Advertisement
ಜಿಲ್ಲೆಗೆ ಚೀನಾದಿಂದ 23 ಮಂದಿಯ ತಂಡ ಬಂದಿರುವ ವಿಷಯ ತಿಳಿದ ಹಿನ್ನೆಲೆಯಲ್ಲಿ ಅವರನ್ನು ಭೇಟಿ ಮಾಡಿದ ಆರೋಗ್ಯ ಇಲಾಖೆಯ ಅಧಿಕಾರಿಗಳು ಅವರ ರಕ್ತ ಹಾಗೂ ಕಫ ಮಾದರಿಯನ್ನು ಪುಣೆಯಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷಿಸಿದಾಗ ಕೊರೊನಾ ವೈರಸ್ ಲಕ್ಷಣಗಳು ಇಲ್ಲದಿರುವುದು ಕಂಡುಬಂದಿದೆ.
Related Articles
Advertisement
ಕೊರೊನ ವೈರಸ್ ಬಗ್ಗೆ ಆತಂಕ ಬೇಡ: ಜಿಲ್ಲೆಯಲ್ಲಿ ಹಲವು ಬಹುರಾಷ್ಟ್ರೀಯ ಕಂಪನಿಗಳು ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಚೀನಾ ಸೇರಿದಂತೆ ಇತರೆ ದೇಶಗಳ ಜನರು ಭೇಟಿ ನೀಡುತ್ತಾರೆ. ಕೊರೊನಾ ವೈರಸ್ ಆತಂಕವಿದ್ದರಿಂದ ಜ್ವರ, ಕೆಮ್ಮು, ನೆಗಡಿ ಕಾಣಿಸಿಕೊಂಡಿದ್ದ ಚೀನಾ ತಂಡದವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರಲ್ಲಿ ಅಂತಹ ವೈರಸ್ ಲಕ್ಷಣಗಳು ಇಲ್ಲದಿರುವುದು ಕಂಡುಬಂದಿದೆ. ಹೀಗಾಗಿ ಜಿಲ್ಲೆಯ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸ್ಪಷ್ಟಪಡಿಸಿದರು.
ಸರ್ವೇಕ್ಷಣಾಧಿಕಾರಿ ಚಾರಿಣಿ ಸ್ಪಷ್ಟನೆ: ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಾರಣಿ, ಹೋಟೆಲ್ ಸಿಬ್ಬಂದಿಯ ಮಾಹಿತಿ ಮೇರೆಗೆ ಚೀನಾ ತಂಡದವರನ್ನು ಭೇಟಿ ಮಾಡಿ ಅವರ ಕಫಾ ಹಾಗೂ ರಕ್ತದ ಮಾದರಿಯನ್ನು ಪುಣೆಯಲ್ಲಿರುವ ಲ್ಯಾಬ್‌ಗ ಕಳುಹಿಸಲಾಗಿತ್ತು. ಅದರಂತೆ ಅವರಲ್ಲಿ ಕೊರೊನದ ಯಾವುದೇ ಲಕ್ಷಣಗಳು ಇಲ್ಲದಿರುವುದು ಕಂಡುಬಂದಿದೆ ಎಂದು ಸ್ಪಷ್ಟನೆ ನೀಡಿದರು.
ಭಾಷೆ ಅರ್ಥವಾಗದೆ, ಅಧಿಕಾರಿಗಳ ಪರದಾಟ: ಕೊರೊನಾ ವೈರಸ್ ಕುರಿತು ಸಾರ್ವಜನಿರಲ್ಲಿ ಹರಡಿರುವ ಆತಂಕದ ಕುರಿತು ಚೀನಿಯರಿಗೆ ಆರ್ಥ ಮಾಡಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಹರಸಾಹಸ ಪಟ್ಟಿರುವ ಘಟನೆ ನಡೆದಿದೆ.
ಚೀನಾ ತಂಡವರಿಗೆ ಭಾರತೀಯ ಇಂಗ್ಲಿಷ್ ಅರ್ಥವಾಗದ ಹಿನ್ನೆಲೆಯಲ್ಲಿ ಅಧಿಕಾರಿಗಳು ಹೇಳಬೇಕಿರುವ ವಿಷಯ ಮುಟ್ಟಿಸಲು ಕೊನೆಗೆ ಗೂಗಲ್ ಟ್ರಾನ್ಸ್‌ಲೇಟರ್ ಬಳಸಬೇಕಾಯಿತು. ನಾನು ಹೇಳಬೇಕಾದ ವಿಷಯವನ್ನು ಗೂಗಲ್ ಟ್ರಾನ್ಸ್‌ಲೇಟರ್‌ನಲ್ಲಿ ಇಂಗ್ಲಿಷ್‌ನಲ್ಲಿ ಟೈಪ್ ಮಾಡಿ ಚೀನಾ ಭಾಷೆಗೆ ಭಾಷಾಂತರ ಮಾಡಿ ಅವರಿಗೆ ಮನವರಿಗೆ ಮಾಡಿಕೊಡಲಾಯಿತು ಎಂದು ಅಧಿಕಾರಿಯೊಬ್ಬರು ವಿವರಿಸಿದರು.