Advertisement

ಚಿಂಚೋಳಿ: ಚಂದ್ರಪಳ್ಳಿ-ಚಿಕ್ಕನಿಂಗದಳ್ಳಿಕೆರೆ ಸುತ್ತ ಕೆರೆ ಸುತ್ತ ಹಕ್ಕಿಗಳ ಕಲರವ

06:00 PM May 29, 2023 | Team Udayavani |

ಚಿಂಚೋಳಿ: ತಾಲೂಕಿನ ಚಂದ್ರಂಪಳ್ಳಿ ಮತ್ತು ಚಿಕ್ಕನಿಂಗದಳ್ಳಿ ಕೆರೆ ಅಕ್ಕಪಕ್ಕ ವಲಸೆ ಹಕ್ಕಿಗಳು ಆಗಮಿಸಿದ್ದು, ಪಕ್ಷಿ ಪ್ರೇಮಿಗಳ ಮನಸೂರೆಗೊಂಡಿವೆ. ವಿವಿಧ ಭಾಗಗಳಿಂದ ಆಗಮಿಸುವ ಈ ಅತಿಥಿಗಳು ಕೆರೆ ಅಕ್ಕಪಕ್ಕದ ಗಿಡ-ಮರಗಳ ಆಶ್ರಯ ಪಡೆದಿವೆ.

Advertisement

ಸಂತಾನೋತ್ಪತ್ತಿಗೆಂದು ದೂರ ದೂರದ ಪ್ರದೇಶಗಳಿಂದ ಲಗ್ಗೆ ಇಡುವ ಈ ಬಾನಾಡಿಗಳು ಗಿಡ-ಮರಗಳ ಪೊಟರುಗಳಲ್ಲಿ ಗೂಡು ಕಟ್ಟಿಕೊಂಡು ಮಳೆಗಾಲ ಮುಗಿಯುವವರೆಗೆ ಇಲ್ಲಿಯೇ ವಾಸವಾಗಿರುತ್ತವೆ.

ಚಂದ್ರಂಪಳ್ಳಿ ಮತ್ತು ಚಿಕ್ಕನಿಂಗದಳ್ಳಿ ಈ ಎರಡೂ ಕೆರೆಗಳು ಹಕ್ಕಿಗಳ ನಿವಾಸ ಸ್ಥಾನವಾಗಿದ್ದು, ಹಕ್ಕಿಗಳ ಚಿಲಿಪಿಲಿ ನಿನಾದ ಕರ್ಣಗಳಿಗೆ ಹಿತವನ್ನುಂಟು ಮಾಡುತ್ತವೆ. ಬಣ್ಣಬಣ್ಣದ ಈ ಹಕ್ಕಿಗಳು ಕಣ್ಣಿಗೆ ಮುದ ನೀಡುತ್ತಿವೆ. ಗೊಟ್ಟಂಗೊಟ್ಟ, ಸೇರಿಭಿಕನಳ್ಳಿ, ಮಂಡಿ ಬಸವಣ್ಣ, ಲಾಲ್‌ತಲಾಬ್‌ ಪ್ರದೇಶಗಳಲ್ಲಿ ಆಶ್ರಯ ಪಡೆಯುವ ಕೆಂಪು ರಾಟವಾಳ, ಚುಕ್ಕೆ ರಾಟವಾಳ, ನವಿಲು, ಬಾರ್‌ ಹೆಡ್ಡೆಡ್‌, ಗೂಸ, ಬ್ರಾಹ್ಮಣಿ ಮೈನಾ, ಹಳದಿ ಕಣ್ಣಿನ ಹರಟೆಮಲ್ಲ, ಬಣ್ಣದ ಕೊಕ್ಕರೆಗಳು(ಅತಿಥಿಗಳು) ಸೇರಿದಂತೆ ವಿವಿಧ ಜಾತಿಯ ಪಕ್ಷಿಗಳು ಈಗ ಎಲ್ಲರ ಕಣ್ಮನ ಸೆಳೆಯುತ್ತಿವೆ.

ಕುಂಚಾವರಂ ವನ್ಯಜೀವಿಧಾಮ ಅರಣ್ಯ ಪ್ರದೇಶದೊಳಗೆ ಇರುವ ಚಂದ್ರಂಪಳ್ಳಿ ಮತ್ತು ಚಿಕ್ಕನಿಂಗದಳ್ಳಿ ಸಣ್ಣ ನೀರಾವರಿ ಕೆರೆಗೆ
ವಲಸೆ ಹಕ್ಕಿಗಳು ಬಂದು ಗೂಡು ಕಟ್ಟಿಕೊಂಡು, ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಮಾಡುತ್ತವೆ. ಇಲ್ಲಿ ತಂಪು ವಾತಾವರಣ ಇರುವುದರಿಂದ ಇವುಗಳಿಗೆ ತುಂಬಾ ಅನುಕೂಲವಾಗಿದೆ.
*ಸಂಜೀವಕುಮಾರ ಚವ್ಹಾಣ,
ಅರಣ್ಯಾಧಿಕಾರಿ, ವನ್ಯಜೀವಿಧಾಮ

ಚಂದ್ರಂಪಳ್ಳಿ, ಚಿಕ್ಕನಿಂಗದಳ್ಳಿ ಸೇರಿದಂತೆ ಕುಂಚಾವರಂ ಮೀಸಲು ಅರಣ್ಯದಲ್ಲಿ ಸಣ್ಣ-ಸಣ್ಣ ಪಕ್ಷಿಗಳು ಬಿಸಿಲಿನ ತಾಪದಿಂದ
ತಪ್ಪಿಸಿಕೊಳ್ಳಲು ಗಿಡಮರಗಳ ಪೊಟರುಗಳಲ್ಲಿ ಆಸರೆ ಪಡೆದುಕೊಳ್ಳುತ್ತಿವೆ. ವಿವಿಧ ಜಾತಿಯ ಹಕ್ಕಿಗಳು, ಗಿಳಿ, ಕೊಕ್ಕರೆ, ಗುಬ್ಬಿ, ವಿವಿಧ ಜಾತಿಯ ಪಕ್ಷಿಗಳು ನೆರಳಿನಾಸರೆ ಪಡೆದು ಸಂಜೆ ತಂಪು ವಾತಾವರಣದಲ್ಲಿ ಬಾನಲ್ಲಿ ಹಾರಾಡುತ್ತವೆ.
ಸಿದ್ಧಾರೂಢ ಹೊಕ್ಕುಂಡಿ
ಉಪ ವಲಯ ಅರಣ್ಯಾಧಿಕಾರಿ, ಚಿಂಚೋಳಿ

Advertisement

*ಶಾಮರಾವ ಚಿಂಚೋಳಿ

Advertisement

Udayavani is now on Telegram. Click here to join our channel and stay updated with the latest news.

Next