Advertisement
ಅಗ್ರ ಶ್ರೇಯಾಂಕದ ಸಾತ್ವಿಕ್-ಚಿರಾಗ್ ಅವರು ಇಂಡೊನೇಶ್ಯದ ಲಿಯೊ ರಾಲಿ ಕಾರ್ನಾಂಡೊ ಮತ್ತು ಡೇನಿಯಲ್ ಮಾರ್ತಿನ್ ಅವರನ್ನು 21-16, 21-14 ಗೇಮ್‌ಗಳಿಂದ ಉರುಳಿಸಿ ಅಂತಿಮ ನಾಲ್ಕರ ಸುತ್ತಿಗೇರಿದರು. ಈ ಹೋರಾಟ 46 ನಿಮಿಷಗಳಲ್ಲಿ ಮುಗಿದಿತ್ತು.
ಆದರೆ ಪುರುಷರ ಸಿಂಗಲ್ಸ್‌ನಲ್ಲಿ ಕಣದಲ್ಲಿ ಉಳಿದಿದ್ದ ಎಚ್. ಎಸ್. ಪ್ರಣಯ್ ಅವರ ಹೋರಾಟವು ಕ್ವಾರ್ಟರ್‌ಫೈನಲ್ ಹಂತದಲ್ಲಿ ಕೊನೆಗೊಂಡಿತು. ಜಪಾನಿನ ಕೊಡಾಯ್ ನರೋಕ ಅವರ ವಿರುದ್ಧ ನಡೆದ ಸೆಣಸಾಟದಲ್ಲಿ ಪ್ರಣಯ್ 9-21, 14-21 ಗೇಮ್‌ಗಳಿಂದ ಶರಣಾಗಿ ಹೊರಬಿದ್ದರು. ಪಂದ್ಯದ ಯಾವುದೇ ಹಂತದಲ್ಲೂ ಅವರು ಎದುರಾಳಿಗೆ ತಿರುಗೇಟು ನೀಡಲು ವಿಫಲರಾಗಿದ್ದರು.
Related Articles
Advertisement