Advertisement

ಆನ್‌ಲೈನ್‌ನಲ್ಲಿ ಬರುತ್ತಿವೆ ಚೀನ ಡ್ರೋನ್‌

12:49 AM Sep 09, 2021 | Team Udayavani |

ಬೆಂಗಳೂರು: ಶ್ರೀನಗರದಲ್ಲಿರು ಐಎಎಫ್ ನೆಲೆಯ ಮೇಲೆ ಡ್ರೋನ್‌ ದಾಳಿಯ ಬಳಿಕ ಹೊಸ ರೀತಿಯ ದಾಳಿ ವ್ಯವಸ್ಥೆ ದೇಶದ ಭದ್ರತೆಗೆ ಮಾರಕವಾಗಿ ಪರಿಣಮಿಸಬಹುದು ಎನ್ನುವುದು ದೃಢ ಪಟ್ಟಿದೆ. ಚೀನದಲ್ಲಿ ಉತ್ಪಾದನೆಯಾಗಿ ಬರುವ ಹಾರುವ ಆಟಿಕೆ ಗಳಿಂದಂತೂ ಹೆಚ್ಚಿನ ಅಪಾಯ ಇದ್ದು, ಅವುಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಗೃಹ ಇಲಾಖೆ ಮತ್ತು ರಾಜ್ಯದ ಪೊಲೀಸ್‌  ಅಧಿಕಾರಿಗಳ ನಡುವೆ ಮಾತು ಕತೆ ನಡೆಯುತ್ತಿದೆ.

Advertisement

ಕೇಂದ್ರ ಗೃಹ ಸಚಿವಾಲಯದ ಪ್ರಕಾರ ವಯರ್‌ಲೆಸ್‌ ರೇಡಿಯೋ ಹೊಂದಿರುವ ರಿಮೋಟ್‌ ಆಧಾರಿತ ಯಾವುದೇ ಮಾನವರಹಿತ (ಡ್ರೋನ್‌ ತಂತ್ರಜ್ಞಾನ ಆಧಾರಿತ) ಹಾರುವ ವಸ್ತು ಗಳು ಸಮಾಜ ಘಾತಕರ ಕೈಗೆ ಸಿಕ್ಕರೆ ಆಯುಧಗಳಾಗಿ ಪರಿವರ್ತನೆಯಾಗುವ ಸಾಧ್ಯತೆಯೇ ಹೆಚ್ಚು. ಅವುಗಳನ್ನು ಶಾಶ್ವತವಾಗಿ ನಿಷೇಧಿಸುವ ಸಲಹೆಗಳನ್ನು ಅಧಿಕಾರಿಗಳು ನೀಡಿದ್ದು, ಆ ಬಗ್ಗೆ ಯೋಚಿಸಲಾಗುತ್ತಿದೆ ಎಂದು ಅಧಿಕಾರಿ ಯೊಬ್ಬರು ತಿಳಿಸಿದ್ದಾರೆ.

ಸಂಸ್ಥೆಗಳ ಬಳಕೆಯತ್ತಲೂ ಕಣ್ಣು :

ರಾಜ್ಯದಲ್ಲಿ ವಾಯುನೆಲೆ, ಇಸ್ರೋ, ವಿಮಾನ ನಿಲ್ದಾಣಗಳು, ಜಲಾಶಯಗಳು ಮತ್ತಿತರ ಅನೇಕ ಸೂಕ್ಷ್ಮ ಘಟಕಗಳು ಇರುವುದರಿಂದ ಮತ್ತು ಬೆಂಗಳೂರು ಸಹಿತ ಪ್ರಮುಖ ಸ್ಥಳಗಳು ಅಭಿವೃದ್ಧಿ ಚಟುವಟಿಕೆಗಳು, ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳು ಸೇರಿದಂತೆ ಹಲವು ಕಾರಣಗಳಿಗೆ ವಿಶ್ವದ ಗಮನ ಸೆಳೆದಿರುವುದರಿಂದ ಸಹಜವಾಗಿಯೇ ಶತ್ರು ರಾಷ್ಟ್ರಗಳೂ ಕಣ್ಣಿಟ್ಟಿರುತ್ತವೆ. ಈ ಹಿನ್ನೆಲೆಯಲ್ಲಿ ಡ್ರೋನ್‌ಗಳ ದುರ್ಬಳಕೆ ಆಗಬಾರದು ಎಂದು ಗೃಹ ಇಲಾಖೆ ತನ್ನ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದೆ.

