ಮುಂಬಯಿ: ಬಂಟರ ವಾಣಿ ಚಿಣ್ಣರ ಚಿಲಿಪಿಲಿ-3 ಫ್ಯಾಶನ್ ಶೋ ಮತ್ತು ಪ್ರತಿಭಾ ಸ್ಪರ್ಧೆ ಮಕ್ಕಳ ಪ್ರತಿಭಾನ್ವೇಷಣೆಗೆ ಉತ್ತಮ ವೇದಿಕೆಯಾಗಿದೆ. ಭಾಗವಹಿಸುತ್ತಿ ರುವ ಎಲ್ಲ ಬಂಟ ಪುಟಾಣಿಗಳು ನಮ್ಮವರೇ ಎಂಬ ಭಾವನೆಯೊಂದಿಗೆ ನಿಯಮಗಳನ್ನು ಪಾಲಿಸುವುದರಿಂದ ಸ್ಪರ್ಧೆ ಯಶಸ್ವಿಯಾಗುತ್ತದೆ ಎಂದು ಬಂಟರ ಸಂಘ ಮುಂಬಯಿ ಗೌರವ ಕೋಶಾಧಿಕಾರಿ ಪ್ರವೀಣ್ ಬಿ. ಶೆಟ್ಟಿ ನುಡಿದರು.
ನ. 11ರಂದು ಕುರ್ಲಾ ಪೂರ್ವದ ಬಂಟರ ಭವನದ ಮುಂಭಾಗದ ಉನ್ನತ ಶಿಕ್ಷಣ ಸಂಕೀರ್ಣದಲ್ಲಿರುವ ರಮಾನಾಥ ಪಯ್ಯಡೆ ಕ್ಯಾಟರಿಂಗ್ ಕಾಲೇಜು ಆಡಿಟೋರಿಂಯನಲ್ಲಿ ಜರಗಿದ ಬಂಟರವಾಣಿ ಚಿಣ್ಣರ ಚಿಲಿಪಿಲಿ-3 ಫ್ಯಾಶನ್ ಶೋ ಮತ್ತು ಪ್ರತಿಭಾ ಸ್ಪರ್ಧೆಯ ಆಯ್ಕೆ ಪ್ರಕ್ರಿಯೆ ಉದ್ಘಾಟಿಸಿ ಮಾತನಾಡಿದ ಅವರು, ಬಂಟರವಾಣಿಯ ಕಾರ್ಯಾಧ್ಯಕ್ಷ ಶಾಂತಾರಾಮ ಬಿ. ಶೆಟ್ಟಿ ಅವರ ಪರಿಕಲ್ಪನೆಯಲ್ಲಿ ಕಳೆದ ಮೂರು ವರ್ಷಗಳಿಂದ ಮಕ್ಕಳಿಗಾಗಿಯೇ ಈ ವಿಶೇಷ ಕಾರ್ಯಕ್ರಮ ಜರಗುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿ ಸಿದ ಬಂಟರ ಸಂಘದ ಜೊತೆ ಕೋಶಾಧಿಕಾರಿ ಮಹೇಶ್ ಎಸ್. ಶೆಟ್ಟಿ ಅವರು ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಕೋರಿ, ಆಯ್ಕೆಯಾದ ಮಕ್ಕಳನ್ನು ಅಭಿನಂದಿಸಿದರು.
ಬಂಟರವಾಣಿಯ ಕಾರ್ಯಾಧ್ಯಕ್ಷ ಶಾಂತಾರಾಮ ಬಿ. ಶೆಟ್ಟಿ ಸ್ವಾಗತಿಸಿ ಮಾತನಾಡಿ, ಇಂದು ಆಗಮಿಸಿದ ಮಕ್ಕಳ ಹೊರತಾಗಿ ಚಿಣ್ಣರ ಚಿಲಿಪಿಲಿ-3 ಸ್ಪರ್ಧೆಯಲ್ಲಿ ಭಾಗವಹಿಸ ಲಿಚ್ಛಿಸುವ ಇತರ ಪುಟಾಣಿಗಳ ಹೆಸರನ್ನು ನೋಂದಾ ಯಿಸಲು ಇನ್ನೂ ಸಮಯಾವಕಾಶ ಕಲ್ಪಿಸಲಾಗಿದ್ದು, ಕೂಡಲೇ ಸಂಘದ ಕಚೇರಿಯನ್ನು ಸಂಪರ್ಕಿಸುವಂತೆ ತಿಳಿಸಿದರು.
ಆಯ್ಕೆ ಪ್ರಕ್ರಿಯೆಯಲ್ಲಿ ಬಂಟರ ವಾಣಿಯ ಗೌರವ ಪ್ರಧಾನ ಸಂಪಾದಕ ಅಶೋಕ್ ಪಕ್ಕಳ, ಸಂಪಾದಕ ಪ್ರೇಮನಾಥ್ ಶೆಟ್ಟಿ ಮುಂಡ್ಕೂರು, ಸಂಘದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಕರ್ನೂರು ಮೋಹನ್ ರೈ, ಸಂಘದ ಪೊವಾಯಿ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಹರೀಶ್ ವಾಸು ಶೆಟ್ಟಿ, ಮಕ್ಕಳ ತರಬೇತುದಾರ ಸಂದೀಪ್ ಶೆಟ್ಟಿ, ಸಂಘದ ಮಹಾಪ್ರಬಂಧಕ ವರಂಗ ಪ್ರವೀಣ್ ಶೆಟ್ಟಿ ಅವರು ಸಹಕರಿಸಿದರು.
ನವಿಮುಂಬಯಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ನಂದಿಕೂರು ಜಗದೀಶ್ ಶೆಟ್ಟಿ, ಸಿಟಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ನಲ್ಯಗುತ್ತು ಪ್ರಕಾಶ್ ಶೆಟ್ಟಿ, ಸಂಘದ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಲತಾ ಪಿ. ಶೆಟ್ಟಿ ಉಪಸ್ಥಿತರಿದ್ದರು. ಅಶೋಕ್ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು. ಕರ್ನೂರು ಮೋಹನ್ ರೈ ವಂದಿಸಿದರು. ಸಮಾಜದ ನೂರಾರು ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಚಿತ್ರ-ವರದಿ: ಪ್ರೇಮನಾಥ್ ಶೆಟ್ಟಿ ಮುಂಡ್ಕೂರು