Advertisement

ಪವರ್‌ಗ್ರಿಡ್‌ ಹ್ಯಾಕ್‌ಗೆ ಚೀನ ಯತ್ನ!

12:16 AM Apr 08, 2022 | Team Udayavani |

ಹೊಸದಿಲ್ಲಿ: ಗಡಿಯಲ್ಲಿ ದುಸ್ಸಾಹಸ ಮೆರೆಯುತ್ತ ಪದೇ ಪದೆ ಭಾರತದ ತಂಟೆಗೆ ಬರುತ್ತಿರುವ ಚೀನ ವಾಮಮಾರ್ಗದ ಮೂಲಕವೂ ತೊಂದರೆ ಉಂಟುಮಾಡಲು ವಿಫ‌ಲ ಯತ್ನ ನಡೆಸಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ.

Advertisement

ಚೀನ ಸರಕಾರಿ ಪ್ರಾಯೋಜಿತ ಹ್ಯಾಕರ್‌ಗಳು ಕಳೆದ 8  ತಿಂಗಳಿನಿಂದ ಲಡಾಖ್‌ ಸಮೀಪದಲ್ಲಿರುವ ಭಾರತದ ಏಳು ವಿದ್ಯುತ್ಛಕ್ತಿ ವಿತರಣ ಕೇಂದ್ರಗಳನ್ನು ಗುರಿ ಮಾಡಿದ್ದರು ಎಂದು ಅಮೆರಿಕ  ಮೂಲದ “ರೆಕಾರ್ಡೆಡ್‌ ಫ್ಯೂಚರ್‌’ ಎಂಬ ಖಾಸಗಿ ಗುಪ್ತಚರ ಸಂಸ್ಥೆ ಹೇಳಿದೆ. ಪೂರ್ವ ಲಡಾಖ್‌ನಲ್ಲಿ ಎರಡೂ ದೇಶಗಳ ಸೇನೆಯ ನಡುವೆ ಸಂಘರ್ಷ ಮುಂದುವರಿದಿರುವಂತೆಯೇ ಈ ಬೆಳವಣಿಗೆ ನಡೆದಿದೆ. ಗುಪ್ತಚರ ಸಂಸ್ಥೆಯ ಮಾಹಿತಿಯನ್ನು ಕೇಂದ್ರ  ಸರಕಾರವೂ ದೃಢಪಡಿಸಿದೆ.

ರೆಕಾರ್ಡೆಡ್‌ ಫ್ಯೂಚರ್‌ ಹೇಳಿದ್ದೇನು? :

ಕಳೆದ ವರ್ಷದ ಆಗಸ್ಟ್‌ನಲ್ಲಿ ಮತ್ತು ಮಾರ್ಚ್‌ನಲ್ಲಿ ಚೀನದ ಹ್ಯಾಕರ್‌ಗಳು ಉತ್ತರ ಭಾರತದಲ್ಲಿ ಇರುವ ಕನಿಷ್ಠ 7 ಇಂಡಿಯನ್‌ ಸ್ಟೇಟ್‌ ಲೋಡ್‌ ಡಿಸ್ಪ್ಯಾಚ್‌ ಸೆಂಟರ್‌ (ಎಸ್‌ಎಲ್‌ಡಿಸಿ)ಗಳ ಮೇಲೆ ಸೈಬರ್‌ ಬೇಹುಗಾರಿಕೆಗೆ ಯತ್ನಿಸಿದ್ದಾರೆ ಎಂದು ರೆಕಾರ್ಡೆಡ್‌ ಫ್ಯೂಚರ್‌ ಹೇಳಿದೆ.

ಚೀನದ ಉದ್ದೇಶವೇನು? :

  1. ಭಾರತದ ವಿದ್ಯುತ್‌ ಮೂಲ ಸೌಕರ್ಯಗಳ ಮಾಹಿತಿ ಸಂಗ್ರಹಿಸಲು ಕಾರ್ಯಾಚರಣೆ
  2. ಭವಿಷ್ಯದ ಕಾರ್ಯಾಚರಣೆಗಳಿಗೆ ಬೇಕಾದ ಮಾಹಿತಿ ಹಾಗೂ ದತ್ತಾಂಶಗಳ ಸಂಗ್ರಹ
  3. ದೇಶದ ಸೂಕ್ಷ್ಮ ಮೂಲಸೌಕರ್ಯ ವ್ಯವಸ್ಥೆಗಳನ್ನು ದುರ್ಬಲಗೊಳಿಸುವುದು
Advertisement
Advertisement

Udayavani is now on Telegram. Click here to join our channel and stay updated with the latest news.

Next