸ ತಿಳಿಸುವ ನಿಟ್ಟಿನಲ್ಲಿ ಕನ್ನಡಿಗರಿಗೆ ಪ್ರೇರಣೆ ನೀಡಬೇಕು ಮತ್ತು ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳನ್ನು ಜಾರಿಗೆ ತರಲು ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಆಗಬೇಕು. ಅಂದಾಗ ಸಮ್ಮೇಳನ ಮಾಡಿದ್ದಕ್ಕೂ ಸಾರ್ಥಕ ಎನ್ನುವ ಅಭಿಪ್ರಾಯಗಳು ಕೇಳಿಬರುತ್ತಿದೆ. ಸಚಿವ ಖರ್ಗೆ ಅಭಯಹಸ ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನ ತಮ್ಮ ಶಾಸಕತ್ವದ ಅವಧಿಯಲ್ಲಿ ನಡೆಯುತ್ತಿರುವುದರಿಂದ ಸ್ವಾಗತ ಸಮಿತಿ ಅಧ್ಯಕ್ಷರಾದ ಪ್ರವಾಸೋದ್ಯಮ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ ಖರ್ಗೆ ಮಾದರಿ ಸಮ್ಮೇಳನ ಆಗಬೇಕು. ಯಾವುದೇ ಅಡೆತಡೆಗಳು ಬಾರದಂತೆ ಅಚ್ಚುಕಟ್ಟಾಗಿ ಮಾಡಬೇಕು ಎಂಬ ಆಶಯದಿಂದ ಸಮ್ಮೇಳನದ ಯಶಸ್ವಿಗೆ ಎಲ್ಲ ರೀತಿಯ ಸಹಕಾರ ನೀಡಿದ್ದಾರೆ. ಇಲ್ಲಿಯವರೆಗೆ ಕನ್ನಡದ ಚಟುವಟಿಕೆಗಳು ಮಾಡುವುದಕ್ಕೆ ಚಿತ್ತಾಪುರ ಕೇಂದ್ರಸ್ಥಾನದಲ್ಲಿ ಸ್ಥಳಾವಕಾಶ ಇರಲಿಲ್ಲ. ಇದನ್ನು ಪರಿಗಣನೆಗೆ ತೆಗೆದುಕೊಂಡು ಕನ್ನಡ ಸಾಹಿತ್ಯಕ್ಕೆ ಉತ್ತೇಜನ ನೀಡುವುದಕ್ಕೆ ಕನ್ನಡ ಭವನ ನಿರ್ಮಾಣಕ್ಕೆ ಸ್ಥಳಾವಕಾಶ ಹಾಗೂ 50 ಲಕ್ಷ ರೂ. ಅನುದಾನ ಸಹ ನೀಡಿದ್ದಾರೆ. ಪ್ರಸ್ತುತ ತಾಂತ್ರಿಕ ಕಾರಣಗಳಿಂದ ಕಾಮಗಾರಿ ನನೆಗುದಿಯಲ್ಲಿದೆ ಎಂ.ಡಿ ಮಶಾಖ್