ಚಿಂಚೋಳಿ( ಕಲಬುರಗಿ): ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ರೈತ ಸಂಪರ್ಕ ಕೇಂದ್ರದ ಮುಂದೆ ರೈತರು ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಲು ವಿವಿಧ ಗ್ರಾಮಗಳಿಂದ ಮಂಗಳವಾರ ಮಧ್ಯರಾತ್ರಿಯಿಂದಲೇ ರೈತ ಸಂಪರ್ಕ ಕೇಂದ್ರಕ್ಕೆ ಆಗಮಿಸಿದರು.
ತಾಲ್ಲೂಕಿನ ಕುಂಚಾವರಮ ವೆಂಕಟಾಪೂರ ಶಾದಿಪೂರ್ ಸಂಗಾಪೂರ ತಾಂಡಾಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ರೈತರು ಮತ್ತು ರೈತರು ರೈತಸಂಪರ್ಕ ರೈತ ಸಂಪರ್ಕಕ್ಕೆ ಆಗಮಿಸಿದರು.
ಅದರೆ ರೈತ ಸಂಪರ್ಕ ಕೇಂದ್ರಗಳಲ್ಲಿ ವಿದ್ಯುತ್ ಸಂಪರ್ಕದ ಕೊರತೆಯಿಂದಾಗಿ ಮತ್ತು ಕಂಪ್ಯೂಟರ್ ಸ್ಥಗಿತಗೊಂಡಿದ್ದು ಕೃಷಿ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆಯಿಂದಾಗಿ ರೈತರಿಗೆ ಟೋಕನ್ ಕೊಡುವುದರಲ್ಲಿ ತೊಂದರೆ ಪಡಬೇಕಾಯಿತು.
ರೈತ ಸಂಪರ್ಕ ಕೇಂದ್ರದಲ್ಲಿ ದೂರದಿಂದ ಬಂದಂತಹ ರೈತರಿಗೆ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಇಲ್ಲದ ಕಾರಣ ರೈತರು ಸುಡು ಬಿಸಿಲಿನಲ್ಲಿ ಪರದಾಡುವಂತಾಯಿತು. ಕೆಲವರು ಮಧ್ಯರಾತ್ರಿಯಿಂದಲೇ ತಮ್ಮ ಮನೆಯಲ್ಲಿ ಮದುವೆ ಸಮಾರಂಭಗಳನ್ನು ಬಿಟ್ಟು ಬೀಜ ಪಡೆದುಕೊಳ್ಳುವುದಾಗಿ ನೋಂದಣಿಗಾಗಿ ಆಗಮಿಸಿದರು. ಕೆಲ ರೈತರು ಊಟ ಇಲ್ಲದೆ ಪರದಾಡಬೇಕಾಯಿತು. ರೈತ ಸಂಪರ್ಕ ಕೇಂದ್ರದ ಮುಂದೆ ಮಲಗಬೇಕಾದರೆ ಕತ್ತಲು ಇರುವುದರಿಂದ ರೈತರು ತುಂಬಾ ಭಯ ಬರಬೇಕಾಯಿತೆಂದು ಮಾಣಿಕ್ ಜಾಧವ್, ಶಂಕರ್ ಜಾಧವ್ , ಕಿಶನ್ ರಾತೊಡ, ರಮೇಶ್ ಪವಾರ್ ತಿಳಿಸಿದ್ದಾರೆ .