Advertisement

ಉಪವಾಸ ಸತ್ಯಾಗ್ರಹ:ಐವರು ಅಸ್ವಸ್ಥ

11:21 AM Oct 18, 2019 | Team Udayavani |

ಚಿಂಚೋಳಿ: ಪಟ್ಟಣದ ಹೊರ ವಲಯ ಪೋಲಕಪಳ್ಳಿ ಬಳಿ ಸ್ಥಾಪಿಸಲಾಗಿರುವ ಮೆಟ್ರಿಕ್ಸ್‌ ಅಗ್ರೋ ಪ್ರಾವೇಟ್‌ ವಿದ್ಯುತ್‌ ಉತ್ಪಾದನಾ ಘಟಕ ಬಂದ್‌ ಮಾಡುವಂತೆ ಒತ್ತಾಯಿಸಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹದಲ್ಲಿ ಐವರು ಅಸ್ವಸ್ಥರಾಗಿದ್ದು, ವೈದ್ಯರು ಧರಣಿ ಸ್ಥಳದಲ್ಲಿ ಗುರುವಾರ ಚಿಕಿತ್ಸೆ ನೀಡಿದರು.

Advertisement

ಮೆಟ್ರಿಕ್ಸ್‌ ಅಗ್ರೋ ಪ್ರಾವೇಟ್‌ ವಿದ್ಯುತ್‌ ಉತ್ಪಾದನಾ ಘಟಕ ವಿಷಾನೀಲ ಬಿಡುತ್ತಿದೆ. ಇದರಿಂದ ಸಾರ್ವಜನಿಕರು ಮತ್ತು ಶಾಲೆ ಕಾಲೇಜು ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹಾಗಾಗಿ ಘಟಕ ಬಂದ್‌ ಮಾಡುವಂತೆ ಒತ್ತಾಯಿಸಿ ತಾಲೂಕು ನಾಗರಿಕ ಹಿತರಕ್ಷಣಾ ವೇದಿಕೆ ಮುಖಂಡರು ಕಳೆದ ನಾಲ್ಕು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಮುಖಂಡರಾದ ವಿಶ್ವನಾಥ ಬೀರನಳ್ಳಿ, ಸಂತೋಷ ಗುತ್ತೇದಾರ, ಲೋಕೇಶ ಐನೋಳಿ, ಗೋಪಾಲ ರಾಂಪೂರೆ, ಆನಂದ ಟೈಗರ್‌, ಉಲ್ಲಾಸ ಕೆರೋಳಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಡಾ| ಮಹಮ್ಮದ್‌ ಶಫೀ, ಡಾ| ಮಹಮ್ಮದ್‌ ಗಫಾರ, ತಾಲೂಕು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿ ಕಾರಿ ಸಂಜಯ ಗೋಳೆ ಹಾಗೂ ಸಿಬ್ಬಂದಿ ಸ್ಥಳದಲ್ಲಿಯೇ ಧರಣಿನಿತರ ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ನೀಡಿದರು.

ಧರಣಿ ಉಪವಾಸ ಸತ್ಯಾಗ್ರಹ ಸ್ಥಳದಲ್ಲಿ ಇಬ್ಬರು ವೈದ್ಯರು, ಒರ್ವ ನರ್ಸ್‌ ನಿಯೋಜಿಸಲಾಗಿದೆ ಎಂದು ತಹಶೀಲ್ದಾರ್‌ ಪಂಡಿತ ಬಿರಾದಾರ ತಿಳಿಸಿದ್ದಾರೆ.

ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮದ ಪ್ರಕಾರ ವಿದ್ಯುತ್‌ ಉತ್ಪಾದನಾ ಘಟಕ ಕೆಲಸ ಮಾಡುತ್ತಿಲ್ಲ. ಇದರಿಂದ ಸುತ್ತಲಿನ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

Advertisement

ಇಂತಹ ಸನ್ನಿವೇಶದಲ್ಲಿ ಜನರ ಬದುಕು ನರಕಯಾತನೆಯಾಗುತ್ತಿದೆ. ಶಾಸಕರು ಇದರ ಬಗ್ಗೆ ಉನ್ನತ ಮಟ್ಟದ ಅಧಿ ಕಾರಿಗಳೊಂದಿಗೆ ಸಭೆ ನಡೆಸಿ ಘಟಕ ಬಂದ್‌ ಮಾಡಿಸಬೇಕು ಎಂದು ತಾಲೂಕು ಜೆಡಿಎಸ್‌ ಅಧ್ಯಕ್ಷ ರವಿಶಂಕರರೆಡ್ಡಿ ಮುತ್ತಂಗಿ ಆಗ್ರಹಿಸಿದರು.

ಲೂಕು ವಕೀಲರ ಸಂಘದ ಅಧ್ಯಕ್ಷ ಶ್ರೀಮಂತ ಕಟ್ಟಿಮನಿ, ವಾಮನರಾವ ಕೊರವಿ, ಪುರಸಭೆ ಸದಸ್ಯ ಬಸವರಾಜ ಸಿರಸಿ, ಅಮರ ಲೊಡನೊರ, ವಿಜಯ ಶಾಬಾದಿ, ಆರ್‌. ಗಣಪತರಾವ, ಶ್ರೀಕಾಂತ ಜಾನಕಿ, ತುಳಸೀರಾಮ ಪೋಳ, ಪಂಢರಿ ಲೊಡನೊರ, ನಾಗೇಶ ಕಟ್ಟಿ, ಮಾಜೀದ್‌ ಪಟೇಲ್‌, ಹರ್ಷವರ್ಧನ ಮ್ಯಾಕಲ್‌ ಭಾಗವಹಿಸಿದ್ದಾರೆ.

ಸಿಪಿಐ ಎಚ್‌.ಎಂ. ಇಂಗಳೇಶ್ವರ ಮತ್ತು ಪಿಎಸ್‌ಐ ಸಂತೋಷ ರಾಠೊಡ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next