ಬೀಜಿಂಗ್: ಶುಕ್ರವಾರ ಭೂಮಿಗೆ ಬಂದಿಳಿದ ತನ್ನ ಗಗನ ನೌಕೆ Chang’e-5 ಚಂದ್ರನಂಗಳದಿಂದ 1,731 ಗ್ರಾಮ್ ನಷ್ಟು
ಮಾದರಿಯನ್ನು ಸಂಗ್ರಹಿಸಿ ತಂದಿದ್ದು, ಈ ಮಾದರಿಯನ್ನು ಅಧ್ಯಯನಕ್ಕಾಗಿ ಪರಿಣತ ತಂಡಕ್ಕೆ ಹಸ್ತಾಂತರಿಸಲಾಗಿದೆ ಎಂದು
ಚೀನದ ಬಾಹ್ಯಾಕಾಶ ಸಂಶೋಧನ ಸಂಸ್ಥೆ ಸಿಎನ್‌ಎಸ್‌ಎ ಶನಿವಾರ ಹೇಳಿದೆ.
ನಲವತ್ತು ವರ್ಷಗಳ ಅನಂತರ ಇಂಥದ್ದೊಂದು ಸಾಧನೆ ಮಾಡಿದ ಮೊದಲ ರಾಷ್ಟ್ರವೆಂಬ ಗರಿಮೆಯೂ ಚೀನಕ್ಕೆ ಸಂದಿದೆ. 40 ವರ್ಷಗಳ ಹಿಂದೆ ಅಮೆರಿಕ ತನ್ನ ಗಗನಯಾತ್ರಿಗಳನ್ನು ಚಂದ್ರನಿಂದ ಮಾದರಿ ತರಲು ಕಳುಹಿಸಿಕೊಟ್ಟಿತ್ತು. ಆ ಗಗನಯಾನಿಗಳನ್ನು ಸೋವಿಯತ್ ಒಕ್ಕೂಟದ ಗಗನ ನೌಕೆಯು ಚಂದ್ರನಂಗಳಕ್ಕೆ ಕರೆದೊಯ್ದು, ವಾಪಸ್ ಕರೆತಂದಿತ್ತು. ಗಮನಾರ್ಹ ಸಂಗತಿಯೆಂದರೆ, Chang’e-5 ಚಂದ್ರನ ಮೇಲೆ ಯಶಸ್ವಿಯಾಗಿ ಲ್ಯಾಂಡ್ ಮಾಡಿದ ಮೂರನೇ ಚೀನಿ ಗಗನ ನೌಕೆ.
ಇದನ್ನೂ ಓದಿ:ಬಿ.ಆರ್. ಶೆಟ್ಟಿ ಒಡೆತನದ ಫಿನಾಬ್ಲಿರ್ ಪಿಎಲ್‌ಸಿ ಸಂಸ್ಥೆ 73 ರೂ.ಗೆ ಮಾರಾಟ!