Advertisement

ಚಿಣ್ಣರ ಬಿಂಬದ ಮಕ್ಕಳಿಗೆ ಉಜ್ವಲ ಭವಿಷ್ಯ

01:32 PM Dec 26, 2017 | Team Udayavani |

ಮುಂಬೈ: ಚಿಣ್ಣರ ಬಿಂಬವು ಮರಾಠಿ ಮಣ್ಣಿನಲ್ಲಿ ಕಳೆದ ಹದಿನೈದು ವರ್ಷಗಳಿಂದ ನೂತನ ಕ್ರಾಂತಿಯನ್ನೇ ಮಾಡಿದೆ. ಮರಾಠಿ ಮಣ್ಣಿನಲ್ಲಿ ಕಂಗೊಳಿಸುತ್ತಿರುವ  ಚಿಣ್ಣರ ಬಿಂಬ ಎನ್ನುವ ಮಲ್ಲಿಗೆಯ ಪರಿಮಳ ತಾಯ್ನಾಡಿನಲ್ಲೂ ಬೀರುವಂತಾಗಬೇಕು.

Advertisement

ಪ್ರಕಾಶ್‌ ಭಂಡಾರಿ ಅವರ ಇಂತಹ  ದೂರದೃಷ್ಟಿತ್ವದ ಕಾರ್ಯಕ್ಕೆ ಮಕ್ಕಳು- ಪೋಷಕರು- ಪಾಲಕರು ನೀರು ಹಾಕಿ ಪೋಷಿಸುತ್ತಿರುವುದನ್ನು ಕಂಡಾಗ ಮನಸ್ಸಿಗೆ ಬಹಳಷ್ಟು ಆನಂದವಾಗುತ್ತಿದೆ. ಎಂದು ಕರ್ನಾಟಕದ ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ನುಡಿದರು. 

ಡಿ. 24ರಂದು ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ  ಸುಧಾಬಾಯಿ  ಟಿ. ಭಂಡಾರಿ ಸಭಾಗೃಹದಲ್ಲಿ ಸಂಜೆ ನಡೆದ ಚಿಣ್ಣರ ಬಿಂಬದ 15 ನೇ ವಾರ್ಷಿಕ ಮಕ್ಕಳ ಸಾಂಸ್ಕೃತಿಕ ಉತ್ಸವದ ಸಮಾರೋಪ ಸಮಾ  ರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಚಿಣ್ಣರ ಬಿಂಬವು ಇನ್ನಷ್ಟು ಎತ್ತರಕ್ಕೆ ಬೆಳೆಯ ಬೇಕು. ಇನ್ನಷ್ಟು ಮಕ್ಕಳನ್ನು ಬೆಳೆಸಿ ಸುಸಂಸ್ಕೃತರಾಗಿ ಬೆಳೆಸಬೇಕು. ಚಿಣ್ಣರ  ಬಿಂಬದ ಮಕ್ಕಳ ಪ್ರತಿಭೆಯನ್ನು ನಾನು ಕಣ್ಣಾರೆ ಕಂಡು ಬೆರಗಾಗಿದ್ದೇನೆ. ಈ ಮಕ್ಕಳಿಗೆ ಉಜ್ವಲ ಭವಿಷ್ಯವಿದೆ. ಚಿಣ್ಣರ ಬಿಂಬದ ನನ್ನಿಂದಾದ ಸಹಾಯ, ಸಹಕಾರವನ್ನು  ಮಾಡಲು ಸಿದ್ಧನಿದ್ದೇನೆ ಎಂದರು. 

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕರ್ನಾಟಕ ಶಾಸಕ ಮೊಯಿದ್ದಿನ್‌  ಭಾವಾ, ಸುಧಾಕರ ಎಸ್‌. ಹೆಗ್ಡೆ (ಆಡಳಿತ ನಿರ್ದೇಶಕರು: ತುಂಗಾ ಗ್ರೂಪ್‌ ಆಫ್‌ ಹೊಟೇಲ್ಸ್‌). ಸಿಎ ಶಂಕರ್‌ ಬಿ. ಶೆಟ್ಟಿ (ಕಾರ್ಯಾಧ್ಯಕ್ಷರು : ಬಂಟರ ಸಂಘ  ಎಸ್‌. ಎಂ. ಶೆಟ್ಟಿ ಶಿಕ್ಷಣ ಸಂಸ್ಥೆ)., ಗುರುಕಿರಣ್‌ (ಸಂಗೀತ ನಿರ್ದೇ  ಶಕರು ), ಕೀರ್ತಿರಾಜ್‌ ಸಾಲ್ಯಾನ್‌ (ನಿರ್ದೇಶ  ಕರು: ಶಕ್ತಿ ಎಕ್ವಾಕಲ್ಚರ್‌ ಫಾಮ್ಸ್‌ì ಲಿ. ಮುಂಬಯಿ).,