ಮುಖ್ಯವಾಗಿ ಕಾಲೇಜುಗಳು,ಸಂಶೋಧನ ಸಂಸ್ಥೆಗಳು ಡ್ರೋನ್‌ಗಳನ್ನು ಪ್ರಯೋ ಗಗಳಿಗೆ ಬಳಸುತ್ತವೆ. ಈ ಬಗ್ಗೆ ಸ್ಥಳೀಯ ಪೊಲೀಸ್‌ ಮತ್ತು ನಾಗರಿಕ ವಾಯುಯಾನ ನಿರ್ದೇಶನಾಲಯ (ಡಿಜಿಸಿಎ)ದ ಪರವಾನಿಗೆ ಬೇಕಿವೆ. ಆದರೆ ಪರವಾನಿಗೆ ಸಿಕ್ಕ ಬಳಿಕವೂ ಅದರ ದುರ್ಬಳಕೆಯ ಸಾಧ್ಯತೆಗಳಿವೆ. ಬೆಂಗಳೂರಿನ ಕಾಲೇಜೊಂದರ ವೈದ್ಯ ಅಬುರ್‌ ರೆಹಮಾನ್‌ ಐಸಿಸ್‌ ಜತೆ ಸಂಪರ್ಕ ಹೊಂದಿ ಆ್ಯಪ್‌ಗ್ಳ ಮೂಲಕ ಶಸ್ತ್ರಾಸ್ತ್ರ ಸಂಗ್ರಹಣೆ ಮತ್ತಿತರ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿ ಯಾಗಿರುವುದು ಎನ್‌ಐಎ ತನಿಖೆಯಿಂದ ಬೆಳಕಿಗೆ ಬಂದಿತ್ತು. ಬೆಂಗಳೂರು ಸರಣಿ ಸ್ಫೋಟದ ಆರೋಪಿ ಅಬ್ದುಲ್‌ ಸತ್ತಾರ್‌ ಕೇವಲ ರೇಡಿಯೋ ಮೆಕ್ಯಾನಿಕ್‌ ಆಗಿದ್ದರೂ ದೇಶದ ಹಲವು ಕಡೆ ನಡೆದ ಬಾಂಬ್‌ ಸ್ಫೋಟ ಪ್ರಕರಣಗಳ ತನಿಖೆಯಲ್ಲಿ ಪ್ರಮುಖ ಬಾಂಬ್‌ ತಯಾರಕ ಎಂದು ಪತ್ತೆಯಾಗಿತ್ತು. ಆದ್ದರಿಂದ ಇಂತಹ ಉಪಕರಣಗಳ ಬಗ್ಗೆ ಪೊಲೀಸರು ಮತ್ತಿತರ ತನಿಖಾ ಸಂಸ್ಥೆಗಳು ಯಾವತ್ತಿಗೂ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

Advertisement

ಡ್ರೋನ್ ಅಂದರೇನು? :

  • ಹಾರುವ ತಂತ್ರಜ್ಞಾನ ಅಳವಡಿ ಸಿರುವ ರೊಬೋಟ್‌ಗಳು
  • ಫೋಟೋಗಳನ್ನು ಕ್ಲಿಕ್ಕಿಸಬಹುದು
  • ಅತಿ ಸಣ್ಣ ಮತ್ತು ಮಧ್ಯಮ ಗಾತ್ರದ ವಸ್ತುಗಳನ್ನು ಒಯ್ದು ನಿಗದಿತ ಪ್ರದೇಶದಲ್ಲಿ ಬೀಳಿಸಬಹುದು
  • ನಮ್ಮ ಕಾನೂನಿನ ಪ್ರಕಾರ ನಾಗರಿಕ ಸೇವೆಗಳಿಗೆ, ರಕ್ಷಣ ಕಾರ್ಯಗಳಿಗೆ ಅಧಿಕೃತ ಸಂಸ್ಥೆಗಳು ಮಾತ್ರ ಬಳಸಬಹುದು

ಭಾರತದಲ್ಲಿ  ಡ್ರೋನ್ ಬೆದರಿಕೆ :

  • ಭಾರತದ ಗಡಿಯಲ್ಲಿ 2019ರಲ್ಲಿ 167 ಅನಾಮಿಕ ಡ್ರೋನ್‌ ಹಾರಾಟದ ವರದಿಗಳಾಗಿವೆ.
  • 2020ರಲ್ಲಿ ಗಡಿ ಪ್ರದೇಶಗಳಲ್ಲಿ 77 ಆಗಂತುಕ ಡ್ರೋನ್‌ಗಳ ಹಾರಾಟ ಪತ್ತೆಯಾಗಿವೆ.
  • 2019ರಲ್ಲಿ ಪಂಜಾಬ್‌ ಪೊಲೀಸರು ಡ್ರೋನ್‌ ಬೀಳಿಸಿ ಶಸ್ತಾಸ್ತ್ರ ವಶಪಡಿಸಿಕೊಂಡಿದ್ದಾರೆ.
  • 2020ರಲ್ಲೂ ಪಂಜಾಬ್‌ ಮತ್ತು ಜಮ್ಮು ಪೊಲೀಸರು ಅಂತಹ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
  • 2021ರಲ್ಲಿ 2 ಡ್ರೋನ್‌ಗಳನ್ನು ಭಾರತ ರಕ್ಷಣಾ ಘಟಕ ವಶಪಡಿಸಿಕೊಂಡಿದೆ.

-ನವೀನ್ ಅಮ್ಮೆಂಬಳ

Advertisement

Udayavani is now on Telegram. Click here to join our channel and stay updated with the latest news.

Next