Advertisement

ರೈತರಿಗೆ ಖುಷಿ ತಂದ ಆರಿದ್ರಾ ಮಳೆ

09:46 AM Jun 24, 2019 | Naveen |

ಚಿಂಚೋಳಿ: ಪಟ್ಟಣ ಸೇರಿದಂತೆ ತಾಲೂಕಿನ ಕೆಲವು ಗ್ರಾಮಗಳಲ್ಲಿ ರವಿವಾರ ಮಧ್ಯಾಹ್ನ ಸತತವಾಗಿ ಎರಡು ಗಂಟೆಗಳ ಕಾಲ ಗುಡುಗು ಸಿಡಲಿನ ಅರ್ಭಟದಿಂದ ಕೂಡಿದ ಧಾರಾಕಾರ ಮಳೆಯಾಗಿದ್ದರಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ.

Advertisement

ಪ್ರಸಕ್ತ ಸಾಲಿನ ಜೂನ್‌ ತಿಂಗಳ ಪ್ರಾರಂಭವಾಗಿದ್ದರು ಸಹ ಮಳೆ ಇಲ್ಲದೇ ರೈತರು ಕಂಗಾಲಾಗಿದ್ದರು. ಮುಂಗಾರು ಬಿತ್ತನೆ ಮಾಡದೇ ಮೋಡದತ್ತ ಮುಖ ಮಾಡಿ ಕುಳಿತಿದ್ದ ರೈತನಿಗೆ ರವಿವಾರ ಮಧ್ಯಾಹ್ನ ಸುರಿದ ಧಾರಾಕಾರ ಮಳೆ ಖುಷಿ ತಂದಿದೆ. ಶುಕ್ರವಾರ ರಾತ್ರಿಯಿಡಿ ಸುರಿದ ಸಾಧಾರಣ ಮಳೆಯಿಂದಾಗಿ ತಾಲೂಕಿನ ಕೆಲವು ಗ್ರಾಮ ಮತ್ತು ತಾಂಡಾಗಳಲ್ಲಿ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದರು. ಆದರೆ ರವಿವಾರ ಮಧ್ಯಾಹ್ನ ವ್ಯಾಪಕ ಮಳೆ ಆಗಿದ್ದರಿಂದ ಬಿತ್ತನೆ ಕಾರ್ಯಕ್ಕೆ ಅಡ್ಡಿಯುಂಟಾಗಿದೆ.

ತಾಲೂಕಿನ ಕಲ್ಲೂರಿನಲ್ಲಿ ಭಾರಿ ಮಳೆ ಆಗಿದ್ದರಿಂದ ಪಕ್ಕದಲ್ಲಿ ಹರಿಯುವ ನಾಲಾಕ್ಕೆ ಹೆಚ್ಚಿನ ನೀರು ಹರಿದು ಬಂದಿದೆ. ಅಲ್ಲದೇ ಚಿಂಚೋಳಿ ಪಟ್ಟಣಕ್ಕೆ ಹತ್ತಿರದಲ್ಲಿ ಹರಿಯುವ ಮುಲ್ಲಾಮಾರಿ ನದಿಗೆ ಮಳೆ ನೀರು ಬಂದಿದೆ. ಕಳೆದ ಅನೇಕ ವರ್ಷಗಳಿಂದ ಒಣಗಿ ಹೋಗಿದ್ದ ಮುತ್ತುಲ ನಾಲಾಕ್ಕೆ ಭಾರಿ ಪ್ರಮಾಣದಲ್ಲಿ ಮಳೆ ನೀರು ಹರಿದು ಬಂದಿದೆ. ದಸ್ತಾಪುರ ಹತ್ತಿರ ಹರಿಯುವ ನಾಲಾ ತುಂಬಿ ಹರಿದಿದೆ.

ಎಡೆಬಿಡದೇ ಸುರಿದ ಮಳೆಯಿಂದಾಗಿ ಬಡಿದರ್ಗಾ ಮತ್ತು ಮೋಮಿನಪುರ, ಚೋಟ ದರ್ಗಾದಲ್ಲಿರುವ ಚರಂಡಿ ನೀರು ಕೆಲವು ಮನೆಗಳಿಗೆ ನುಗ್ಗಿದೆ ಎಂದು ಬಡಿದರ್ಗಾದ ಹಸೇನ್‌ ಹಾಶ್ಮಿ ತಿಳಿಸಿದ್ದಾರೆ. ಚಿಮ್ಮಾಇದಲಾಯಿ, ಸುಲೇಪೇಟ, ಐನೋಳಿ, ಸಾಲೇಬೀರನಳ್ಳಿ, ಅಣವಾರ, ಕೋಡ್ಲಿ, ರಟಕಲ್, ಐನಾಪುರ, ಚಿಮ್ಮನಚೋಡ, ಕನಕಪುರ, ಹಸರಗುಂಡಗಿ, ಮಿರಿಯಾಣ, ಶಾದಿಗಡಿಕೇಶ್ವರ, ನಿಡಗುಂದಾ, ಶಿರೋಳಿ, ಹೊಡೇಬೀರನಳ್ಳಿ, ಕೊರವಿ, ಕುಡಹಳ್ಳಿ, ನಾವದಗಿ, ಚಂದನಕೇರಾ, ರಾಣಾಪುರ, ನರನಾಳದಲ್ಲಿ ವ್ಯಾಪಕ ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next