Advertisement

Chintamani: ಮೂವರು ಕುಖ್ಯಾತ ಕುರಿ ಕಳ್ಳರನ್ನು ಹಿಡಿದುಕೊಟ್ಟ ಬೆರಳಚ್ಚು!

10:51 PM Jan 25, 2024 | Team Udayavani |

ಚಿಂತಾಮಣಿ: (ಚಿಕ್ಕಬಳ್ಳಾಪುರ) ಜಿಲ್ಲೆಯ ಪೊಲೀಸರಿಗೆ ತೀವ್ರ ತಲೆ ನೋವಾಗಿ ಪರಿಣಮಿಸಿದ್ದ ಕುರಿ ಕಳ್ಳರನ್ನು ಪೊಲೀಸರು ಸಂಗ್ರಹಿಸಿ ಹೊಂದಿದ್ದ ಬೆರಳಚ್ಚಿನಿಂದ ಪೊಲೀಸರ ಕೈಗೆ ಮೂವರು ಕುಖ್ಯಾತ ಕುರಿಗಳ್ಳರು ಸಿಕ್ಕಿಬಿದ್ದಿರುವ ಘಟನೆ ಜಿಲ್ಲೆಯ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಬಂಧಿತ ಕುರಿಗಳ್ಳರನ್ನು ರಾಯಚೂರು ಜಿಲ್ಲೆಯ ಸಿಂಧುನೂರು ತಾಲೂಕಿನ ಅಂಬಾಮಠದ ನಿವಾಸಿಗಳಾದ ಪಾತ್ರೆ ವ್ಯಾಪಾರಿ ಅಮರೇಶ್ ಬಿನ್ ಮಾರುತಿ (30), ಶಿವಶಂಕರ್ ಬಿನ್ ರಮೇಶ್ (24) ಹಾಗೂ ಮಾನ್ವಿ ಗ್ರಾಮದ ರಾಜಾ ಬಿನ್ ಗಡ್ಡಪ್ಪ (22) ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ ಒಟ್ಟು 7.30 ಲಕ್ಷ ರು ಮೌಲ್ಯದ ರಾಜ್ಯದ ವಿವಿಧ ಕಡೆಗಳಲ್ಲಿ ಕಳವು ಮಾಡಲಾಗಿದ್ದ 68 ಕುರಿ, 5 ಮೇಕೆ ಸೇರಿ ಕುರಿ, ಮೇಕೆಗಳನ್ನು ವಶಕ್ಕೆ ಪಡೆದಿರುವ ಚಿಂತಾಮಣಿ ಗ್ರಾಮಾಂತರ ಠಾನೆ ಪೊಲೀಸರ ವಶಕ್ಕೆ ಪಡೆದಿದ್ದಾರೆ. ಕಳೆದ ಜನವರಿ 22 ರಂದು ಚಿಂತಾಮಣಿ ಕೋಲಾರ ರಸ್ತೆಯಲ್ಲಿರುವ ಬೀಡಗಾನಹಳ್ಳಿ ಗ್ರಾಮದಲ್ಲಿ ಮುನಿಯಪ್ಪ ಎಂಬುವರ ಮನೆ ಮುಂಭಾಗ ಕುರಿ ಶೆಡ್‌ನಲ್ಲಿದ್ದ 35 ಕುರಿಗಳನ್ನು ಅಪರಿಚಿತ ಕಳ್ಳರು ಕದ್ದು ಹೋಗಿದ್ದರು.

ಈ ಬಗ್ಗೆ ದೂರು ನೀಡಿದ್ದರ ಹಿನ್ನಲೆಯಲ್ಲಿ ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ಎಸ್ಪಿ ನಾಗೇಶ್, ಹೆಚ್ಚುವರಿ ಎಸ್ಪಿ ಕಾಶಿಂ, ಚಿಂತಾಮಣಿ ಡಿವೈಎಸ್‌ಪಿ ಮುರಳೀಧರ್ ಮಾರ್ಗದರ್ಶನದಲ್ಲಿ ಚಿಂತಾಮಣಿ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಸೂರ್ಯಪ್ರಕಾಶ್ ಹಾಗೂ ಅಪರಾಧ ತಂಡ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next