Advertisement

ಲಡಾಖ್‌ ಸಮೀಪದ ಕೆರೆ ಚೀನಾದ “ದೋಣಿ ಕಾವಲು’

06:00 AM Apr 10, 2018 | |

ಬೀಜಿಂಗ್‌: ಡೋಕ್ಲಾಂ ಗಡಿ ವಿವಾದದ ನಂತರದಲ್ಲಿ ಇದೀಗ ಲಡಾಖ್‌ಗೆ ಹೊಂದಿಕೊಂಡಿರುವ ಗಡಿಯಲ್ಲಿರುವ ಪಾಂಗಾಂಗ್‌ ಕೆರೆಗೆ ಚೀನಾ ಸೇನೆ ವ್ಯಾಪಕ ಭದ್ರತೆ ಒದಗಿಸಿದೆ. ಹೊಸ ರಿತಿಯ ಪಹರೆ ಬೋಟ್‌ಅನ್ನು ಚೀನಾ ಸೇನೆ ಇಲ್ಲಿ ನಿಯೋಜಿಸಿದೆ. ಈ ಬೋಟ್‌ ಲೋಹವನ್ನು ಹೊಂದಿಲ್ಲದ್ದರಿಂದ, ನೀರು ಹಿಮಗಟ್ಟಿದರೂ ಬೋಟ್‌ಗೆ ಯಾವುದೇ ಹಾನಿಯಾಗುವುದಿಲ್ಲ. ಗಂಟೆಗೆ 40 ಕಿ.ಮೀ ವೇಗವನ್ನು ಇದು ಹೊಂದಿದೆ.

Advertisement

ಈ ಭಾಗದಲ್ಲಿ ಸರ್ವೇಕ್ಷಣೆ ಕ್ಯಾಮೆರಾವನ್ನೂ ನಿಯೋಜಿಸಲಾಗಿದ್ದು, ಯಾವುದೇ ಅಪಾಯಕರ ಸನ್ನಿವೇಶ ಎದುರಾದಾಗ ಸ್ಯಾಟಲೈಟ್‌ ಮೂಲಕ ಮುನ್ನೆಚ್ಚರಿಕೆ ನೀಡುವ ವ್ಯವಸ್ಥೆಯನ್ನೂ ಒದಗಿಸಲಿದೆ. ಚೀನಾ ತನ್ನ ಭದ್ರತಾ ವ್ಯವಸ್ಥೆ ಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇದು ಮಹತ್ವದ ಕ್ರಮವಾಗಿದೆ ಎಂದು ಹೇಳಲಾಗಿದೆ. ಈ ಕೆರೆ ಲಡಾಖ್‌ ಹಾಗೂ ಟಿಬೆಟ್‌ ಮಧ್ಯೆ ಇದ್ದು, ಮೂರೂ ದೇಶಗಳಿಗೆ ಅತ್ಯಂತ ಮಹತ್ವದ ಪ್ರದೇಶವಾಗಿದೆ. ಹಲವು ಬಾರಿ ಈ ಪ್ರದೇಶದಲ್ಲಿ ಚೀನಾ ಮತ್ತು ಭಾರತೀಯ ಸೇನೆಗಳು ಮುಖಾಮುಖೀಯಾಗಿವೆ.

ಕಳೆದ ಫೆಬ್ರವರಿಯಲ್ಲಿ ಜೆ-10 ಫೈಟರ್‌ ಜೆಟ್‌ ಮತ್ತು ಜೆ 11 ಟ್ವಿನ್‌ ಇಂಜಿನ್‌ ಯುದ್ಧವಿಮಾನಗಳನ್ನು ಈ ಗಡಿ ಭಾಗ ದಲ್ಲಿ ಚೀನಾ ನಿಯೋಜಿಸಿತ್ತು. ಈ ಭದ್ರತಾ ಹೆಚ್ಚಳದ ನಂತರ ದಲ್ಲಿ ಇದೀಗ ಸರ್ವೇಕ್ಷಣೆಯ ಕಡೆಗೆ ಗಮನ ಹರಿಸಿದಂತಿದೆ.

Advertisement

Udayavani is now on Telegram. Click here to join our channel and stay updated with the latest news.

Next