Advertisement

ಚೀನ ಸಾಲದ ಆ್ಯಪ್‌ಗಳ ಹಗರಣ: 46 ಕೋಟಿ ರೂ.ಜಪ್ತಿ ಮಾಡಿದ ಇಡಿ

07:49 PM Sep 16, 2022 | Team Udayavani |

ಮುಂಬಯಿ: ಚೀನ ನಿಯಂತ್ರಿತ ಹೂಡಿಕೆ ಟೋಕನ್ ಅಪ್ಲಿಕೇಶನ್ ವಿರುದ್ಧ ದಾಳಿ ನಡೆಸಿದ ನಂತರ ಈಸ್ ಬಜ್ , ರೇಜರ್ ಪೇ,ಕ್ಯಾಶ್ ಫ್ರೀ ಮತ್ತು ಪೇಟಿಎಮ್ ನ ನಾಲ್ಕು ಆನ್‌ಲೈನ್ ಪಾವತಿ ಗೇಟ್‌ವೇ ಖಾತೆಗಳಲ್ಲಿ ಇರಿಸಲಾಗಿರುವ ವ್ಯಾಪಾರಿ ಘಟಕಗಳ 46.67 ಕೋಟಿ ರೂಪಾಯಿ ಹಣವನ್ನು ಜಪ್ತಿ ಮಾಡಿರುವುದಾಗಿ ಕೇಂದ್ರೀಯ ಸಂಸ್ಥೆ ಹೇಳಿದೆ.

Advertisement

ಜಾರಿ ನಿರ್ದೇಶನಾಲಯ ಚೀನಿ ಸಾಲದ ಅಪ್ಲಿಕೇಶನ್‌ಗಳ ಹಗರಣವನ್ನು ತನಿಖೆ ನಡೆಸುತ್ತಿದೆ ಮತ್ತು ಪೇಟಿಎಮ್, ರೇಜರ್ ಪೇ, ಈಸ್ ಬಜ್ ಮತ್ತು ಕ್ಯಾಶ್ ಫ್ರೀ ನಂತಹ ವ್ಯಾಪಕವಾಗಿ ಬಳಸಲಾಗುವ ಪಾವತಿ ಗೇಟ್‌ವೇ ಪ್ಲಾಟ್‌ಫಾರ್ಮ್‌ಗಳಿಗೆ ತನ್ನ ತನಿಖೆಯನ್ನು ವಿಸ್ತರಿಸಿ,  ಕಚೇರಿಗಳಲ್ಲಿ ದಾಳಿಗಳನ್ನು ಪ್ರಾರಂಭಿಸಿತ್ತು.

ಆ್ಯಪ್‌ ಆಧಾರಿತ ಸಾಲ ನೀಡುವ ಕಂಪನಿಗಳ ಕಾರ್ಯಾಚರಣೆಯಲ್ಲಿನ ಅಕ್ರಮಗಳ ಕುರಿತು ಬೆಂಗಳೂರಿನ ರೇಜರ್‌ಪೇ, ಪೇಟಿಎಂ ಮತ್ತು ಕ್ಯಾಶ್‌ಫ್ರೀ ಕಚೇರಿಗಳ ಮೇಲೆ ದಾಳಿ ನಡೆಸಿದ ಕೆಲವೇ ದಿನಗಳ ನಂತರ ಹಣವನ್ನು ಇಡಿ ಮನಿ ಲಾಂಡರಿಂಗ್ ವಿರೋಧಿ ಕಾನೂನಿನಡಿಯಲ್ಲಿ ಜಪ್ತಿ ಮಾಡಲಾಗಿದೆ. ವ್ಯಕ್ತಿಗಳು ಮತ್ತು ನಂತರ ಅವರ ಖಾತೆಗಳಲ್ಲಿ ಇರಿಸಲಾಗಿದ್ದ 17 ಕೋಟಿ ರೂ. ಹಣವನ್ನು ವಶಪಡಿಸಿಕೊಳ್ಳುವ ಆದೇಶವನ್ನು ನೀಡಲಾಗಿದೆ.

ಚೀನಿ ಸಾಲದ ಅಪ್ಲಿಕೇಶನ್ ಹಗರಣದ ತನಿಖೆಯು ದೇಶಾದ್ಯಂತ ಹಲವಾರು ಆತ್ಮಹತ್ಯೆ ಪ್ರಕರಣಗಳು ಬಯಲಿಗೆ ಬಂದಾಗ ಪ್ರಾರಂಭವಾಗಿದ್ದು, ಅಲ್ಲಿ ಜನರು ಸಾಲವನ್ನು ಮರುಪಾವತಿಸಲು ಸಾಧ್ಯವಾಗದೆ ಮತ್ತು ಕಂಪನಿಗಳಿಂದ ನಿರಂತರವಾಗಿ ಪೀಡಿಸಲ್ಪಟ್ಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next