ಕಲಬುರಗಿ : ಕಲಬುರಗಿ ಜಿಲ್ಲೆಯ ಚಿಂಚೋಳಿ ಸ್ಥಳೀಯ ಪುರಸಭೆ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ವೆಂಕಟಮ್ಮ ದಿಲೀಪ್ ಕುಮಾರ್ ಭರ್ಜರಿ ವಿಜಯ ಸಾಧಿಸಿದ್ದಾರೆ.
ಕಾಂಗ್ರೆಸ್ ಪುರಸಭೆ ಸದಸ್ಯೆ ವಿದ್ಯಾವತಿ ನರಸಪ್ಪ ಗಾಲಿಯವರ ಅಕಾಲಿಕ ನಿಧನದಿಂದ ತೆರವುಗೊಂಡಿದ್ದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಅವರ ಸೊಸೆ ವೆಂಕಟಮ್ಮ ದಿಲೀಪ್ ಕುಮಾರ್ ಖಾಲಿ 267 ಮತಗಳನ್ನು ಪಡೆದುಕೊಂಡು ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಸುಜಾತಾ ಜನಾರ್ದನ್ ನಾಟಿಕಾರ್ 179 ಮತಗಳು, ಜೆಡಿಎಸ್ ಮಮ್ತಾಜ್ ಜಬ್ಬರ್ ಮಿಯ 26 ಮತಗಳನ್ನು ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ವೆಂಕಟಮ್ಮ ದಿಲೀಪ್ ಕುಮಾರ್ ಅವರು ೮೮ಅಧಿಕ ಮತಗಳಿಂದ ವಿಜಯ ಸಾಧಿಸಿದ್ದಾರೆ.
ಉಪಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ನಮಗೊಂದು ಐತಿಹಾಸಿಕ ಗೆಲುವು ಆಗಿದೆ.ಏಕೆಂದರೆ ಬಿಜೆಪಿ ಶಾಸಕರು ಸಂಸದರು ಉಪಚುನಾವಣೆಯಲ್ಲಿ ಚುನಾವಣೆಯಲ್ಲಿ ಬಿಜೆಪಿ ಸಂಸದರು ಶಾಸಕರು ಪ್ರಚಾರ ನಡೆಸಿದರೂ ಕೂಡ ಮತದಾರರು ಮಾತ್ರ ಕಾಂಗ್ರೆಸ್ಸಿಗೆ ಹೆಚ್ಚಿನ ಮತಗಳನ್ನು ನೀಡಿ ಮತದಾರರು ನಮಗೆ ಬೆಂಬಲಿಸಿದ ನಮಗೆ ಹೆಚ್ಚಿನ ಶಕ್ತಿ ಬಂದಿದೆ ಎಂದು ಮುಖಂಡರು ಪಟ್ಟಣದಲ್ಲಿ ಪಟಾಕಿಸಿಡಿಸಿ ಸಿಹಿ ತಿಂಡಿಗಳನ್ನು ಹಂಚಿಕೊಂಡು ಸಂಭ್ರಮಿಸಿದರು.
ಇದನ್ನೂ ಓದಿ : ಪಿಡಿಒಗಳಿಗೆ ಕೆಲಸದ ಹೊರೆ, ಜನಸಾಮಾನ್ಯರಿಗೆ ಅಲೆದಾಟದ ಬರೆ