Advertisement

ರವಿ ಶೆಟ್ಟಿ (ಮುಖ್ಯ ಆಡಳಿತ  ನಿರ್ದೇಶಕರು : ಸಾಯಿ ಪ್ಯಾಲೇಸ್‌ ಗ್ರೂಪ್‌ ಆಫ್‌ ಹೊಟೇಲ್ಸ್‌)., ಮಹೇಶ್‌ ಶೆಟ್ಟಿ (ಬಾಲಿ  ವುಡ್‌ ಕಿರುತೆರೆ  ನಟ) ಭಾಗವಹಿಸಿದ್ದರು. ಚಿಣ್ಣರ ಬಿಂಬದ ರೂವಾರಿ ಪ್ರಕಾಶ್‌ ಭಂಡಾರಿ ಅವರು ಮಾತನಾಡಿ, ಇಂದು ನಮ್ಮ ಕನಸು ನನಸಾಗಿದೆ. ಸಾಂಸ್ಕೃತಿಕ ಉತ್ಸವವು ವರ್ಷದಿಂದ ವರ್ಷಕ್ಕೆ ಬಹಳ ಶಿಸ್ತುಬದ್ಧವಾಗಿ ನಡೆಯುತ್ತಿದೆ.

ನಾನು ಎಣಿಸಿದಂತೆಯೇ ಪ್ರತೀ ವರ್ಷ ಯಶಸ್ಸುಗೊಳ್ಳುತ್ತಿರುವುದಕ್ಕೆ ಪ್ರೀತಿಯ ಮಕ್ಕಳು, ಪಾಲಕರು, ವಿವಿಧ ವಲಯಗಳ, ಶಿಬಿರಗಳ ಶಿಕ್ಷಕರು, ಮುಖ್ಯಸ್ಥರು ಹಾಗೂ ಸರ್ವ ಪದಾಧಿಕಾರಿಗಳು ಕಾರಣ  ವಾಗಿದ್ದಾರೆ.ಎಂದರು. ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದ ಕಲಾಜಗತ್ತು ವಿಜಯಕುಮಾರ್‌ ಶೆಟ್ಟಿ ಅವರು, ಜೀವನದ ಪಾಠವನ್ನು ಕಲಿಸಿದ ಸಂಸ್ಥೆ  ಚಿಣ್ಣರ ಬಿಂಬವಾಗಿದೆ ಎಂದರು. 

ಅತಿಥಿ-ಗಣ್ಯರು ಚಿಣ್ಣರ ಬಿಂಬದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಇತ್ತೀ  ಚೆಗೆ ರಾಷ್ಟ್ರೀಯ ಪ್ರಶಸ್ತಿ  ವಿಜೇತರದಾ ಚಿಣ್ಣರ ಬಿಂಬದ ರೂವಾರಿ ಸುರೇಂದ್ರ ಕುಮಾರ್‌ ಹೆಗ್ಡೆ ಅವರನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು. ಸಮಾರಂಭದಲ್ಲಿ ಪ್ರತಿಭಾ  ವಂತ ಮಕ್ಕಳನ್ನು ಅಭಿನಂದಿಸಲಾಯಿತು.  ದರ್ಶನ್‌ ಶೆಟ್ಟಿ, ಕೀರ್ತಿ ಶೆಟ್ಟಿ, ಅಶೋಕ್‌ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು. 

ಅತಿಥಿಗಳನ್ನು ಅದಿತಿ ಶೆಟ್ಟಿ,  ವಿಕ್ರಮ್‌  ಪಾಟ್ಕರ್‌, ಮಂಥನ್‌ ಶೆಟ್ಟಿ, ಭೂಮಿಕಾ ಸಾಲ್ಯಾನ್‌ ಅವರು ಪರಿಚಯಿಸಿದರು. ವೇದಿಕೆ ಯಲ್ಲಿ ಚಿಣ್ಣರ ಬಿಂಬದ ಸಂಸ್ಥಾಪಕಾಧ್ಯಕ್ಷೆ ಪೂಜಾ  ಪ್ರಕಾಶ್‌ ಭಂಡಾರಿ, ಕಾರ್ಯಾಧ್ಯಕ್ಷೆ ನೈನಾ ಪ್ರಕಾಶ್‌ ಭಂಡಾರಿ, ಚಿಣ್ಣರ ಬಿಂಬದ ಸತೀಶ್‌ ಸಾಲ್ಯಾನ್‌, ರಮೇಶ್‌ ರೈ, ಭಾಸ್ಕರ ಶೆಟ್ಟಿ ತಾಳಿಪಾಡಿಗುತ್ತು ಮೊದಲಾದವರು ಉಪಸ್ಥಿತರಿದ್ದರು. 

ಮಹಾ ಸ್ಪರ್ಧೆಯಲ್ಲಿ ವಿಜೇತ ರಾದ ಮಕ್ಕಳನ್ನು ಹಾಗೂ ಪಾಲಕರನ್ನು ಗಣ್ಯರು ಪ್ರಶಸ್ತಿ ಪ್ರದಾನಿಸಿ ಗೌರವಿಸಿದರು.  ಸತೀಶ್‌ ಸಾಲ್ಯಾನ್‌ ಅವರು ವಿಜೇತರ ಯಾದಿಯನ್ನು ಘೋಷಿಸಿ ವಂದಿಸಿದರು. ಡಾ| ಶ್ಯಾಮಲಾ ಪ್ರಕಾಶ್‌, ಪದ್ಮನಾಭ ಸಸಿಹಿತ್ಲು ಮೊದಲಾದವರು ತೀರ್ಪುಗಾರರಾಗಿ ಸಹಕರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next