Advertisement
ಡಿ. 24ರಂದು ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಚಿಣ್ಣರ ಬಿಂಬದ 15ನೇ ವಾರ್ಷಿಕ ಚಿಣ್ಣರ ಉತ್ಸವದಲ್ಲಿ ಮಧ್ಯಾಹ್ನ ಆಯೋಜಿಸಲಾಗಿದ್ದ ಗುರುವಂದನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚಿಣ್ಣರ ಬಿಂಬದ ಮಕ್ಕಳಿಗೆ ಸಂಸ್ಕೃತಿ-ಸಂಸ್ಕಾರ, ಆಚಾರ-ವಿಚಾರಗಳನ್ನು ಕಲಿಸಿಕೊಡುವುದರೊಂದಿಗೆ ಅವರಲ್ಲಿ ಕ್ರೀಡಾಸಕ್ತಿ ಯನ್ನು ಬೆಳೆಸುವ ಕಾರ್ಯದಲ್ಲೂ ಪ್ರಕಾಶ್ ಭಂಡಾರಿ ಅವರು ತೊಡಗಬೇಕು. ಇದರಿಂದ ಮಕ್ಕಳ ಬೆಳವಣಿಗೆಯಾಗಲು ಸಾಧ್ಯವಿದೆ ಎಂದರು.
ಉದ್ಯಮಿ, ಕನ್ನಡಿಗ ಪತ್ರಕರ್ತರ ಸಂಘ ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷ ಡಾ| ಶಿವ ಮೂಡಿಗೆರೆ ಅವರು ಮಾತನಾಡಿ, ಚಿಣ್ಣರ ಪ್ರತಿಮೆಯನ್ನು ಕಂಡಾಗ ಆಶ್ಚರ್ಯವಾಗುತ್ತದೆ. ಪ್ರಕಾಶ್ ಭಂಡಾರಿ ಅವರ ಕುಟುಂಬವೇ ಚಿಣ್ಣರ ಬಿಂಬಕ್ಕೆ ಅರ್ಪಿಸಿಕೊಂಡಿರುವುದು ಹೆಮ್ಮೆಯಾಗುತ್ತಿದೆ. ಚಿಣ್ಣರ ಬಿಂಬದ ಮೂಲಕ ಇನ್ನಷ್ಟು ಮಕ್ಕಳು ಬೆಳೆದು ಪ್ರಸಿದ್ಧಿಯನ್ನು ಪಡೆಯಲಿ ಎಂದು ಹಾರೈಸಿದರು.
ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಲತಾ ಜೆ. ಶೆಟ್ಟಿ ಅವರು ಮಾತನಾಡಿ, ಎಲ್ಲಾ ವಲಯಗಳಲ್ಲಿ ಕನ್ನಡ ತರಗತಿಗಳು ನಡೆಯುತ್ತಿದ್ದು, ಮಕ್ಕಳ ಭಾಷಾಭಿಮಾನವನ್ನು ಬಿಂಬಿಸುತ್ತಿದೆ. ಮಕ್ಕಳ ಸಂಸ್ಕಾರ ಇತರರಿಗೆ ಮಾದರಿಯಾಗಿದೆ. ಚಿಣ್ಣರ ಬಿಂಬದ ಯಶಸ್ಸಿಗೆ ಹಿಂದೆ ಪ್ರಕಾಶ್ ಭಂಡಾರಿ ಅವರ ಮಾರ್ಗದರ್ಶನ, ಶ್ರಮ ಎದ್ದು ಕಾಣುತ್ತದೆ ಎಂದು ನುಡಿದರು.
ವೇದಿಕೆಯಲ್ಲಿ ಉದ್ಯಮಿಗಳಾದ ಕೃಷ್ಣ ವೈ. ಶೆಟ್ಟಿ, ವಿಶಾಲ ಜೆ. ಪಿ. ಶೆಟ್ಟಿ, ಚಿಣ್ಣರ ಬಿಂಬದ ರೂವಾರಿ ಪ್ರಕಾಶ್ ಭಂಡಾರಿ, ಸುರೇಂದ್ರ ಕುಮಾರ್ ಹೆಗ್ಡೆ, ವಿನೋದಿನಿ ಎಸ್. ಹೆಗ್ಡೆ, ಶುಭಲಕ್ಷಿ¾à ಶೆಟ್ಟಿ, ಭಾಸ್ಕರ ಶೆಟ್ಟಿ ತಾಳಿಪಾಡಿಗುತ್ತು, ಸಂಜೀವ ಪೂಜಾರಿ ತೋನ್ಸೆ, ಜಯಪ್ರಕಾಶ್ ಶೆಟ್ಟಿ, ವಿಜಯ ಕೋಟ್ಯಾದ್, ಗೀತಾ ಹೇರಳ, ವಿನಯ ಶೆಟ್ಟಿ, ಸಬಿತಾ ಆಳ್ವ, ಪ್ರತಿಭಾ ಶೆಟ್ಟಿ, ಶೋಭಾ ಶೆಟ್ಟಿ, ಸುಮಿತ್ರಾ ದೇವಾಡಿಗ, ಸುಕನ್ಯಾ ಸಫಲಿಗ ಮೊದಲಾದವರು ಉಪಸ್ಥಿತರಿದ್ದರು. ಕಲಾ ಸಂಘಟಕ ಕರ್ನೂರು ಮೋಹನ್ ರೈ, ವಿಕ್ರಂ ಪಾಟ್ಕರ್, ಪವಿತ್ರಾ ದೇವಾಡಿಗ ಅವರು ಕಾರ್ಯಕ್ರಮ ನಿರ್ವಹಿಸಿದರು.
Related Articles
Advertisement