Advertisement

ಮತ ಚಲಾಯಿಸಲು ಅಮೇರಿಕದಿಂದ ಬಂದ್ರು

04:54 PM Apr 19, 2019 | Naveen |

ಚಿತ್ರದುರ್ಗ: ಅಮೇರಿಕದಿಂದ ಚಿತ್ರದುರ್ಗಕ್ಕೆ ಆಗಮಿಸಿ ಮತದಾನ ಮಾಡುವ ಮೂಲಕ ಭರತ್‌ ಎಂಬುವವರು ವಿಶೇಷತೆ ಮೆರೆದಿದ್ದಾರೆ.

Advertisement

ಕಳೆದ 14 ವರ್ಷಗಳಿಂದ ಅಮೇರಿಕದಲ್ಲಿ ಕೆಲಸ ಮಾಡುತ್ತಿರುವ ಭರತ್‌, ಚಿತ್ರದುರ್ಗದ ಕಂದಾಯಗಿರಿ ನಗರದ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 208ರಲ್ಲಿ ಮತ ಚಲಾವಣೆ ಮಾಡಿದರು. 14 ವರ್ಷದಲ್ಲಿ ಇದೇ ಮೊದಲ ಬಾರಿಗೆ ತವರೂರಿಗೆ ಬಂದು ಮತ ಚಲಾಯಿಸಿದ್ದು ತುಂಬಾ ಖುಷಿ ಕೊಟ್ಟಿದೆ.

ಮತದಾನ ಮಾಡಲು ನಾನು ಉತ್ಸಾಹದಿಂದ ಬಂದಿದ್ದೇನೆ. ದೇಶದ ಅಭಿವೃದ್ಧಿ, ಉತ್ತಮ ಸಮಾಜ ನಿರ್ಮಾಣಕ್ಕಾಗಿ ಮತದಾನ ಮಾಡಿದ್ದೇನೆ. ಮತದಾನ ಎಲ್ಲರ ಹಕ್ಕು. ಆದ್ದರಿಂದ ಎಲ್ಲರೂ ತಪ್ಪದೇ ಮತ ಚಲಾಯಿಸುವಂತೆ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next