Advertisement

ಚಿಣ್ಣರ ಬಿಂಬ: ಶ್ರೀ ಉಮಾಮಹೇಶ್ವರಿ ಶಿಬಿರದ ಚಿಣ್ಣರ ಪ್ರತಿಭಾ ಸ್ಪರ್ಧೆ

04:26 PM Sep 26, 2018 | Team Udayavani |

ಮುಂಬಯಿ: ನಾನು ಕಳೆದ ಹಲವಾರು ವರ್ಷಗಳಿಂದ ಚಿಣ್ಣರ ಬಿಂಬದ ಕಾರ್ಯವೈಖರಿಯನ್ನು ಬಹಳ ಹತ್ತಿರದಿಂದ ನೋಡುತ್ತಾ ಬರುತ್ತಿದ್ದೇನೆ. ಇಲ್ಲಿ ಮಕ್ಕಳಿಗೆ ಒಳ್ಳೆಯ ಸಂಸ್ಕೃತಿ ಸಂಸ್ಕಾರವನ್ನು ಕಲಿಸಿ ಅವರನ್ನು ಸತøಜೆಯಾಗಿಸುವಲ್ಲಿ ಚಿಣ್ಣರ ಬಿಂಬ ಸಂಸ್ಥೆ ಶ್ರಮಿಸುತ್ತಿದೆ. ನಾವು ಕಲಿತು ವಿದೇಶಕ್ಕೆ ಹೋಗುವುದಲ್ಲ. ನಮ್ಮ ದೇಶಕ್ಕಾಗಿ ನಾವು ನಮ್ಮಿಂದಾದ ಸೇವೆಯನ್ನು ಮಾಡಬೇಕು. ಅಂತಹ ಸುಸಂಸ್ಕೃತ ತರಬೇತಿಯೂ ಇಲ್ಲಿನ ಮಕ್ಕಳಿಗೆ ದೊರೆಯುತ್ತಿದೆ. ಇಲ್ಲಿನ ಮಕ್ಕಳು ಅದೃಷ್ಟವಂತರು. ಶ್ರೀ ಉಮಾಮಹೇಶ್ವರಿ ಶಿಬಿರಕ್ಕೆ ನನ್ನ ಸಹಕಾರ ಯಾವತ್ತೂ ಇದೆ ಎಂದು ಉಮಾಮಹೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಎಸ್‌. ಎನ್‌. ಉಡುಪ ಅವರು ನುಡಿದರು.

Advertisement

ಅವರು ಉಮಾಮಹೇಶ್ವರಿ ಶಿಬಿರದ ಚಿಣ್ಣರ ಬಿಂಬದ ಮಕ್ಕಳ ಪ್ರತಿಭಾ ಸ್ಪರ್ಧೆ ಯನ್ನು ಸೆ. 16ರಂದು ಜರಿಮರಿಯ ಈಡನ್‌ ಗಾರ್ಡನ್‌ ಶಾಲೆಯಲ್ಲಿ ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಡಾ | ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಮಾತನಾಡಿ,  ಇಂದು ಎಸ್‌ ಎಂ ಶೆಟ್ಟಿ ಶಿಬಿರದ ತದನಂತರ ಇಲ್ಲಿ ನಡೆದ ಚಿಣ್ಣರ ಬಿಂಬದ ಸ್ಪರ್ಧೆಯು ಉತ್ತಮವಾಗಿ ನೆರವೇರಿದ್ದು ಇಲ್ಲಿನ ಸ್ವಯಂಸೇವಕರು, ಪಾಲಕರು ಬಹಳ ಮುತುವರ್ಜಿಯಿಂದ ಸ್ಪರ್ಧಿಗಳನ್ನು ತಯಾರಿಸಿದ್ದೀರಿ. ಚಿಣ್ಣರ ಬಿಂಬ ಸಂಸ್ಥೆಯಲ್ಲಿ ಪ್ರೀತಿ, ಸ್ನೇಹ, ಸೌಹಾದ‌ìತೆಗಳ ಸಮ್ಮಿಲನವನ್ನು ಕಾಣಬಹುದು. ಎಲ್ಲರ ಒಗ್ಗಟ್ಟೇ ಈ ಸಂಸ್ಥೆಯ ಧ್ಯೇಯವಾಕ್ಯದಂತಿದೆ. ಈ ವರ್ಷ ಶ್ಲೋಕ ಪಠಣ ಸ್ಪರ್ಧೆಯನ್ನು ಏರ್ಪಡಿಸಿದ್ದು ಮಕ್ಕಳು ಆಯ್ದುಕೊಳ್ಳುವ ಶ್ಲೋಕ, ಪಠಣ, ಉಚ್ಚಾರದ ಕಡೆಗೆ ಹೆಚ್ಚಿನ ಗಮನಕೊಡಬೇಕು ಎಂದರು.

