ಚಿಂಚೋಳಿ: ರಾಜ್ಯದಲ್ಲಿಯೇ ಚಿಂಚೋಳಿ ತಾಲೂಕು ಅಭಿವೃದ್ಧಿಯಲ್ಲಿ 4ನೇ ಸ್ಥಾನದಲ್ಲಿದ್ದು, ಗಡಿಭಾಗದ ಕುಂಚಾವರಂ ಗ್ರಾಮವನ್ನು ಮುಖ್ಯಮಂತ್ರಿಗಳ ಆದರ್ಶ ಗ್ರಾಮ ಯೋಜನೆ ಅಡಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಮೂಲಕ ಅಭಿವೃದ್ಧಿ ಗೊಳಿಸಲು ಒಂದು ಕೋಟಿ ರೂ.ಮಂಜೂರಿ ಮಾಡಲಾಗಿದೆ ಎಂದು ಶಾಸಕ ಡಾ| ಉಮೇಶ ಜಾಧವ್ ಹೇಳಿದರು.
ತಾಲೂಕಿನ ಕುಂಚಾವರಂ ಗ್ರಾಪಂ ಕಚೇರಿ ಆವರಣದಲ್ಲಿ ಮಂಗಳವಾರ 2017-18ನೇ ಸಾಲಿನ ಡಾ| ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆ ಅಡಿ ಫಲಾನುಭವಿಗಳಿಗೆ ಮನೆ ಮಂಜೂರಾತಿ ಆದೇಶ ಪತ್ರ ವಿತರಿಸುವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನ.1ರಂದು ಅನೀಲಭಾಗ್ಯ ಯೋಜನೆ ಜಾರಿಗೊಳಿಸಲಿದ್ದಾರೆ. ಇದರಿಂದ ಅನೇಕ ಬಡ ಕುಟುಂಬಗಳ ಜೀವನ ಶೈಲಿ ಬದಲಾಗಲಿದೆ. ಕುಂಚಾವರಂ ಗಡಿಪ್ರದೇಶದ ಅಭಿವೃದ್ಧಿಗೆ ಕಳೆದ ನಾಲ್ಕು ವರ್ಷಗಳಿಂದ ಹಗಲಿರುಳು ಶ್ರಮಿಸಿದ್ದೇನೆ ಎಂದರು. ಕುಂಚಾವರಂ ಗ್ರಾಪಂ ಅಧ್ಯಕ್ಷ ಗೋಪಾಲ ಬಿ., ತಾಪಂ ಸದಸ್ಯ ಚಿರಂಜೀವಿ ಶಿವರಾಮಪುರ, ಉಪಾಧ್ಯಕ್ಷ ಉಮಾಪತಿ ಶಿವರಾಮಪುರ, ನರಸಿಂಹಲು ಸವಾರಿ, ನರಸಿಂಹಲು ಕುಂಬಾರ ಮಾತನಾಡಿದರು. ತಾಪಂ ಅಧ್ಯಕ್ಷೆ ರೇಣುಕಾ ಚವ್ಹಾಣ, ಅನುಸೂಜ ಗೊಲ್ಲ ಇದ್ದರು. ತುಕ್ಕಪ್ಪ ಸ್ವಾಗತಿಸಿದರು,
ರಾಮಕೃಷ್ಣ ನಿರೂಪಿಸಿದರು.