ಹೊಸದಿಲ್ಲಿ: ಒಂದೆಡೆ ಭಾರತ- ಚೀನಾ ಗಡಿಯಲ್ಲಿ ಯುದ್ದಾತಂಕದ ಕಾರ್ಮೋಡ ದಿನದಿಂದ ಹೆಚ್ಚುತ್ತಿದ್ದರೆ ಮತ್ತೊಂದೆಡೆ ಗಡಿ ಭಾಗದ ಫಾರ್ವರ್ಡ್ ಪೋಸ್ಟ್ ಗಳಲ್ಲಿ ಚೀನಿ ಸೈನಿಕರು ಧ್ವನಿ ವರ್ಧಕಗಳಲ್ಲಿ ಪಂಜಾಬಿ ಹಾಡುಗಳನ್ನು ಕೇಳುತ್ತಿದ್ದಾರೆ ಎಂದು ವರದಿಯಾಗಿದೆ.
ಲಡಾಖ್ ನ ಫಾರ್ವರ್ಡ್ ಪೋಸ್ಟ್ ಗಳಲ್ಲಿ ಇರುವ ಕೆಂಪು ಪಡೆಯ ಸೈನಿಕರು ಪಂಜಾಬಿ ಹಾಡುಗಳನ್ನು ನುಡಿಸುತ್ತಿದ್ದಾರೆ ಎಂದು ವರದಿಯಾಗಿದೆ. ಫಿಂಗರ್ 4 ಎಂದು ಕರೆಸಲ್ಪಡುವ ಎತ್ತರದ ಪ್ರದೇಶದಲ್ಲಿ ಭಾರತದ ಯೋಧರಿದ್ದು, ಚೀನಿ ಸೈನಿಕರು ತಮ್ಮ ಫಾರ್ವರ್ಡ್ ಪೋಸ್ಟ್ ನಲ್ಲಿ ಹಾಡುಗಳನ್ನು ಧ್ವನಿವರ್ಧಕದಲ್ಲಿ ಜೋರಾಗಿ ಪ್ಲೇ ಮಾಡುತ್ತಿದ್ದಾರೆ ಎನ್ನಲಾಗಿದೆ.
ಭಾರತೀಯ ಸೈನಿಕರ ಗಮನವನ್ನು ಬೇರೆ ಕಡೆ ಸೆಳೆಯಲು ಈ ರೀತಿ ಮಾಡುತ್ತಿರಬಹುದು ಎಂದು ಅಂದಾಜಿಸಲಾಗಿದೆ. ಮತ್ತೊಂದು ವರದಿಯ ಪ್ರಕಾರ ಒತ್ತಡದಲ್ಲಿರುವ ಚೀನಾ ಪಡೆಗಳು ಮೋಜಿಗಾಗಿ ಈ ರೀತಿ ಹಾಡುಗಳನ್ನು ಕೇಳುತ್ತಿರಬಹುದು ಎನ್ನಲಾಗಿದೆ.
ಇದನ್ನೂ ಓದಿ: ಸಿಎಎ ವಿರೋಧಿ ಪ್ರತಿಭಟನೆ, ದಂಗೆ; 15ಮಂದಿ ವಿರುದ್ಧ 17 ಸಾವಿರ ಪುಟ ಚಾರ್ಜ್‌ಶೀಟ್!
ವಾಸ್ತವ ನಿಯಂತ್ರಣ ರೇಖೆಯ ಬಳಿ ಚೀನಿ ಸೇನೆ ಕಳೆದ ವಾರ ಎರಡು ಬಾರಿ ವಾರ್ನಿಂಗ್ಸ್ ಶಾಟ್ಸ್ ಹಾರಿಸಿದೆ. ಭಾರತವೂ ಅದಕ್ಕೆ ಪ್ರತಿ ಉತ್ತರವನ್ನು ನೀಡಿದೆ.
ಮೂಲಗಳ ಪ್ರಕಾರ ಚೀನ ಮತ್ತು ಭಾರತದ ಪಡೆಗಳು ಸುಮಾರು 100ರಿಂದ 200 ಸುತ್ತಿನ ಗುಂಡು ಹಾರಿಸಿದೆ.