ಚಿಣ್ಣರ ಬಿಂಬದ ಕೇಂದ್ರ ಸಮಿತಿಯ ರಮೇಶ್‌ ರೈ ಅವರು ಮಾತನಾಡುತ್ತಾ, ಚಿಣ್ಣರ ಬಿಂಬ ಸಂಸ್ಥೆ ಇಂದು ಸಾವಿರಾರು ಮಕ್ಕಳ ಪ್ರತಿಭೆಗೆ ಸೂಕ್ತ ಅವಕಾಶವನ್ನು ನೀಡುತ್ತಾ ಬರುತ್ತಿದೆ. ಇದುವರೆಗೆ ವೇದಿಕೆಗೆ ಹೋಗದ ಮಕ್ಕಳಿಗೂ ಇಲ್ಲಿ ಒಳ್ಳೆಯ ಅವಕಾಶ ದೊರೆಯುತ್ತಿದೆ. ಹೆಚ್ಚು ಹೆಚ್ಚು ಮಕ್ಕಳು ಚಿಣ್ಣರ ಬಿಂಬ ಸಂಸ್ಥೆಗೆ ಸೇರಿ ಅದರ ಉಪಯೋಗವನ್ನು ಪಡೆದುಕೊಳ್ಳುವಂತೆ ಸ್ವಯಂ ಸೇವಕರು ಮಾಡಬೇಕು ಎಂದರು.
ತೀರ್ಪುಗಾರರಾಗಿ ಸಹಕರಿಸಿದ ಮುಂಬುಯ ನಾಟಕ ನಿರ್ದೇಶಕರಾದ ಮನೋಹರ ಶೆಟ್ಟಿ ನಂದಳಿಕೆ ಮಾತನಾಡಿ, ಇಂದು ಇಲ್ಲಿ ನಡೆದ ಮಕ್ಕಳ ಸ್ಪರ್ಧೆಯನ್ನು ಕಂಡು ಖಷಿಯಾಗಿದೆ. ನಮ್ಮಲ್ಲಿ ಮಕ್ಕಳಿಗಾಗಿಯೇ ಇರುವ ಚಿಣ್ಣರಬಿಂಬದಂತಹ ಸಂಸ್ಥೆ ಇನ್ನೊಂದಿಲ್ಲ. ಈ ಸಂಸ್ಥೆಯ ರೂವಾರಿಗಳಿಗೂ, ಸ್ವಯಂಸೇವಕರಿಗೂ, ಮಕ್ಕಳಿಗಾಗಿ ತಮ್ಮ ಸಮಯ ಮೀಸಲಾಗಿಡುವ ಪಾಲಕರಿಗೂ ನಾನು ಅಭಿನಂದನೆಯನ್ನು ಸಲ್ಲಿಸುತ್ತೇನೆ. ಇಂಥ  ಸ್ಪರ್ಧೆಗಳಲ್ಲಿ ಮಕ್ಕಳು ಭಾಗವಹಿಸುವುದೆ ಒಂದು ದೊಡ್ಡ ಕೊಡುಗೆ. ಅದುವೇ ಬಹುಮಾನ ಎಂದರು.

ಇನ್ನೋರ್ವ ತೀರ್ಪುಗಾರರಾದ ಪಾಸ್‌ಪೋಲಿ ಕನ್ನಡ ಶಾಲೆಯ ಶಿಕ್ಷಕರಾದ ಪ್ರಕಾಶ್‌ ರೇವಿ ಅವರು ಮಕ್ಕಳ ಸ್ಪರ್ಧೆ ಉತ್ತಮವಾಗಿ ಮೂಡಿಬಂದಿದೆ. ಶ್ಲೋಕವನ್ನು ಕಲಿಸುವಾಗಲೇ ಉಚ್ಚಾರ ಸ್ಪಷ್ಟವಾಗಿ ಕಲಿಸಿಕೊಡಬೇಕು. ಇಲ್ಲವಾದರೆ ಅದು ಅಪಾರ್ಥವಾಗುತ್ತದೆ ಎಂದು ಸಲಹೆ ನೀಡಿದರು.

