Advertisement

ಕೇರಳ ಪೊಲೀಸ್ ಠಾಣೆಯ ಸುತ್ತ ಚೀನಾ ಹಾವುಗಳು ! ಇದು ಕೋತಿಗಳ ಹಾವಳಿ ತಡೆಗೆ ಮಾಡಿದ ಹೊಸ ಪ್ಲಾನ್

02:42 PM Sep 15, 2022 | Team Udayavani |

ಕೇರಳ : ಸಾಮಾನ್ಯವಾಗಿ ಸಮಾಜದಲ್ಲಿ ಕಾನೂನು ಪಾಲಕರೆಂದರೆ ಅದು ‘ಪೊಲೀಸರು’ ಸುತ್ತ ಮುತ್ತ ಏನೇ ಸಮಸ್ಯೆ ಎದುರಾದರೂ ಅದಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ಪೊಲೀಸರ ಪಾತ್ರ ಬಹಳ ಪ್ರಮುಖ, ಆದರೆ ಕೇರಳದ ಇಡುಕ್ಕಿಯ ಅರಣ್ಯದ ಅಂಚಿನಲ್ಲಿರುವ ಪೊಲೀಸ್ ಠಾಣೆಗೆ ಮಾತ್ರ ‘ಹಾವುಗಳೇ’ ರಕ್ಷಕರು ಎಂಬಂತಾಗಿದೆ.

Advertisement

ಹೌದು.. ದಿನಬೆಳಗಾದರೆ ಕೋತಿಗಳ ಹಾವಳಿಯಿಂದ ಹೈರಾಣಾಗಿದ್ದ ಕೇರಳ-ತಮಿಳುನಾಡು ಗಡಿಯಲ್ಲಿರುವ ಕುಂಬುಮೆಟ್ಟು ಪೊಲೀಸ್ ಠಾಣೆಯ ಸಿಬ್ಬಂದಿಗಳು ಕೋತಿಗಳ ಹಾವಳಿ ತಡೆಗೆ ಹೊಸ ಮಾರ್ಗವೊಂದನ್ನು ಕಂಡುಹಿಡಿದಿದ್ದಾರೆ ಅದು ಚೀನಾದ ಹಾವುಗಳು. ಅದರಂತೆ ಪೊಲೀಸ್ ಠಾಣೆಯ ಸುತ್ತ ಚೀನಾ ಹಾವುಗಳನ್ನು ಬಿಟ್ಟಿದ್ದಾರೆ. ಅರೆ.. ಇದೇನಿದು ಕೋತಿಗಳಿಗಿಂತ ಹಾವುಗಳೇ ಹೆಚ್ಚು ಅಪಾಯಕಾರಿ ಅಂತದರಲ್ಲಿ ಠಾಣೆಯ ಸುತ್ತ ಹಾವುಗಳನ್ನು ಬಿಟ್ಟು ಜೇವಕ್ಕೆ ಅಪಾಯ ತಂದುಕೊಳ್ಳುತ್ತಿದ್ದಾರಾ ಎಂದು ಅಂದುಕೊಳ್ಳಬೇಡಿ, ಇದು ನಿಜ ಹಾವಲ್ಲ ಬದಲಾಗಿ ಚೀನಾ ಹಾವನ್ನೇ ಹೋಲುವ ಪ್ಲಾಸ್ಟಿಕ್ ಹಾವುಗಳು.

ಈ ಹಾವುಗಳನ್ನು ಠಾಣೆಯ ಸುತ್ತ ಇಟ್ಟ ಬಳಿಕ ಕೋತಿಗಳು ಠಾಣೆಯ ಹತ್ತಿರ ಬರುತ್ತಿಲ್ಲವಂತೆ ಇದರಿಂದ ಠಾಣೆಯ ಸಿಬ್ಬಂದಿಗಳಿಗೆ ನೆಮ್ಮದಿ ಸಿಕ್ಕಿದೆಯಂತೆ.

ಕೇರಳದಲ್ಲಿ ಪ್ಲಾಸ್ಟಿಕ್ ಹಾವುಗಳ ವ್ಯಾಪಾರ ಜೋರು :
ಕೋತಿಗಳ ತೊಂದರೆ ಇದ್ದ ಪ್ರದೇಶದಲ್ಲಿ ಈಗ ಪ್ಲಾಸ್ಟಿಕ್ ಹಾವುಗಳ ಕಾರುಬಾರು ಜೋರಾಗಿದೆ ಹಾಗಾಗಿ ಅಲ್ಲಿನ ಕೆಲವು ಜನರು ಪ್ಲಾಸ್ಟಿಕ್ ಹಾವುಗಳ ಮಾರಾಟ ಮಾಡುವ ವ್ಯಾಪಾರವನ್ನೇ ಮಾಡಿಕೊಂಡಿದ್ದಾರಂತೆ.

ಇದನ್ನೂ ಓದಿ : ಜೈಶ್ ಉಗ್ರ ಸಂಘಟನೆ ನಾಯಕ ಮಸೂದ್ ಅಫ್ಘಾನ್ ನಲ್ಲಿ ಇಲ್ಲ, ಪಾಕ್ ನಲ್ಲಿದ್ದಾನೆ; ತಾಲಿಬಾನ್

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next