Advertisement
ವೇಳಾಪಟ್ಟಿ ಪ್ರಕಾರ ರಾಹುಲ್ ಗಾಂಧಿ ಏ. 13ರಂದು ಕರ್ನಾಟಕಕ್ಕೆ ಆಗಮಿಸಿ ಕೆ.ಆರ್. ನಗರ, ಕೋಲಾರ, ಚಿತ್ರದುರ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಮತಯಾಚಿಸಲಿದ್ದಾರೆ. ಪ್ರಧಾನಿ ಮೋದಿಯವರು ಪ್ರಚಾರ ಭಾಷಣ ಮಾಡಿದ ಸರ್ಕಾರಿ ವಿಜ್ಞಾನ ಕಾಲೇಜಿನ ಮೈದಾನದಲ್ಲೇ ರಾಹುಲ್ ಗಾಂಧಿ ಪ್ರಚಾರ ಭಾಷಣ ಮಾಡಲಿದ್ದಾರೆ.
Related Articles
Advertisement
ಚಿತ್ರದುರ್ಗ ಲೋಕಸಭಾ ಕ್ಷೇತ್ರ ಉಳಿಸಿಕೊಳ್ಳುವ ಸಂಬಂಧ ಕಾಂಗ್ರೆಸ್ ಸಾಕಷ್ಟು ಕಸರತ್ತು ನಡೆಸುತ್ತಿದ್ದು, ರಾಹುಲ್ ಗಾಂಧಿ ಆಗಮನದಿಂದ ಕ್ಷೇತ್ರದಲ್ಲಿರುವ ಮೋದಿ ಹವಾ ತಗ್ಗಿಸಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ರಾಹುಲ್ ಗಾಂಧಿಯವರ ಚುನಾವಣಾ ಪ್ರಚಾರ ಸಭೆ ಪೂರ್ವ ನಿಗದಿಯಂತೆ ಮೊದಲೇ ನಿಗದಿಯಾಗಿತ್ತು. ಹಿರಿಯೂರಿನಲ್ಲಿ ಮಾಡುವುದೋ ಅಥವಾ ಚಿತ್ರದುರ್ಗದಲ್ಲಿ ಆಯೋಜಿಸುವುದೋ ಎಂಬ ಗೊಂದಲ ಉಂಟಾಗಿತ್ತು. ಭದ್ರತೆ ಹಾಗೂ ಕಾರ್ಯಕರ್ತರನ್ನು ಸೇರಿಸುವ ದೃಷ್ಟಿಯಿಂದ ಚಿತ್ರದುರ್ಗವೇ ಸೂಕ್ತವೆಂದು ಭಾವಿಸಿ ಸ್ಥಳವನ್ನು ಅಂತಿಮಗೊಳಿಸಲಾಗಿದೆ.
ಮೋದಿ ಭಾಷಣ ಮಾಡಿದ್ದ ವೇದಿಕೆ ಬಳಸಲು ನಕಾರಏ. 13ರಂದು ರಾಹುಲ್ ಗಾಂಧಿ ಚುನಾವಣಾ ಪ್ರಚಾರ ಸಭೆ ಹಿನ್ನೆಲೆಯಲ್ಲಿ ಎಸ್‌ಪಿಜಿ ಅಧಿಕಾರಿ ರಾಜೇಶ್ ಕುಮಾರ್ ಮೈದಾನದಲ್ಲಿ ಅಧಿಕಾರಿಗಳ ಸಭೆ ನಡೆಸಿ ಭದ್ರತೆ ದೃಷ್ಟಿಯಿಂದ ಬಿಜೆಪಿಯವರು ನಿರ್ಮಿಸಿದ್ದ ವೇದಿಕೆಯನ್ನೇ ಬಳಸಿಕೊಳ್ಳುವಂತೆ ಮನವಿ ಮಾಡಿದ್ದು, ಅದಕ್ಕೆ ಕಾಂಗ್ರೆಸ್ ಮುಖಂಡರು ನಿರಾಕರಿಸಿದ್ದಾರೆ. ಇದೇ ವೇದಿಕೆಯಲ್ಲಿ ಸಮಾವೇಶ ನಡೆಸಲು ಪಕ್ಷದ ಹೈಕಮಾಂಡ್ ನಿರಾಕರಿಸಿದೆ. ಹಾಗಾಗಿ ಬದಲಿ ವೇದಿಕೆ ಸೃಷ್ಟಿಸುವುದು ಅನಿವಾರ್ಯ ಎಂದು ಅಧಿ ಕಾರಿಗಳಿಗೆ ಹೇಳಿದ್ದಾರೆ. ಭದ್ರತೆ ಹಿನ್ನೆಲೆಯಲ್ಲಿ ವೇದಿಕೆ ಮೇಲೆ 30 ಜನಕ್ಕೆ ಮಾತ್ರ ಅವಕಾಶ ಕಲ್ಪಿಸುತ್ತೇವೆ. ಅದಕ್ಕಿಂತ ಜಾಸ್ತಿ ಅಸಾಧ್ಯವೆಂದು ಎಸ್‌ಪಿಜಿ ಅಧಿಕಾರಿಗಳು ಮಾಡಿದ ಮನವಿಗೆ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿ ನಮ್ಮದು ಸಮ್ಮಿಶ್ರ ಸರ್ಕಾರ, ಕಾಂಗ್ರೆಸ್ ಹಾಗೂ ಜೆಡಿಎಸ್ ಧುರೀಣರು ಆಗಮಿಸುತ್ತಾರೆ. ಕನಿಷ್ಟ ನೂರು ಜನರು ವೇದಿಕೆ
ಮೇಲೆ ಕೂರಲು ಅವಕಾಶ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಈ ಮನವಿಯನ್ನು ಎಸ್ಪಿಜಿ ಅಧಿ ಕಾರಿಗಳು ನಿರಾಕರಿಸಿದ್ದು, ವೇದಿಕೆ ಮೇಲೆ ಎಷ್ಟು ಜನ ಇರಬೇಕು ಎಂಬುದು ತೀರ್ಮಾನವಾಗಿಲ್ಲ. ವಿಧಾನ ಪರಿಷತ್ ಸದಸ್ಯ ರಘುಆಚಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್. ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ -ಫಾತ್ಯರಾಜನ್ ಇದ್ದರು.