Advertisement

ಅಮೆರಿಕ ವಿರುದ್ಧ ಚೀನ “ಅಣಕು ಯುದ್ಧ ಪ್ರಯೋಗ’

01:07 AM Apr 22, 2021 | Team Udayavani |

ಬೀಜಿಂಗ್‌: ಅಮೆರಿಕ ವಿರುದ್ಧ ಚೀನ ಅಣಕು ಯುದ್ಧ ನಡೆಸಿದ್ದು, ವಿವಿಧ ರೀತಿಯ ಬಾಂಬ್‌ಗಳ ಪ್ರಯೋಗವನ್ನು ನಡೆಸಿದೆ.

Advertisement

ಪೂರ್ವ ಚೀನದಲ್ಲಿರುವ ಕ್ವಿನ್‌ಘಾಯ್‌ ಪ್ರಾಂತ್ಯದ ವಾಯುನೆಲೆಯೊಂದರಿಂದ ಪುಂಖಾನುಪುಂಖವಾಗಿ ಯುದ್ಧ ವಿಮಾನಗಳು ಆಗಸಕ್ಕೆ ನೆಗೆದು, ಈ ಪ್ರಯೋಗ ನಡೆಸಿವೆ. ಅದರಲ್ಲಿ ಎಚ್‌-6ಕೆ ಯುದ್ಧ ವಿಮಾನಗಳು ಭಾಗವಹಿಸಿದ್ದವು ಎಂದು ಡ್ರ್ಯಾಗನ್‌ನ ಸರಕಾರಿ ಸುದ್ದಿವಾಹಿನಿ “ಸಿಸಿಟಿವಿ’ ವರದಿ ಮಾಡಿದೆ.

ತೈವಾನ್‌ ದ್ವೀಪ ಸಮೂಹದ ವ್ಯಾಪ್ತಿಯಲ್ಲಿ ಶಾಂತಿಯುತ, ದ್ವೇಷಮಯ ವಾತಾವರಣಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಅಮೆರಿಕ ಮತ್ತು ಜಪಾನ್‌ ಜಂಟಿ ಹೇಳಿಕೆ ಬಿಡುಗಡೆ ಮಾಡಿದ ಬೆನ್ನಲ್ಲಿಯೇ ಯುದ್ಧ ಪ್ರಯೋಗ ನಡೆದಿದೆ. 1969ರ ಬಳಿಕ ಇದೇ ಮೊದಲ ಬಾರಿಗೆ ತೈವಾನ್‌ ದ್ವೀಪದ ಬಗ್ಗೆ ಎರಡೂ ದೇಶಗಳ ಜಂಟಿ ಹೇಳಿಕೆಯಲ್ಲಿ ಉಲ್ಲೇಖೀಸಲಾಗಿದೆ. ಈ ಬೆಳವಣಿಗೆ ಚೀನ ಕ್ರುದ್ಧಗೊಳ್ಳಲು ಕಾರಣವಾಗಿದೆ.

ಯುದ್ಧ ಪ್ರಯೋಗದಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಾಗಿರುವ ಏರ್‌ ಡಿಫೆನ್ಸ್‌ ಯುನಿಟ್‌ ಗಳನ್ನು ಬಳಕೆ ಮಾಡಲಾಗಿದೆ. ಮಂಜು ಕವಿದ ವಾತಾವರಣ ಇದ್ದರೂ ಯಶಸ್ವಿಯಾಗಿ ಪ್ರಯೋಗಗಳು ನಡೆದಿವೆ. ವಿವಿಧ ಹಂತಗಳಲ್ಲಿ ಬಾಂಬ್‌ಗಳನ್ನು ನೆಲಕ್ಕೆ ಹಾಕಿ, ಮತ್ತೆ ವಿಮಾನಗಳು ವಾಯು ನೆಲೆಗೆ ವಾಪಸಾಗಿವೆ ಎಂದು ಚೀನ ಸರಕಾರ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next