Advertisement

ದಿನಸಿ-ತರಕಾರಿ ಸಾಗಾಟಕ್ಕೆ ನಿರ್ಬಂಧವಿಲ್ಲ

05:36 PM Apr 09, 2020 | Naveen |

ಚಿಂಚೋಳಿ: ರೈತರು ಬೆಳೆದ ದವಸ-ಧಾನ್ಯ ಮತ್ತು ತರಕಾರಿ, ಹಣ್ಣು-ಹಂಪಲು ಮಾರುಕಟ್ಟೆಗೆ ಸಾಗಿಸಿ ಮಾರಾಟ ಮಾಡಲು ಯಾವುದೇ ನಿರ್ಬಂಧವಿಲ್ಲ, ರೈತರು ಸಾಗಿಸುವ ವಾಹನಗಳಿಗೆ ಪೊಲೀಸರು ತಡೆಯೊಡ್ಡಬಾರದು ಎಂದು ಸಂಸದ ಭಗವಂತ ಖೂಬಾ ಹೇಳಿದರು.

Advertisement

ಪಟ್ಟಣದ ಸಿ.ಬಿ. ಪಾಟೀಲ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ “ಗರೀಬ್‌ ಕಲ್ಯಾಣ ಪ್ಯಾಕೇಜ್‌’ ಯೋಜನೆ ಜಾರಿಗೊಳಿಸಿದ್ದಾರೆ. ಇದರಲ್ಲಿ ಸಾಕಷ್ಟು ಜನಪರ ಯೋಜನೆಗಳಿವೆ. ಜನರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.

ದೇಶದ ಅರ್ಥವ್ಯವಸ್ಥೆ ಹಾಳಾದರೂ ಜನರ ಜೀವ ಉಳಿಸುವ ಪ್ರಯತ್ನ ನಮ್ಮದಾಗಿದೆ. ಕೊರೊನಾ ವೈರಸ್‌ದಿಂದಾಗಿ ದೇಶ ಗಂಭೀರ ಸಮಸ್ಯೆ ಎದುರಿಸುತ್ತಿದೆ. ಲಾಕ್‌ಡೌನ್‌ದಿಂದ ರೈತರು ಸಾಕಷ್ಟು ತೊಂದರೆಪಡುತ್ತಿದ್ದಾರೆ. ಅವರಿಗೆ ಯಾವುದೇ ರೀತಿಯ ತೊಂದರೆ ಕೊಡಬೇಡಿ ಎಂದು ಡಿವೈಎಸ್ಪಿಗೆ ಸೂಚಿಸಿದರು. ಹಳ್ಳಿಗಳಿಗೆ ಭೇಟಿ ನೀಡುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಯಾರು ಹಲ್ಲೆ ಮಾಡುತ್ತಾರೋ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೋ ಅವರ ವಿರುದ್ಧ ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಳ್ಳಬೇಕು. ಏ.14ರ ನಂತರ ಜನರು ಮನೆಯಿಂದ ಹೊರಗೆ ಬರುವುದು ಸಹಜ. ಆಸ್ಪತ್ರೆಗೆ ಹೋಗುವವರಿಗೆ  ಸ್ಸಿನ ವ್ಯವಸ್ಥೆ ಮಾಡಬೇಕು. ಲಾಕ್‌ಡೌನ್‌ದಿಂದಾಗಿ ಯಾವುದೇ ದುಷ್ಪರಿಣಾಮ ಆಗದಂತೆ ಎಲ್ಲ ಅ ಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗಿದೆ ಎಂದರು.

ಶಾಸಕ ಡಾ| ಅವಿನಾಶ ಜಾಧವ ಮಾತನಾಡಿ, ಕೊರೊನಾ ವೈರಸ್‌ ಹರಡದಂತೆ ಎಲ್ಲ ತಾಲೂಕಿನ ಅಧಿಕಾರಿಗಳು ಉತ್ತಮವಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು. ತಹಶೀಲ್ದಾರ್‌ ಅರುಣಕುಮಾರ ಕುಲಕರ್ಣಿ, ಡಿವೈಎಸ್ಪಿ ಇ.ಎಸ್‌. ವೀರಭದ್ರಯ್ಯ, ಮುಖ್ಯಾಧಿಕಾರಿ ಅಭಯಕುಮಾರ, ಇಒ ಅನೀಲಕುಮಾರ ರಾಠೊಡ, ಎಇಇ ಬಸವರಾಜ ನೇಕಾರ, ಸಿಪಿಐ ಎಚ್‌.ಎಂ. ಇಂಗಳೇಶ್ವರ, ವಿಜಯ ಮಹಾಂತೇಶ ಮಠಪತಿ, ಎಪಿಎಂಸಿ ಕಾರ್ಯದರ್ಶಿ ಸವಿತಾ ಗೋಣಿ, ಡಾ| ಧನರಾಜ ಬೊಮ್ಮ, ಎಇಇ ಗುರುರಾಜ ಕುಲಕರ್ಣಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next