Advertisement

ಚೀನ ಆ್ಯಪ್‌ಗಳ ನಿಷೇಧ ತೆರೆಯಲಿದೆ ದೇಸಿ ಬಾಗಿಲು

03:32 AM Jul 01, 2020 | Hari Prasad |

ಚೀನದ ಟೆಕ್‌ ಕಂಪನಿಗಳ 59 ಆ್ಯಪ್‌ಗಳನ್ನು ನಿಷೇಧಿಸಿ ಕೇಂದ್ರ ಸರಕಾರ ಸೋಮವಾರ ಆದೇಶ ಹೊರಡಿಸಿದೆ.

Advertisement

ಭಾರತದ ಸಮಗ್ರತೆ, ಸಾರ್ವಭೌಮತ್ವ ಹಾಗೂ ದೇಶದ ರಕ್ಷಣಾ ವ್ಯವಸ್ಥೆಗೆ ಧಕ್ಕೆ ತರುವ ಚಟುವಟಿಕೆಗಳನ್ನು ನಡೆಸುತ್ತಿರುವ ಕಾರಣ ಈ ಆ್ಯಪ್‌ಗಳನ್ನು ನಿಷೇಧಿಸಲಾಗಿದೆ.

ದೇಶವಾಸಿಗಳ ಸ್ಮಾರ್ಟ್‌ಫೋನ್‌ನಲ್ಲಿ ಅವಿಭಾಜ್ಯ ಅಂಗವೇ ಆಗಿರುವ ಟಿಕ್‌ ಟಾಕ್‌ (ಟಿಟಿ), ಕ್ಯಾಮ್‌ ಸ್ಕ್ಯಾನರ್‌, ಕ್ಲಬ್‌ ಫ್ಯಾಕ್ಟರಿ (ಸಿಎಫ್‌) ಮತ್ತು ಯುಸಿ ಬ್ರೌಸರ್‌ (ಯುಸಿಬಿ) ರೀತಿಯ ಪ್ರಮುಖ ಆ್ಯಪ್‌ಗಳನ್ನು ಫೋನ್‌ನಿಂದ ತೆಗೆಯಲೇಬೇಕಾದ ಪರಿಸ್ಥಿತಿ ಬಂದೊದಗಿದೆ. ಇದರಿಂದ ಭಾರತ ದಲ್ಲಿ ಆತ್ಮನಿರ್ಭರತೆಯ ಭಾಗವಾಗಿ ದೇಸಿ ಆ್ಯಪ್‌ಗ್ಳಿಗೆ ಅವಕಾಶ ಹೆಚ್ಚಲಿದೆ.

ನಿಷೇಧದ ಪರಿಣಾಮಗಳೇನು?

– ದೇಶದ ಸೋಷಿಯಲ್‌ ಮೀಡಿಯಾ ಮಾರುಕಟ್ಟೆ ಮೇಲೆ ಕಣ್ಣಿರಿಸಿದ್ದ ಚೀನ ಕಂಪನಿಗಳಿಗೆ ನಿರಾಸೆ.

Advertisement

– ಬಿಗೋ ಲೈವ್‌ ರೀತಿಯ ವಿಡಿಯೋ ಚಾಟಿಂಗ್‌ ಆ್ಯಪ್‌ಗಳು ಇಂಗ್ಲಿಷ್‌ ಬಾರದ ಭಾರತೀಯರ ವಲಯದಲ್ಲಿ ಭಾರೀ ಜನಪ್ರಿಯವಾಗಿದ್ದವು. ಪ್ರಸ್ತುತ ಇವುಗಳ ಬಳಕೆದಾರರು ಪರ್ಯಾಯ ಆ್ಯಪ್‌ ಮೊರೆ ಹೋಗಬೇಕು.

– ನಿಷೇಧಗೊಂಡ ಬಹುತೇಕ ಆ್ಯಪ್‌ಗಳು ಭಾರತೀಯ ಕ್ರಿಯೇಟರ್‌ಗಳನ್ನು ಹೊಂದಿದ್ದು, ಇವರಿಗೆಲ್ಲಾ ಈ ಆ್ಯಪ್‌ಗಳೇ ಆದಾಯದ ಮೂಲ.

– ಇವುಗಳ ನಿಷೇಧದಿಂದ ಭಾರತೀಯ ಉದ್ಯಮಿ, ತಂತ್ರಜ್ಞರಿಗೆ ಇಂಥ ಆ್ಯಪ್‌ಗಳನ್ನು ಸೃಜಿಸಲು, ಮಾರ್ಕೆಟ್‌ ಮಾಡಲು ಅವಕಾಶ.

– ಟಿಕ್‌ ಟಾಕ್‌ನಲ್ಲಿ ಭಾರತೀಯರು ಕಳೆಯುತ್ತಿರುವ ಸಮಯ 11 ದೇಶಗಳ ಜನರ ಮೀಸಲಿಟ್ಟ ಸಮಯಕ್ಕೆ ಸಮ.

– ಭಾರತದಲ್ಲಿ ಅತಿ ಹೆಚ್ಚು ಡೌನ್‌ಲೋಡ್‌ ಆದ 10 ಪ್ರಮುಖ ಆ್ಯಪ್‌ಗಳಲ್ಲಿ ಚೀನದ 6 ಆ್ಯಪ್‌ಗಳಿವೆ.

– ನಿಷೇಧಗೊಂಡಿರುವ 59 ಆ್ಯಪ್‌ಗಳ ಪೈಕಿ ಭಾರತದಲ್ಲಿ ಅತಿ ಹೆಚ್ಚು ಬಾರಿ ಡೌನ್‌ಲೋಡ್‌ ಆಗಿರುವ 25 ಆ್ಯಪ್‌ಗಳಿವೆ.

2019ರಲ್ಲಿ ಭಾರತೀಯರು ಟಿಕ್‌ಟಾಕ್‌ನಲ್ಲಿ ಕಳೆದ ಸಮಯ: 550 ಕೋಟಿ ಗಂಟೆ

2014ರಿಂದ ಈವರೆಗೆ ನಿಷೇಧಿತ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿರುವವರು: 490 ಕೋಟಿ

2018ರ ಜನವರಿಯಿಂದ ಇದುವರೆಗೆ ಟಿಕ್‌ಟಾಕ್‌ ಡೌನ್‌ಲೋಡ್‌ ಮಾಡಿದವರು: 65 ಕೋಟಿ

ಮೇನಲ್ಲಿ ಟಿಟಿ, ಸಿಎಫ್‌, ಯುಸಿಬಿ ಆ್ಯಪ್‌ ಬಳಸಿದವರು: 50 ಕೋಟಿ

ಟಿಕ್‌ಟಾಕ್‌ನ ಮಾಸಿಕ ಸಕ್ರಿಯ ಬಳಕೆದಾರರು: 10 ಕೋಟಿ

2019ರಲ್ಲಿ ನಿಷೇಧಕ್ಕೊಳಗಾದಾಗ ಟಿಕ್‌ಟಾಕ್‌ಗೆ ದಿನವೊಂದಕ್ಕೆ ಆದ ನಷ್ಟ: 3.7 ಕೋಟಿ ರೂ.

Advertisement

Udayavani is now on Telegram. Click here to join our channel and stay updated with the latest news.

Next