ಚಿಂಚೋಳಿ: ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಕುರಿತು ರಾಜ್ಯ ಚುನಾವಣಾ ಆಯೋಗ ಪಟ್ಟಿ ಪ್ರಟಿಸುವ ಮುನ್ನವೇ ಆಪರೇಶನ್ ಕಮಲದ ಭೀತಿಯಿಂದ ಕಾಂಗ್ರೆಸ್ ಪಕ್ಷದ ಪುರಸಭೆ ಚುನಾಯಿತ ಸದಸ್ಯರೆಲ್ಲ ಒಟ್ಟಾಗಿ ತೆಲಂಗಾಣಕ್ಕೆ ಪ್ರವಾಸಕ್ಕೆ ತೆರಳಿದ್ದಾರೆ ಎನ್ನಲಾಗಿದೆ.
Advertisement
ಪುರಸಭೆಯ 23 ಸ್ಥಾನಗಳಿಗೆ ಕಳೆದ 2018 ಸೆ.3ರಂದು ಚುನಾವಣೆ ನಡೆದಿತ್ತು. ಚುನಾವಣೆಯಲ್ಲಿ 12 ಕಾಂಗ್ರೆಸ್, ಐವರು ಬಿಜೆಪಿ, ಒಬ್ಬರು ಜೆಡಿಎಸ್, ಒಬ್ಬರು ಬಿಎಸ್‌ಪಿ, ನಾಲ್ವರು ಪಕ್ಷೇತರರು ಗೆಲುವು ಸಾ ಧಿಸಿದ್ದರು. ಆಗ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ರಾಜ್ಯ ಚುನಾವಣೆ ಆಯೋಗ ಪುರಸಭೆ ಅಧ್ಯಕ್ಷ ಬಿಸಿಎ ಮತ್ತು ಬಿಸಿಬಿ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಘೋಷಣೆ ಮಾಡಿತ್ತು. ಆದರೆ ಮೀಸಲಾತಿಯಲ್ಲಿ ಆಗಿರುವ ಅನ್ಯಾಯ ಸರಿಪಡಿಸುವುದಕ್ಕಾಗಿ ಕೆಲವರು ನ್ಯಾಯಾಲಯಕ್ಕೆ ಮೊರೆ ಹೋಗಿದ್ದರಿಂದ ಕಳೆದ 15 ತಿಂಗಳಿಂದ ಇನ್ನುವರೆಗೆ ಯಾವುದೇ ಮೀಸಲಾಗಿ ಪ್ರಕಟವಾಗಿಲ್ಲ.
ಆಪರೇಶನ್ ಕಮಲ ಭೀತಿಯಿಂದ ಶುಕ್ರವಾರ ಸಂಜೆ ಪ್ರವಾಸಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಚಿಂಚೋಳಿ ಮೀಸಲು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪುರಸಭೆ ಸದಸ್ಯರು ತೆರೆಮರೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿ ಪ್ರಚಾರ ನಡೆಸಿದ್ದರಿಂದ ವಾರ್ಡ್ 21 ಕಾಂಗ್ರೆಸ್ ಪಕ್ಷದ ಪುರಸಭೆ ಸದಸ್ಯೆ ಸವಿತಾಬಾಯಿ ರಾಜು ಪವಾರ ಬಿಜೆಪಿಗೆ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಅವರ ಪತಿ ರಾಜು ಪವಾರ ಬಿಜೆಪಿ ಪರ ಚುನಾವಣೆ ಪ್ರಚಾರ ನಡೆಸಿದ್ದರಿಂದ ಅವರು ಬಿಜೆಪಿಗೆ ಹೋಗುವುದು ಖಚಿತವಾಗಿದೆ. ಆದರೆ ಕಾಂಗ್ರೆಸ್ ಎಲ್ಲ ಸದಸ್ಯರಿಗೆ ವಿಪ್ ಜಾರಿ ಮಾಡುವ ಸಾಧ್ಯತೆ ಇದೆ ಪುರಸಭೆ ಪಕ್ಷೇತರ ಸದಸ್ಯರಾದ ಆನಂದ ಟೈಗರ್, ಬಸವರಾಜ ಶಿರಸಿ, ರಾಧಾಬಾಯಿ ವಲಗಿರಿ, ಭೀಮರಾವ್ ಸುಬ್ಬಣ್ಣ ರಾಠೊಡ ಅವರನ್ನು ಬಿಜೆಪಿಯತ್ತ ಸೆಳೆಯಲು ತೆರೆಮರೆಯಲ್ಲಿ ಕಸರಸ್ತು ನಡೆಸುತ್ತಿದೆ. ಅಲ್ಲದೇ ಜೆಡಿಎಸ್ ಸದಸ್ಯನಾಗೀಂದ್ರಪ್ಪ ಗುರಂಪಳ್ಳಿ, ಬಿಎಸ್‌ಪಿ
ಸದಸ್ಯ ಸುಶೀಲಕುಮಾರ ಬೊಮ್ಮನಳ್ಳಿ ಅವರನ್ನು ಬಿಜೆಪಿ ಮುಖಂಡರು ಭೇಟಿ ಮಾಡಿ ಬಿಜೆಪಿಗೆ ಬೆಂಬಲ ಸೂಚಿಸುವಂತೆ ಮನವೊಲಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಪಕ್ಷೇತರ, ಜೆಡಿಎಸ್ ಮತ್ತು ಬಿಎಸ್‌ಪಿ ಪುರಸಭೆ ಸದಸ್ಯರು ಬಿಜೆಪಿಗೆ ಬೆಂಬಲಿಸುವ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎನ್ನಲಾಗಿದೆ.
Related Articles
Advertisement