Advertisement

3 ಗ್ರಾಮ ಸೀಲ್‌ಡೌನ್‌: ತಹಶೀಲ್ದಾರ್‌ ಭೇಟಿ

12:23 PM Jul 09, 2020 | Naveen |

ಚಿಂಚೋಳಿ: ತಾಲೂಕಿನ ಐನಾಪುರ, ಕುಂಚಾವರಂ, ಭೋಗಾಲಿಂಗದಳ್ಳಿ ಗ್ರಾಮಗಳನ್ನು ಸಂಪೂರ್ಣವಾಗಿ ಸೀಲ್‌ಡೌನ್‌ ಮಾಡಲಾಗಿದೆ. ಜನರಿಗೆ ಮನೆ ಬಿಟ್ಟು ಅನಾವಶ್ಯಕವಾಗಿ ಹೊರಗಡೆ ತಿರುಗಾಡದಂತೆ ಎಚ್ಚರಿಕೆಯಿಂದ ಇರಬೇಕೆಂದು ಮಾಹಿತಿ ನೀಡಲಾಗಿದೆ ಎಂದು ತಹಶೀಲ್ದಾರ್‌ ಅರುಣಕುಮಾರ ಕುಲಕರ್ಣಿ ತಿಳಿಸಿದ್ದಾರೆ.

Advertisement

ತಾಲೂಕಿನ ಐನಾಪುರ ಗ್ರಾಮದಲ್ಲಿ 9 ಜನರಲ್ಲಿ ಕೋವಿಡ್‌ ಪ್ರಕರಣ ಕಾಣಿಸಿಕೊಂಡಿರುವುದರಿಂದ ಗ್ರಾಮದಲ್ಲಿ ಸೂಕ್ತ ಕ್ರಮ ಕೈಕೊಳ್ಳಲಾಗಿದೆ. ಗ್ರಾಮದ ಜನರು ಅನಾವಶ್ಯಕವಾಗಿ ಹೊರಗಡೆ ತಿರುಗಾಡದಂತೆ ಎಚ್ಚರಿಕೆ ನೀಡಲಾಗಿದೆ. ಗಡಿ ಪ್ರದೇಶ ಕುಂಚಾವರಂ ಗ್ರಾಮದಲ್ಲಿ ಮೂವರಿಗೆ ಕೋವಿಡ್‌ ಪಾಸಿಟಿವ್‌ ಪ್ರಕರಣ ಕಂಡು ಬಂದಿರುವುದರಿಂದ ಅಲ್ಲಿಯೂ ಸಹ ಸೀಲ್‌ಡೌನ್‌ ಮಾಡಲಾಗಿದೆ. ಭೋಗಾಲಿಂಗದಳ್ಳಿ ಮತ್ತು ಕುಪನೂರ ಗ್ರಾಮದಲ್ಲಿ ಒಂದೊಂದು ಕೊರೊನಾ ಪಾಸಿಟಿವ್‌ ಪ್ರಕರಣ ಕಾಣಿಸಿಕೊಂಡಿರುವುದರಿಂದ ಸೀಲ್‌ಡೌನ್‌ ಮಾಡಿ ಜನರಲ್ಲಿ ಜಾಗೃತಿಯನ್ನುಂಟು ಮಾಡಲಾಗಿದೆ.

ಆದರ್ಶ ವಿದ್ಯಾಲಯ ಪೋಲಕಪಳ್ಳಿ, ಶಾದಿಪುರ ಹೈಸ್ಕೂಲ್‌, ನಿಡಗುಂದಾ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕ್ವಾರಂಟೈನ್‌ ಕೇಂದ್ರಗಳಲ್ಲಿ ಒಟ್ಟು 53 ಜನರಿದ್ದಾರೆ ಎಂದು ತಹಶೀಲ್ದಾರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next