Advertisement

Pakistan; ದೈವ ನಿಂದನೆ ಆರೋಪ: ಚೀನ ಪ್ರಜೆ ಬಂಧನ

08:20 PM Apr 17, 2023 | Team Udayavani |

ಇಸ್ಲಾಮಾಬಾದ್‌: ದೈವ ನಿಂದನೆ ಆರೋಪದಲ್ಲಿ ಪಾಕಿಸ್ತಾನದ ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದ ಕೊಹಿಸ್ತಾನ್‌ ಜಿಲ್ಲೆಯ ಜಲವಿದ್ಯುತ್‌ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಚೀನ ಪ್ರಜೆಯನ್ನು ಪೊಲೀಸರು ಬಂಧಿಸಿದ್ದಾರೆ. ಚೀನ ಗೆಝೌಬಾ ಗ್ರೂಪ್‌ ಕಂಪನಿಯ ಉದ್ಯೋಗಿ ದಸು ಜಲವಿದ್ಯುತ್‌ ಯೋಜನೆಯಲ್ಲಿ ಎಂಜಿನಿಯರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Advertisement

ದೈವ ನಿಂದನೆ ಮಾಡಿದ್ದಾರೆಂದು ಆರೋಪಿಸಿ ನೂರಾರು ನಾಗರಿಕರು ಕಚೇರಿ ಎದುರು ಜಮಾಯಿಸಿದ್ದರು. ಪರಿಸ್ಥಿತಿ ಕೈಮೀರುವುದನ್ನು ತಡೆಯವು ಪೊಲೀಸರು ಎಂಜಿಯರ್‌ನನ್ನು ಬಂಧಿಸಿದ್ದಾರೆ. ರಂಜಾನ್‌ನ ಪವಿತ್ರ ಮಾಸದಲ್ಲಿ ಈ ರೀತಿಯ ದೈವ ನಿಂದನೆ ಅಲ್ಲಿನ ಜನರನ್ನು ಮತ್ತಷ್ಟು ಕೆರಳಿಸಿದೆ. ಚೀನಾ ಪ್ರಜೆ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಹಲವೆಡೆ ಪ್ರತಿಭಟನೆಗಳು ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next