ಚಿಂಚೋಳಿ: ಆಕ್ಸಿಜನ್ ಪ್ಲಾಂಟ್ ನಲ್ಲಿ ಆಕ್ಸಿಜನ್ ಸೋರಿಕೆಯಾದ ಘಟನೆ ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಜು.7ರ ಭಾನುವಾರ ಮುಂಜಾನೆ ಸಂಭವಿಸಿದೆ.
ಈ ಪರಿಣಾಮವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಲ್ಲಾ ಒಳರೋಗಿ ಹಾಗೂ ಹೊರರೋಗಿಗಳನ್ನು ಹೊರ ಹಾಕಲಾಗಿದೆ. ಕರ್ತವ್ಯದಲ್ಲಿದ್ದ ಎಲ್ಲಾ ಆರೋಗ್ಯ ಸಹಾಯಕಿಯರನ್ನು ಹೊರ ಹಾಕಲಾಯಿತು.
ಆಕ್ಸಿಜನ್ ಸೋರಿಕೆಯಾದ ಸುದ್ದಿ ತಿಳಿಯುತ್ತಿದ್ದಂತೆ ಅನೇಕರು ಭಯ ಭೀತರಾಗಿ ಜೀವದ ಭಯದಿಂದ ಹೊರಗೆ ಓಡಿ ಬಂದಿದ್ದಾರೆ.
2020 ರಲ್ಲಿ ಕೊವಿಡ್ ರೋಗಿಗಳಿಗೆ ಆಕ್ಸಿಜನ್ ವ್ಯವಸ್ಥೆ ಮಾಡುವುದಕ್ಕೆ ರಾಜ್ಯದಲ್ಲೇ ಮೊದಲ ಆಕ್ಸಿಜನ್ ಪ್ಲಾಂಟ್ ಇದಾಗಿದೆ. ಆದರೆ ಆಕ್ಸಿಜನ್ ಪ್ಲಾಂಟ್ ನಲ್ಲಿ ಸೋರಿಕೆಯಾದ ಕಾರಣದಿಂದ ವಸತಿ ಗೃಹದಲ್ಲಿರುವ ಎಲ್ಲಾ ಮಹಿಳೆಯರು, ಮಕ್ಕಳಿಗೆ ವೃದ್ದರಿಗೆ ದೂರ ಹೋಗಲು ಆಸ್ಪತ್ರೆಯ ಡಾ.ಸಂತೋಷ್ ಪಾಟೀಲ ಸೂಚನೆ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಗಮನ ಹರಿಸುತ್ತಿದ್ದಾರೆ. ಸದ್ಯ ಆಸ್ಪತ್ರೆಯ ಸುತ್ತಲಿನ ಪ್ರದೇಶದಲ್ಲಿರುವ ಜನರು ಭಯ ವಾತಾವರಣದಲ್ಲಿ ಇದ್ದಾರೆ.
ಪೋಲಿಸರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.