ಚಿಂಚೋಳಿ : ತಾಲೂಕಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕೆಳದಂಡೆ ಮುಲ್ಲಾಮಾರಿ ಜಲಾಶಯ ಹಾಗೂ ಚನ್ನಪಟ್ಟಣ ಜಲಾಶಯ ಭರ್ತಿಯಾಗಿ 2 ಜಲಾಶಯದಿಂದ ಗೇಟ್ ಗಳ ಮೂಲಕ ನೀರು ಹರಿಬಿಡಲಾಗಿದೆ.
ಮುಲ್ಲಾಮಾರಿ ನದಿ ದಂಡೆಯಲ್ಲಿರುವ ತಾಜ್ಲಾಪುರ್ ಗೌಡನಹಳ್ಳಿ ಗಾರಂಪಳ್ಳಿ ಕನಕಪುರ ಗರಗಪಳ್ಳಿ ಪೋಲಕಪಳ್ಳಿ ಬ್ಯಾರೇಜ್ ಮೇಲೆ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತಿದೆ .
ಇದರಿಂದಾಗಿ ರಸ್ತೆ ಸಂಪರ್ಕ ಸಂಪೂರ್ಣ ಕಡಿತವಾಗಿದೆ. ತಾಲ್ಲೂಕಿನ ಮುಲ್ಲಾಮಾರಿ ನದಿ ಉಕ್ಕಿ ಹರಿಯುತ್ತಿದೆ.
ಕುಂಜರ ವನ್ಯಜೀವಿ ಧಾಮದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ತೆಲಂಗಾಣದ ಕೊಹಿರ ನದಿ ತುಂಬಿ ಹರಿಯುತ್ತಿದೆ. ನದಿಯ ಕೆಳಭಾಗದಲ್ಲಿರುವ ಎತ್ತಪೋತ ಜಲಾಗಾರಕ್ಕೆ ಅಧಿಕ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದರಿಂದ ಜಲಧಾರೆ ಮೈದುಂಬಿ ಹರಿಯುತ್ತಿದೆ ಇದರಿಂದ ಜಲಧಾರೆಯನ್ನು ನೋಡಲು ವಿವಿಧ ಕಡೆಗಳಿಂದ ಸಾವಿರಾರು ಪ್ರವಾಸಿಗರು ಇಲ್ಲಿಗೆ ಆಗಮಿಸಿ ಆನಂದ ಪಡುತ್ತಿದ್ದಾರೆ.
ಅಲ್ಲದೆ ಮಾಣಿಕಪುರ ಜಲಧಾರೆ ಕೂಡ ಮೈ ತುಂಬಿ ಹರಿಯುತ್ತಿದೆ. ತೆಲಂಗಾಣದ ಜಹೀರಾಬಾದ್ ಬೀದರಚಿಂಚೋಳಿ ತಾಂಡೂರು ಕುಂಚಾವರಂ ವಿವಿಧ ಕಡೆಗಳಿಂದ ಪ್ರವಾಸಿಗರು ಇಲ್ಲಿಗೆ ಆಗಮಿಸಿ ಮೈದುಂಬಿ ಹರಿಯುತ್ತಿರುವ ಜಲಧಾರೆಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ : ಹುಣಸೂರು : ಬಹುರ್ದೆಸೆಗೆ ತೆರಳಿದ್ದ ವ್ಯಕ್ತಿಯ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು