Advertisement

ಜನಸ್ಪಂದನ ಸಭೆಯಲ್ಲಿ ಅಕ್ರಮ ಮರಳು ಸಾಗಾಟ ಸದ್ದು

06:15 PM Dec 23, 2019 | Team Udayavani |

ಚಿಂಚೋಳಿ: ಪೋತಂಗಲ್‌ ಮುಲ್ಲಾಮಾರಿ ಕಾಗಿಣಾ ನದಿಯಿಂದ ರಾತ್ರೋರಾತ್ರಿ 40 ಟನ್‌ ಗಿಂತ ಹೆಚ್ಚು ಅಕ್ರಮ ಮರಳನ್ನು ಲಾರಿ ಮತ್ತು ಟಿಪ್ಪರ್‌ ಮೂಲಕ ಸಾಗಿಸಲಾಗುತ್ತಿದೆ ಎಂದು ಸೇಡಂನ ಕಾಂಗ್ರೆಸ್‌ ಮುಖಂಡ ಮುಕ್ರುಂಖಾನ್‌ ಆಪಾದಿಸಿದರು.

Advertisement

ತಾಲೂಕಿನ ಭಂಟನಳ್ಳಿ ಗ್ರಾಮದಲ್ಲಿ ತಾ.ಪಂ ಅಧಿಕಾರಿಗಳಾದ ಅನೀಲಕುಮಾರ ರಾಠೊಡ, ಮಾಣಿಕಪ್ಪ ಧತ್ತರಗಿ ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಅವರು ಮಾತನಾಡಿದರು.

ಬಡವರ ಹೆಸರಿಗೆ ಮಂಜೂರಿ ಆಗಿರುವ ಮನೆಗಳನ್ನು ಕಟ್ಟಿಕೊಳ್ಳಲು ಉಸುಕು ಸಿಗುತ್ತಿಲ್ಲ. ಆದರೆ ಅಕ್ರಮ ಮರಳು ಸಾಗಾಟ ಮಾತ್ರ ನಿರಾತಂಕವಾಗಿ ಸಾಗುತ್ತಿದೆ. ಇದಕ್ಕಾಗಿ ಕಂದಾಯ ಇಲಾಖೆ, ಸುಲೇಪೇಟ ಠಾಣೆ ಪೊಲೀಸರು ಮಾಮೂಲಿ ಪಡೆಯುತ್ತಿದ್ದಾರೆ ಎಂದು ದೂರಿದರು.

ಪೋತಂಗಲ್‌, ಹಲಕೋಡಾ, ಜಟ್ಟೂರ ಗ್ರಾಮದ ಬಳಿ ಹರಿಯುವ ಮುಲ್ಲಾಮಾರಿ ಕಾಗಿಣಾ ನದಿಯಲ್ಲಿ ರಾಯಲ್ಟಿ ಇಲ್ಲದೇ ಜೆಸಿಬಿ ಯಂತ್ರ ಬಳಸಿ ಕೆಂಪು ಉಸುಕನ್ನು ದಿನನಿತ್ಯ ನೂರಾರು ಟಿಪ್ಪರದಲ್ಲಿ ತುಂಬಿ ಸಾಗಾಟ ಮಾಡಲಾಗುತ್ತಿದೆ. ಆದರೆ ಕಂದಾಯ ಇಲಾಖೆ, ಪೊಲೀಸ್‌ ಇಲಾಖೆ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಹಲಕೋಡಾ ಗ್ರಾಮದಲ್ಲಿ ಬಿಜೆಪಿ
ಕಾರ್ಯಕರ್ತರೇ ಎದುರು ನಿಂತು ಟಿಪ್ಪರ್‌ ತುಂಬಿಸಿ ಕಳುಹಿಸುತ್ತಾರೆ. ಇಂತಹ ದಂಧೆ ಹಗಲು, ರಾತ್ರಿ ನಡೆಯುತ್ತಿದೆ. ಇದಕ್ಕೆ ಕಡಿವಾಣವೇ ಇಲ್ಲವೇ ಎಂದಾಗ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅ ಧಿಕಾರಿಗಳಾದ ವಿರೇಶ, ರಿಯಾಜ ಮಾತನಾಡಿ, ಕೆಆರ್‌ಡಿಸಿಎಲ್‌ ನಿಗಮಕ್ಕೆ ಮತ್ತು ಗುತ್ತಿಗೆದಾರರೊಬ್ಬರಿಗೆ ಲೀಜ್‌
ಮೇಲೆ ನೀಡಲಾಗಿದೆ. ಆದರೆ ಅವರು ಮಾರಾಟ ಮಾಡುವ ವಿಷಯ ಜಿಲ್ಲಾ ನಿರ್ದೇಶಕಿ ಸತ್ಯಭಾಮಾಗೆ ಗೊತ್ತಿದೆ. ನಮಗೇನು ಗೊತ್ತಿಲ್ಲ
ಎಂದು ಉತ್ತರಿಸಿದ್ದಾರೆ. ಆದ್ದರಿಂದ ಇಂತಹ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು ಒತ್ತಾಯಿಸಿದರು.