Advertisement

ಇನ್ನೋರ್ವ ಶಿಕ್ಷಕರಾದ  ಮಲ್ಲಿಕಾರ್ಜುನ ಬಾಲೆಗನ್‌ ಅವರು ವಿದ್ಯಾರ್ಥಿಗಳಿಗೆ ಹಿತನುಡಿಯನ್ನಾಡಿದರು. ವೇದಿಕೆಯಲ್ಲಿ  ಸಂಜೀವ ಪೂಜಾರಿ ತೋನ್ಸೆ, ಸಮಿತಿಯ ಸವಿತಾ ಕೆ. ಶೆಟ್ಟಿ, ವಲಯದ ಮುಖ್ಯಸ್ಥೆ ಆಶಾ ಶೆಟ್ಟಿ, ಶಿಬಿರದ ಮುಖ್ಯಸ್ಥೆ ಗಾಯತ್ರಿ ಪೂಜಾರಿ, ಸಾಂಸ್ಕೃತಿಕ ಸಮಿತಿಯ ಮುಖ್ಯಸ್ಥೆ ಮೀನಾ ಪೂಜಾರಿ ಉಪಸ್ಥಿತರಿದ್ದರು. ಉಮಾಮಹೇಶ್ವರಿ ಶಿಬಿರದ ಕನ್ನಡ ಶಿಕ್ಷಕಿ ಶಾಂತಿಲಕ್ಷಿ¾à ಉಡುಪ ಅವರನ್ನು ವಿಶೇಷವಾಗಿ ಗೌರವಿಸಲಾಯಿತು. ಕಳೆದ ಶೈಕ್ಷಣಿಕ ವರ್ಷದ ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಹಸ್ತಾಕ್ಷರ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ನೀಡಲಾಯಿತು. ಸುಪ್ರಿಯಾ ಉಡುಪ, ಶೌರ್ಯಾ ಶೆಟ್ಟಿ, ಪ್ರಜ್ಞಾ ಪೂಜಾರಿ ಸ್ಪರ್ಧಾ ಕಾರ್ಯಕ್ರಮ ನಿರೂಪಿಸಿದರು. ಶೋಭಾ ಶೆಟ್ಟಿ ಸಭಾ ಕಾರ್ಯಕ್ರಮವನ್ನು ನಿರೂಪಿಸಿ ವಿಜೇತರ ಯಾದಿಯನ್ನು ಓದಿದರು.

ಸ್ವಯಂಸೇವಕರಾದ  ಶೋಭಾ ಶೆಟ್ಟಿ, ಸರೋಜಾ ಶೆಟ್ಟಿ, ಆಶಾ ಪೂಜಾರಿ, ವಿಜಯ ಸಂಜೀವ ಪೂಜಾರಿ, ಲಕ್ಷಿ¾à ಶೆಟ್ಟಿ, ತನ್ವಿ ರಾವ್‌ ಸಹಕರಿಸಿದರು. ಚಿಣ್ಣರಬಿಂಬ ಎಸ್‌ಎಂ ಶೆಟ್ಟಿ ಶಿಬಿರದ ಕನ್ನಡ ಶಿಕ್ಷಕಿ ಅನಿತಾ ಶೆಟ್ಟಿ, ಅನಿತಾ ಯು. ಶೆಟ್ಟಿ, ಶಿಬಿರ ಮುಖ್ಯಸ್ಥೆ ಕವಿತಾ ಶೆಟ್ಟಿ, ಭಜನೆ ಶಿಕ್ಷಕಿ ವಿಮಲಾ ದೇವಾಡಿಗ, ಅಮಿತ್‌ ಶೆಟ್ಟಿ ಉಪಸ್ಥಿತರಿದ್ದು ಸಹಕರಿಸಿದರು. ಗಾಯತ್ರಿ ಪೂಜಾರಿ ಅವರು ವಂದಿಸಿದರು.

ಶ್ರೀಕೃಷ್ಣ ಉಡುಪ ಅವರು ತಬಲಾ ವಾದನ, ಸಮೂಹ ಗಾಯನ, ಕಿರು ಪ್ರಹಸನದ ಮೂಲಕ ಮಕ್ಕಳು ಸಭಿಕರನ್ನು ರಂಜಿಸಿದರು. ಚಿಣ್ಣರಿಗೆ ಚರ್ಚಾ ಸ್ಪರ್ಧೆ, ಏಕಪಾತ್ರಾಭಿನಯ, ಭಾವಗೀತೆ, ಶ್ಲೋಕ ಪಠಣ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.  ಸರೋಜಾ ಶೆಟ್ಟಿ, ಶಾಂತಿಲಕ್ಷಿ$¾à ಉಡುಪ, ಸುಪ್ರಿಯಾ ಉಡುಪ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಸಂಸ್ಥೆಯ ಸೀನಿಯರ್‌ ವಿದ್ಯಾರ್ಥಿಗಳಾದ ಬ್ರಿಜೇಶ್‌ ಕೋಟ್ಯಾನ್‌, ಸಿದ್ದೇಶ್‌ ಶೆಟ್ಟಿ, ಶ್ರೀನಿಧಿ ಉಡುಪ, ಶೌರ್ಯಾ ಶೆಟ್ಟಿ, ಸುಪ್ರಿಯಾ ಉಡುಪ, ಪ್ರಜ್ಞಾ  ಪೂಜಾರಿ, ಶ್ರುತಿ ಪೂಜಾರಿ, ಕೀರ್ತಿ ಪೂಜಾರಿ, ಸ್ವಯಂ ಶೆಟ್ಟಿ, ಸಂಯುಕ್ತಾ ಶೆಟ್ಟಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next