Advertisement

ಆ್ಯಪ್‌ ಸಾಲ ಜಾಲ: ದಿಲ್ಲಿಯಲ್ಲಿ ಪೊಲೀಸರ ಬಲೆಗೆ ಬಿದ್ದ ಮತ್ತೊಬ್ಬ ಸೂತ್ರಧಾರ

06:58 PM Dec 31, 2020 | Team Udayavani |

ಹೈದರಾಬಾದ್‌: ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ ಬೆಳಕಿಗೆ ಬಂದಿರುವ ಆ್ಯಪ್‌ ಸಾಲ ಜಾಲಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಧಾನ ಸೂತ್ರಧಾರಿ ಚೀನಾದ ಮತ್ತೊಬ್ಬ ನಾಗರಿಕನನ್ನು ಬಂಧಿಸಿದ್ದಾರೆ.

Advertisement

ಬಂಧಿತ ಆರೋಪಿಯನ್ನು ಝು ವೈ ಅಲಿಯಾಸ್‌ ಲ್ಯಾಂಬೋ (27) ಎಂದು ಗುರುತಿಸಲಾಗಿದೆ. ಆತ ದೆಹಲಿ ವಿಮಾನ ನಿಲ್ದಾಣದಿಂದ ಶಾಂಘೈ ಮೂಲಕ ಫ್ರಾಂಕ್‌ಫ‌ರ್ಟ್‌ಗೆ ಪರಾರಿಯಾಗುವ ಹುನ್ನಾರ ನಡೆಸಿದ್ದ. ಆತನ ಜತೆಗೆ ಕೆ.ನಾಗರಾಜು ಎಂಬಾತನ್ನೂ ನವದೆಹಲಿಯಿಂದಲೇ ಮುತ್ತಿನ ನಗರಿಯ ಪೊಲೀಸರು ಬಂಧಿಸಿದ್ದಾರೆ.

ಸಾಲ ಜಾಲಕ್ಕೆ ಸಂಬಂಧಿಸಿದಂತೆ ಪೊಲೀಸರು ಒಟ್ಟು ನಾಲ್ವರು ಚೀನಾ ನಾಗರಿಕರನ್ನು ಬಂಧಿಸಿದ್ದಾರೆ. ಲ್ಯಾಂಬೋನ ಚಲನಲವನಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದರು. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಲ್ಯಾಂಬೋ ಎಂಬಾತನೇ ಕೋಟಿ ವ್ಯವಹಾರದ ಸೂತ್ರಧಾರಿ. ಆತನೇ ನಾಲ್ಕು ಕಂಪನಿಗಳ ನೇತೃತ್ವದ ವಹಿಸಿದ್ದ ಎನ್ನಲಾಗಿದೆ.

ದೆಹಲಿ ವಿಮಾನನಿಲ್ದಾಣದಲ್ಲಿ ಆತನನ್ನು ವಿಚಾರಿಸಿದಾಗ ಪ್ರಕರಣಕ್ಕೂ ತನಗೂ ಸಂಬಂಧವಿಲ್ಲ ಎಂದಿದ್ದ. ಪೊಲೀಸರು ಆತನ ಬಳಿ ಇದ್ದ ಲ್ಯಾಪ್‌ಟಾಪ್‌ ಅನ್ನು ಪರಿಶೋಧಿಸಿದಾಗ ಎಲ್ಲವೂ ಖಚಿತವಾಯಿತು.

ಇದನ್ನೂ ಓದಿ:ತರಗತಿಯಲ್ಲಿ ಕೂರುವ ವಿಚಾರದಲ್ಲಿ ಜಗಳ ಸಹಪಾಠಿಯನ್ನು ಗುಂಡಿಕ್ಕಿ ಕೊಂದ ವಿದ್ಯಾರ್ಥಿ

Advertisement

ಆರು ತಿಂಗಳಲ್ಲಿ 21 ಸಾವಿರ ಕೋಟಿ ವಹಿವಾಟು!
ಬಂಧಿತನಾಗಿರುವ ಝು ವೈ ಎಂಬಾತ ಮತ್ತು ಆತನ ಸಹಚರರು ಆರು ತಿಂಗಳ ಅವಧಿಯಲ್ಲಿ 1.4 ಕೋಟಿ ವಹಿವಾಟು ನಡೆಸಿ, 21 ಸಾವಿರ ಕೋಟಿ ರೂ. ನಡೆಸಿದ್ದಾರೆ. ಈ ಮಾಹಿತಿ ಗಮನಿಸಿ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ಈ ಮೊತ್ತ ಕೊರೊನಾ ಪಿಡುಗಿನಿಂದ ವೈಮಾನಿಕ ಸಂಸ್ಥೆಗಳಿಗೆ ಉಂಟಾಗಿರುವ ನಷ್ಟಕ್ಕೆ ಸಮನಾಗಿದೆ ಎಂದು ಹೈದರಾಬಾದ್‌ ಜಂಟಿ ಪೊಲೀಸ್‌ ಆಯುಕ್ತ ಅವಿನಾಶ್‌ ಮೊಹಾಂತಿ ಹೇಳಿದ್ದಾರೆ.

1.4 ಕೋಟಿ ವಹಿವಾಟಿನಲ್ಲಿ ಸಾಲ ನೀಡಿಕೆ ಮಾತ್ರ ನಡೆದಿದೆಯೋ ಅಥವಾ ಬೇರೆಯದ್ದು ಇದೆಯೋ ಎಂದು ತನಿಖೆಯಿಂದ ಗೊತ್ತಾಗಬೇಕಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next