ಬೆನಕನಳ್ಳಿ ಗ್ರಾಮದಲ್ಲಿ ಎರಡು ಟ್ಯಾಂಕ್‌ ನಿರ್ಮಿಸಲಾಗಿದೆ. ಆದರೆ ಜನರಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಸಿಮೆಂಟ್‌ ರಸ್ತೆಗಳಿಲ್ಲ, ಚರಂಡಿ ಇಲ್ಲ. ಗ್ರಾಮಸ್ಥರು ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಅಧಿಕಾರಿಗಳನ್ನು ಕೇಳಿದರೆ ಹೆದರಿಸುತ್ತಾರೆ. ಜನಸ್ಪಂದನ ಸಭೆ ಇದೆ ಎಂದು ನಾನು ಹುಬ್ಬಳ್ಳಿಯಿಂದ ಇಲ್ಲಿಗೆ ಬಂದಿದ್ದೇನೆ. ನಮ್ಮ ಗ್ರಾಮ ಅಭಿವೃದ್ದಿ ಆಗವುದು ಯಾವಾಗ ಎಂದು ಮಲ್ಲಿಕಾರ್ಜುನ ರಾಯಪ್ಪಗೌಡ ಪ್ರಶ್ನಿಸಿದರು.

Advertisement

ಗ್ರಾಮಕ್ಕೆ ಶಾಲಾ ಕಟ್ಟಡ ಮಂಜೂರಿ ಆಗಿದೆ. ಆದರೆ ಸ್ಥಳ ಅಭಾವದಿಂದ ಕಟ್ಟಲು ಆಗುತ್ತಿಲ್ಲ. ಸರ್ಕಾರವೇ ಜಮೀನು ಖರೀದಿಸಿ, ಶಾಲೆ ಕೋಣೆ ಕಟ್ಟಬೇಕು ಎಂದು ಪರಮೇಶ್ವರ ಗುತ್ತೇದಾರ ಶಿಕ್ಷಣ ಅ ಧಿಕಾರಿಗಳಿಗೆ ತಿಳಿಸಿದರು.

ತಾಲೂಕಿನಲ್ಲಿ 36 ಗ್ರಾ.ಪಂಗಳಿವೆ. ಆದರೆ ಕೇವಲ 18 ಪಿಡಿಒ ಇದ್ದಾರೆ. ಒಬ್ಬರಿಗೆ ಎರಡ್ಮೂರು ಗ್ರಾ.ಪಂಗೆ ನಿಯೋಜಿಸಲಾಗಿದೆ. ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ರೈತರು ತಮ್ಮ ಹೊಲಗಳಲ್ಲಿ ಬದು ನಿರ್ಮಿಸಿಕೊಳ್ಳಬಹುದಾಗಿದೆ ಎಂದು ತಾ.ಪಂ ಅಧಿ ಕಾರಿ ಅನೀಲಕುಮಾರ ರಾಠೊಡ ತಿಳಿಸಿದರು.

ಬೆನಕನಳ್ಳಿ ಗ್ರಾಮದ ಜನರ ಎಲ್ಲ ಉದ್ಯೋಗ ಖಾತ್ರಿ ಕಾರ್ಡುಗಳು ಕೆರೋಳಿ ಗ್ರಾ.ಪಂ ಅಧ್ಯಕ್ಷರ ಬಳಿ ಇವೆ. ಈ ಕುರಿತು ಯಾರಿಗೂ ಮಾಹಿತಿ ಸಿಗುತ್ತಿಲ್ಲ ಎಂದು ರಾಘವೇಂದ್ರ ಗುತ್ತೇದಾರ ಹೇಳಿದರು.
ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಆಗುತ್ತಿದೆ ಕುಡುಕರ ಹಾವಳಿ ಹೆಚ್ಚಾಗಿದ್ದು, ಚಹಾ, ಕಿರಾಣಿ ಅಂಗಡಿಗಳಲ್ಲೂ ಮದ್ಯ ಮಾರಾಟ ಆಗುತ್ತಿದೆ ಎಂದು ಮಹಿಳೆಯರು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಎಇಇ ಹಣಮಂತಪ್ಪ ಪೂಜಾರಿ, ವೈದ್ಯರಾದ ಡಾ|ಜಗದೀಶಚಂದ್ರ ಬುಳ್ಳ, ಮಲ್ಲಿಕಾರ್ಜುನ ಜಾಪಟ್ಟಿ, ಎಇಇ ಪರಮೇಶ್ವರ ಬಿರಾದಾರ, ಕಾಸಿಮ ಪಟೇಲ, ಎಇಇ ಬಸವರಾಜ ನೇಕಾರ, ಎಇಇ ಮಹ್ಮದ ಅಹೆಮದ್‌ ಹುಸೇನ್‌, ತೋಟಗಾರಿಕೆ ಅ ಧಿಕಾರಿ ಅಜೀಮುದ್ದೀನ್‌, ಬಿಸಿಯೂಟ ಅಧಿಕಾರಿ ಕಿಶೋರ ಕುಲಕರ್ಣಿ, ಬಿಸಿಎಂ ಅಧಿ ಕಾರಿ ಶರಣಬಸಪ್ಪ ಪಾಟೀಲ, ಶಾಂತವೀರಯ್ಯ ಮಠಪತಿ, ಸಿಡಿಪಿಒ ಪರಿಮಳ, ತಾ.ಪಂ ಉಪಾಧ್ಯಕ್ಷ ರುದ್ರಶೆಟ್ಟಿ ಪಡಶೆಟ್ಟಿ, ಕುಪನೂರ ಗ್ರಾ.ಪಂ ಅಧ್ಯಕ್ಷೆ ಸತ್ಯಮ್ಮ ಇನ್ನಿತರರಿದ್ದರು. ಪಿಡಿಒ ಬಸವರಾಜ ಸ್ವಾಗತಿಸಿದರು, ಕಂದಾಯ ನಿರೀಕ್ಷಕ ಸುಭಾಶಚಂದ್ರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next