ಚಿಕ್ಕಬಳ್ಳಾಪುರ : ಅತ್ತೆ ಮಾವ ಕಿರುಕುಳ ತಾಳಲಾರದೆ ಡೆತ್ ನೋಟ್ ಬರೆದು ಗ್ರಾಪಂ ಡಾಟಾ ಏಂಟ್ರಿ ಅಪರೇಟರ್ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಆನೂರು ಗ್ರಾಮದಲ್ಲಿ ನಡೆದಿದೆ.
ಗೃಹಿಣಿ ಆನೂರು ಗ್ರಾಮದ ನಿವಾಸಿ ನೇತ್ರಾವತಿ ಆತ್ಮಹತ್ತೆಗೆ ಯತ್ನಿಸಿದ ಗೃಹಿಣಿ. ಅವರು ಆನೂರು ಗ್ರಾಮದ ಗ್ರಾಪಂ ಕಛೇರಿಯಲ್ಲಿ ಡಾಟ ಏಂಟ್ರಿ ಅಪರೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅತ್ತೆ ಮಾವರ ಕಿರುಕುಳ ತಾಳಲಾರದೆ ಸೋಮವಾರ ಮನೆಯಲ್ಲಿ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದು ಈ ವಿಷಯ ತಿಳಿದ ಪತಿ ಆಕೆಯನ್ನು ಚಿಂತಾಮಣಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದಾನೆ. ಸದ್ಯ ಆಕೆ ಸಾವು ಬದುಕಿನ ಹೋರಾಡುತ್ತಿದ್ದಾಳೆ. ವಿಷಯ ತಿಳಿದ ಕೂಡಲೇ ತಾಲೂಕು ಕಾರ್ಯನಿರ್ವಹಣಾ ಅಧಿಕಾರಿ ಮಂಜುನಾಥರೆಡ್ಡಿ ಆಸ್ಪತ್ರೆಗೆ ತೆರಳಿ ಆಕೆಯ ಯೋಗಕ್ಷೇಮ ವಿಚಾರಿಸಿದ್ದಾರೆ.
ಡೆತ್ ನೋಟ್ ನಲ್ಲಿ ಏನಿದೆ: ಒಕ್ಕಲಿಗ ಸಮುದಾಯವಳಾದ ನಾನು ಸ್ವಗ್ರಾಮವಾದ ಆನೂರು ಗ್ರಾಮದ ಪದ್ಮಶಾಲಿ ಸಮುದಾಯದ ಉಪೇಂದ್ರ ಎಂಬುವರನ್ನು ಕಳೆದ ಹತ್ತು ವರ್ಷಗಳ ಹಿಂದೆ ಪ್ರೇಮ ವಿವಾಹವಾದೆ ಆದರೆ ನಮ್ಮ ವಿವಾಹ ನಮ್ಮ ಅತ್ತೆ ಪಾರ್ವತಮ್ಮ, ಮಾವ ಮನಿನರಸಪ್ಪ ಹಾಗೂ ನಾದಿನಿಯರಾದ ಲಕ್ಷ್ಮೀ, ವಿಮಲ ರವರಿಗೆ ನನ್ನಮೇಲೆ ಕೋಪ ಹೆಚ್ಚು ಇದರಿಂದ ಪ್ರತಿದಿನ ಮಾನಸಿಕ ಹಿಂಸೆನೀಡುತ್ತಿದ್ದರು ವರದಕ್ಷಣೆ ಅಷ್ಟೇ ಅಲ್ಲದೆ ನಮ್ಮ ಮಗನಿಗೆ ಬೇರೊಬ್ಬರನ್ನು ಮದುವೆ ಮಾಡಿಕೊಂಡಿದ್ದಿದ್ದರೆ ವರದಕ್ಷಿಣೆ ಬರುತ್ತಿತ್ತು ನಿನ್ನಿಂದ ನಮಗೇನು ಲಾಭ ಇಲ್ಲಾ ಎಂದು ಮಾನಸಿಕ ಹಾಗೂ ದೈಹಿಕ ಕಿರುಕುಳನೀಡುವುದರ ಜೊತೆಗೆ ಜಾತಿ ನಿಂದನೆಮಾಡುತ್ತಿದ್ದರು ಎಂದು ತಮ್ಮ ಡೆತ್ ನೋಟ್ ನಲ್ಲಿ ಬರೆದಿದ್ದಾರೆ.