Advertisement

20 ಕ್ವಿಂಟಲ್‌ ತೊಗರಿ ಖರೀದಿಗೆ ಆಗ್ರಹ

04:28 PM Feb 19, 2020 | Team Udayavani |

ಚಿಂಚೋಳಿ: ಮುಖ್ಯಮಂತ್ರಿಗಳು ಬೀದರ್‌ದಲ್ಲಿ ನಡೆದ ರಾಜ್ಯಮಟ್ಟದ ಪಶು ಸಮ್ಮೇಳನದಲ್ಲಿ ಘೋಷಿಸಿರುವಂತೆ ಪ್ರತಿಯೊಬ್ಬ ರೈತನಿಂದ 20 ಕ್ವಿಂಟಲ್‌ ತೊಗರಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ತಾಲೂಕು ಜೆಡಿಎಸ್‌ ಮುಖಂಡರು ಒತ್ತಾಯಿಸಿ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

Advertisement

ತಹಶೀಲ್ದಾರ್‌ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದ ಜೆಡಿಎಸ್‌ ಮತ್ತು ಸಿಪಿಐ (ಎಂ) ಕಾರ್ಯಕರ್ತರು ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ರೈತರು ಸಾಕಷ್ಟು ಪ್ರಮಾಣದಲ್ಲಿ ತೊಗರಿ ಬೆಳೆದಿದ್ದಾರೆ. ಈಗಾಗಲೇ ಕೆಲವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ತೊಗರಿ ಖರೀದಿ ಕೇಂದ್ರಗಳಲ್ಲಿ ತೊಗರಿ ಖರೀದಿ ವ್ಯಾಪಾರ ವಹಿವಾಟು ನಡೆಯುತ್ತಿದೆ. ಆದರೆ ಸದ್ಯ ಪ್ರತಿಯೊಬ್ಬ ರೈತನಿಂದ ಕೇವಲ 10 ಕ್ವಿಂಟಲ್‌ ಮಾತ್ರ ಖರೀದಿಸಲಾಗುತ್ತಿದೆ.

ಮುಖ್ಯಮಂತ್ರಿಗಳು ಘೋಷಣೆ ಮಾಡಿದ ಹಾಗೆ ಪ್ರತಿಯೊಬ್ಬ ರೈತನಿಂದ ಸದ್ಯ 20 ಕ್ವಿಂಟಲ್‌ ಖರೀದಿಸುತ್ತಿಲ್ಲವೆಂದು ಸರಕಾರದ ಆಕ್ರೋಶ ವ್ಯಕ್ತಡಪಡಿಸಿದರು. ತಾಲೂಕಿನ ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆ ಮುಖ್ಯಕಾಲುವೆ ಆಧುನಿಕರಣ ಕಾಮಗಾರಿ ಮತ್ತು ಯೋಜನೆ ಪುರ್ನವಸತಿ ಕೇಂದ್ರಗಳಲ್ಲಿ ಕೈಗೊಂಡಿರುವ ಮೂಲಭೂತ ಸೌಕರ್ಯಗಳ ಕಾಮಗಾರಿಗಳು ಸಂಪೂರ್ಣ ಕಳಪೆಮಟ್ಟದ್ದಾಗಿವೆ. ಇವುಗಳ ತನಿಖೆ ನಡೆಸಬೇಕೆಂದು ಅಗ್ರಹಿಸಿದರು.

ನಂತರ ತಹಶೀಲ್ದಾರ್‌ ಅರುಣಕುಮಾರ ಕುಲಕರ್ಣಿ, ತಾ.ಪಂ ಯೋಜನಾಧಿಕಾರಿ ಶಂಕರ ರಾಠೊಡಗೆ ಸಲ್ಲಿಸಿದರು. ತಾಲೂಕು ಜೆಡಿಎಸ್‌ ಅಧ್ಯಕ್ಷ ರವಿಶಂಕರರೆಡ್ಡಿ ಮುತ್ತಂಗಿ, ಶರಣಬಸಪ್ಪ ಮಮಶೆಟ್ಟಿ, ಜಿಲ್ಲಾಧ್ಯಕ್ಷ ಮೌಲಾ ಮುಲ್ಲಾ, ಭೀಮಶೆಟ್ಟಿ ಎಂಪಳ್ಳಿ, ಜಾಫರಖಾನ್‌, ಪುರಸಭೆ ಸದಸ್ಯ ನಾಗೀಂದ್ರಪ್ಪ ಗುರಂಪಳ್ಳಿ, ವಾಮನರಾವ್‌ ಕೊರವಿ, ಎಸ್‌.ಕೆ.
ಮುಕ್ತಾರ ಇನ್ನಿತರರಿದ್ದರು .

Advertisement

Udayavani is now on Telegram. Click here to join our channel and stay updated with the latest news.

Next